ಯುವಶಕ್ತಿ ರಚನಾತ್ಮಕ ಕಾರ್ಯಗಳಿಗೆ ಬಳಕೆಯಾದರೆ ದೇಶದ ಪ್ರಗತಿ: ಪ್ರೊ. ದಯಾನಂದ ನಾಯಕ್

ಮಂಗಳೂರು: ರಾಷ್ಟ್ರ ನಿರ್ಮಾಣ ಪ್ರತಿಯೊಬ್ಬ ವಿದ್ಯಾರ್ಥಿ,ಯುವ ಜನರ ಪಾತ್ರ ಮಹತ್ವದ್ದಾಗಿದೆ. ಯುವಶಕ್ತಿ ರಚನಾತ್ಮಕ ಕಾರ್ಯ ಗಳಿಗೆ ಬಳಕೆಯಾದರೆ ದೇಶದ ಪ್ರಗತಿ ಸಾಧ್ಯ ಎಂದು ಮಂಗಳೂರು ವಿ.ವಿ.ಯ ರಾಜ್ಯಶಾಸ್ತ್ರ ಉಪನ್ಯಾಸಕ ಪ್ರೊ.ದಯಾನಂದ ನಾಯಕ್ ಹೇಳಿದರು.
ಕೇಂದ್ರದ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವಕೇಂದ್ರ ಸಂಘಟನ್, ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿ.ವಿ. ಹಾಗೂ ಸೈಂಟ್ ಆಗ್ನೆಸ್ ಕಾಲೇಜು ವತಿಯಿಂದ ಆಗ್ನೆಸ್ ಕಾಲೇಜಿನಲ್ಲಿ ನಡೆದ ಎರಡು ದಿನಗಳ ವಿಕಸಿತ ಭಾರತ್ ಯೂತ್ ಪಾರ್ಲಿಮೆಂಟ್‌ನ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸೈಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ವೆನಿಸ್ಸಾ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿ.ವಿ.ಯ ಎನ್‌ಎಸ್‌ಎಸ್ ಸಂಯೋಜಕ ಡಾ.ಶೇಷಪ್ಪ ಅಮೀನ್.ಕೆ. ಯೂತ್ ಪಾರ್ಲಿಮೆಂಟ್ ಸ್ಪರ್ಧೆಯ ವಿಜೇತರ ವಿವರ ನೀಡಿದರು.
ನೆಹರು ಯುವ ಕೇಂದ್ರದ ಉಪ ನಿರ್ದೇಶಕ ಲೋಕೇಶ್ ಕುಮಾರ್ , ಸೈಂಟ್ ಆಗ್ನೆಸ್ ಕಾಲೇಜಿನ ಎನ್‌ಎಸ್‌ಎಸ್ ಸಂಯೋಜಕ ಡಾ.ಉದಯಕುಮಾರ್.ಬಿ., ನೆಹರು ಯುವ ಕೇಂದ್ರದ ಆಡಳಿತ ಸಹಾಯಕ ಜಗದೀಶ್. ಕೆ. , ಯೂತ್ ಪಾರ್ಲಿಮೆಂಟ್‌ನ ತೀರ್ಪುಗಾರರಾದ ರೂಪ ಧರ್ಮಯ್ಯ , ಪಿ.ಬಿ.ಹರೀಶ್ ರೈ, ಪುಷ್ಪರಾಜ್.ಬಿ.ಎನ್ ಮತ್ತು ನಿಶಾನ್.ಎನ್. ಉಪಸ್ಥಿತರಿದ್ದರು . ವಿದ್ಯಾರ್ಥಿನಿ ಪ್ರಾಪ್ತಿ ಕಾರ್ಯಕ್ರಮ ನಿರೂಪಿಸಿದರು.
ವಿಜೇತರ ವಿವರ :
ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಯೂತ್ ಪಾರ್ಲಿಮೆಂಟ್‌ನಲ್ಲಿ ಪಾಲ್ಗೊಂಡು ‘ ಏಕ ದೇಶ-ಏಕ ಚುನಾವಣೆ’ ವಿಷಯದ ಬಗ್ಗೆ ಅಭಿಪ್ರಾಯ ಮಂಡಿಸಿದರು. ಅಭಿಜಯ್ .ಎನ್.ಎಸ್. (ಉಡುಪಿ), ಶೌರ್ಯ.ಎಚ್.ಎಸ್., ಸಹನಾ ಪ್ರವೀಣ್ ಭಂಡಾರಿ, ಮರಿಯಮ್ ಫಸ್ನಾತ್ ಫಝ, ಕ್ರಿಸ್ಟನ್ ಜೊಶ್ವಾ ಮಿನೇಜಸ್, ಪ್ರಿವಿ ಡಿಸೋಜಾ (ದ.ಕ.) ಟಿ.ಶರಣ್ಯ(ಉಡುಪಿ), ಚಾರ್ಲಿ ಸರಸ್ವತಿ, ಅವಿನಾಶ್ ಪೌಲ್ ಫೆರ್ನಾಂಡಿಸ್ (ದ.ಕ.), ಮನು ಶೆಟ್ಟಿ (ಉಡುಪಿ) ಇವರು ವಿಜೇತರಾಗಿ ರಾಜ್ಯ ಮಟ್ಟದ ಯೂತ್ ಪಾರ್ಲಿಮೆಂಟ್‌ಗೆ ಆಯ್ಕೆಯಾಗಿದ್ದಾರೆ.