ಗುರುಪುರ: ಮನೆಯಿಂದ ಚಿನ್ನಾಭರಣ ಕಳವು
Update: 2025-03-20 21:21 IST

ಸಾಂದರ್ಭಿಕ ಚಿತ್ರ
ಮಂಗಳೂರು, ಮಾ.20: ಗುರುಪುರದ ಹಳೆಯ ಶಾಲೆಯ ಹಿಂಬದಿಯ ಮಾಣಿಬೆಟ್ಟುವಿನ ಗುರುಪುರ ಪೊಳಲಿ ದ್ವಾರದ ಎದುರಿನ ಮನೆಯೊಂದರ ಬೀಗ ಮುರಿದು ಲಕ್ಷಾಂತರ ರೂ ಮೌಲ್ಯದ ನಗದು, ಚಿನ್ನ ಮತ್ತು ಬೆಳ್ಳಿ ಕಳವುಗೈದ ಘಟನೆ ನಡೆದಿದೆ.
ಗುಲಾಬಿ ಎಂಬವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದ ವೇಳೆ ನುಗ್ಗಿರುವ ಕಳ್ಳರು ಕಪಾಟು ಮತ್ತಿತರ ಸೊತ್ತುಗಳನ್ನು ತಡಕಾಡಿ ಬೀರುವಿನಲ್ಲಿದ್ದ ಅಂದಾಜು 2.5 ಲಕ್ಷ ರೂ. ನಗದು, 10 ಪವನ್ ಚಿನ್ನ ಹಾಗೂ 20 ಬೆಳ್ಳಿ ನಾಣ್ಯ (ಕಾಯಿನ್) ದರೋಡೆಗೈದಿದ್ದಾರೆ. ಘಟನೆ ಬಗ್ಗೆ ಗುಲಾಬಿಯ ಪುತ್ರಿ ವಿಜಯಾ ಎಂಬಾಕೆ ಬಜ್ಪೆಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.