ಉಪ್ಪಿನಂಗಡಿ | ಹಿರೇಬಂಡಾಡಿಯಲ್ಲಿ ಕಾಡಾನೆ ಪ್ರತ್ಯಕ್ಷ: ಸ್ಥಳೀಯರಲ್ಲಿ ಆತಂಕ

Update: 2024-12-25 08:16 GMT

ಉಪ್ಪಿನಂಗಡಿ: ಉಪ್ಪಿನಂಗಡಿ ಮತ್ತು ಹಿರೇಬಂಡಾಡಿ ಮಧ್ಯೆ ಕುಮಾರಧಾರಾ ನದಿ ತಟದಲ್ಲಿ ಕಾಡಾನೆ ಕಾಣಿಸಿಕೊಂಡಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

ಹಿರೇಬoಡಾಡಿ ಸಮೀಪದ ಆಕಿರೆ ಗ್ರಾಮದ ಹಲವು ತೋಟಗಳಲ್ಲಿ ಕಾಡಾನೆಯ ಹೆಜ್ಜೆ ಗುರುತುಗಳು ಕoಡುಬಂದಿದೆ. ಇಲ್ಲಿನ ಪ್ರಕಾಶ್, ಸಾಲಿಹ್ ಎoಬವರ ತೋಟಕ್ಕೆ ಕಾಡಾನೆ ಕಳೆದ ರಾತ್ರಿ ನುಗ್ಗಿದ್ದು, ಕೆಲವು ಬಾಳೆಗಿಡಗಳನ್ನು ಧ್ವಂಸಗೊಳಿಸಿದೆ.

ಹಿರೇಬಂಡಾಡಿ, ಅಡೇಕಲ್ ಪರಿಸರದಲ್ಲಿ ಕಾಡಾನೆ ಪ್ರತ್ಯಕ್ಷಗೊಂಡಿರುವ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾಡಾನೆ ಹಾವಳಿಯಿಂದ ಭಯಭೀತರಾಗಿರುವ ಗ್ರಾಮಸ್ಥರು, ಅವುಗಳನ್ನು ಓಡಿಸಲು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News