ವಿಟಿಯು ಅಂತರ್‌ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಶಿಪ್ : ಸಹ್ಯಾದ್ರಿ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಮಂಗಳೂರು, ಮಾ.19: ಶಿವಮೊಗ್ಗದ ಜೆಎನ್‌ಎನ್ಸಿಇಯಲ್ಲಿ ಮಾರ್ಚ್ 15 ರಿಂದ 18 ರವರೆಗೆ ನಡೆದ ವಿಟಿಯು 26ನೇ ಅಂತರ್-ಕಾಲೇಜು ರಾಜ್ಯ ಮಟ್ಟದ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ ನಲ್ಲಿ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್ಮೆಂಟ್ ಕಾಲೇಜು ತಂಡ ಸಮಗ್ರ ಪ್ರಶಸ್ತಿಯನ್ನು ಜಯಿಸಿದೆ.
ಸಹ್ಯಾದ್ರಿ ಅಥ್ಲೆಟಿಕ್ ತಂಡವು 104 ಅಂಕಗಳೊಂದಿಗೆ 8 ನೇ ಬಾರಿಗೆ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿತು. ಒಟ್ಟು 126 ಕಾಲೇಜುಗಳಿಂದ ಒಟ್ಟು 1,434 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.
ಸಹ್ಯಾದ್ರಿ ಕಾಲೇಜು 8 ಬಾರಿ ಓವರ್ ಆಲ್ ಚಾಂಪಿಯನ್ 5 ರನ್ನರ್ಸ್ ಹಾಗೂ 3ನೇ ಬಾರಿ 4 ನೇ ಸ್ಥಾನ ಪಡೆದಿದೆ.
ಮಹಿಳೆಯರ ವಿಭಾಗ:ಅಕ್ಷ ಕೆ ಬಿ 400 ಮೀಟರ್ ಹರ್ಡಲ್ಸ್‌ನಲ್ಲಿ 3 ನೇ ಸ್ಥಾನ, ಪಲ್ಲವಿ ಜೆಎಸ್ ಲಾಂಗ್ ಜಂಪ್‌ನಲ್ಲಿ 2 ನೇ ಸ್ಥಾನ , ಸಾನಿಯಾ ಶೆಟ್ಟಿ 800 ಮೀಟರ್ ಓಟದಲ್ಲಿ 2 ನೇ ಸ್ಥಾನ , ಪಲ್ಲವಿ ಜೆ ಎಸ್ ಟ್ರಿಪಲ್ ಜಂಪ್‌ನಲ್ಲಿ 2 ನೇ ಸ್ಥಾನ , ಪ್ರಾಂಜಲಿ ಎ ಡಿಸ್ಕಸ್ ಥ್ರೋನಲ್ಲಿ 2 ನೇ ಸ್ಥಾನ , ಪ್ರಾಂಜಲಿ ಎ ಶಾಟ್ ಪುಟ್‌ನಲ್ಲಿ 1 ನೇ ಸ್ಥಾನ, 20 ಕಿಮೀ ನಡಿಗೆ ಓಟ ಚಶ್ಮಿತಾ 2 ನೇ ಸ್ಥಾನ, ಸಾಹಿತ್ಯ 3 ನೇ ಸ್ಥಾನ, ಸಾನ್ವಿ ರೈ 400 ಮೀಟರ್ ಓಟದಲ್ಲಿ 2 ನೇ ಸ್ಥಾನ , ಸಾನಿಯಾ ಶೆಟ್ಟಿ 1500 ಮೀಟರ್ ಓಟದಲ್ಲಿ 2 ನೇ ಸ್ಥಾನ , ಗೌತಮಿ ಹೆಪ್ಟಾಥ್ಲಾನ್‌ನಲ್ಲಿ 1 ನೇ ಸ್ಥಾನ, ಗೌತಮಿ ಪೋಲ್‌ವಾಲ್ಟ್‌ನಲ್ಲಿ 2 ನೇ ಸ್ಥಾನ,ಮಹಿಳೆಯರ 4*100 ಮೀಟರ್ಸ್ ರಿಲೇ ತಂಡ ಪ್ರಥಮ ಸ್ಥಾನ - ಶ್ರೀಯಾ ಎಲ್ ಸಾಲಿಯಾನ್, ಗೌತಮಿ ಎಂ ಎನ್, ಕುಶಿ ರೈ ಮತ್ತು ಪಲ್ಲವಿ ಜೆ ಎಸ್, 4*400 ಮೀಟರ್ ಮಿಶ್ರ ರಿಲೇ 1 ನೇ ಸ್ಥಾನ - ಸಾನಿಯಾ ಶೆಟ್ಟಿ, ಸಾನ್ವಿ ರೈ, ಕಾರ್ತಿಕ್ ಪಿ ಮತ್ತು ಮನ್ವಿತ್ ಯು 4*400 ಮೀಟರ್ಸ್ ರಿಲೇ 1ನೇ ಸ್ಥಾನ - ಸಾನ್ವಿ ರೈ, ಸಾನಿಯಾ ಶೆಟ್ಟಿ, ವಿಭಾ ಬಿಕೆ ಮತ್ತು ಅಕ್ಷ.
ಪುರುಷರ ವಿಭಾಗ: ಕೀರ್ತನ್ ಆರ್ ಶೆಟ್ಟಿ 400 ಮೀಟರ್ ಹರ್ಡಲ್ಸ್ (ಪುರುಷರು) ನಲ್ಲಿ 3 ನೇ ಸ್ಥಾನ, ಕಾರ್ತಿಕ್ ಪಿ 800 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ಮಾನ್ವಿತ್ ಯು 800 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ , ಪ್ರವಿತ್ 20 ಕಿ.ಮೀ ನಡಿಗೆ ಓಟದಲ್ಲಿ ದ್ವಿತೀಯ ಸ್ಥಾನ ,ಮಾನ್ವಿತ್ ಯು 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ, ಪ್ರಣಯ್ ಶೆಟ್ಟಿ 400 ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ , ಕಾರ್ತಿಕ್ ಪಿ 1500 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ , 4*400 ಮೀಟರ್ ಮಿಶ್ರ ರಿಲೇ 1 ನೇ ಸ್ಥಾನ - ಸಾನಿಯಾ ಶೆಟ್ಟಿ, ಸಾನ್ವಿ ರೈ ಕಾರ್ತಿಕ್ ಪಿ ಮತ್ತು ಮಾನ್ವಿತ್, ಪುರುಷರ 4*400 ಮೀಟರ್ ರಿಲೇ 1 ನೇ ಸ್ಥಾನ - ಕೀರ್ತನ್ ಶೆಟ್ಟಿ, ಮಾನ್ವಿತ್ ಯು, ಕಾರ್ತಿಕ್ ಎಸ್ ಮತ್ತು ಮಾನ್ವಿತ್. ಕ್ರೀಡಾಕೂಟದಲ್ಲಿ ವಿಜೇತರಾದ ಕಾಲೇಜಿನ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಡಾ. ಮಂಜುನಾಥ ಭಂಡಾರಿ ಅಭಿನಂದಿಸಿದ್ದಾರೆ.