ವಿಶ್ವ ಬಂಟ ಪ್ರತಿಷ್ಠಾನದಿಂದ ವಿದ್ಯಾರ್ಥಿ ವೇತನ ವಿತರಣೆ
Update: 2025-03-21 22:11 IST

ಮಂಗಳೂರು, ಮಾ.21: ವಿಶ್ವ ಬಂಟ ಪ್ರತಿಷ್ಠಾನದಿಂದ 2024-25ನೇ ಸಾಲಿನ ವಿದ್ಯಾರ್ಥಿ ವೇತನ ಹಾಗೂ ಬಡ್ಡಿ ರಹಿತ ಶೈಕ್ಷಣಿಕ ಸಾಲ ವಿತರಣಾ ಕಾರ್ಯಕ್ರಮವು ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.
165 ವಿದ್ಯಾರ್ಥಿಗಳಿಗೆ 36.70 ಲಕ್ಷ ರೂ.ವಿದ್ಯಾರ್ಥಿ ವೇತನ ಹಾಗೂ ಬಡ್ಡಿ ರಹಿತ ಶೈಕ್ಷಣಿಕ ಸಾಲ ನೀಡ ಲಾಯಿತು. ವಿದ್ಯಾರ್ಥಿ ದತ್ತಿ ನಿಧಿಯಿಂದ ಪ್ರಸಕ್ತ ಸಾಲಿನಲ್ಲಿ 9 ವಿದ್ಯಾರ್ಥಿಗಳಿಗೆ 1.75 ಲಕ್ಷ ರೂ. ನೀಡಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಶೆಟ್ಟಿ, ಖಜಾಂಜಿ ಸಿಎ ಸುದೇಶ್ ಕುಮಾರ್ ರೈ.ಬಿ., ಯೋಜನಾ ನಿರ್ದೇಶಕ ಡಾ. ಸಂಜೀವ ಬಿ.ರೈ, ಜೈರಾಜ್ ಬಿ.ರೈ, ರಾಮಕೃಷ್ಣ ಮಾಣಾ, ಬೂಡಿಯಾರ್ ರಾಧಾಕೃಷ್ಣ ರೈ, ಚಂದ್ರಶೇಖರ ಭಂಡಾರಿ, ಡಾ.ಪ್ರಶಾಂತ್ ಕುಮಾರ್ ರೈ, ಬಲರಾಜ್ ರೈ, ಜ್ಯೋತಿ ಆಳ್ವ, ಶಂಕರಿ ರೈ, ವರಲಕ್ಷ್ಮಿ ಮಲ್ಲಿ ಉಪಸ್ಥಿತರಿದ್ದರು.