ಕಲ್ಲಾಪು: ಸೌಹಾರ್ದ ಇಫ್ತಾರ್ ಕೂಟ
ಉಳ್ಳಾಲ: ಜಾತಿ,ಪಂಗಡ ಗುರುತಿಸಿದೇ ಜತೆಯಾಗಿ ಇದ್ದರೆ ಮಾತ್ರ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು
ಅವರು ಕಿಂಗ್ಸ್ ಕಲ್ಲಾಪು ಇದರ ಆಶ್ರಯದಲ್ಲಿ ಕಲ್ಲಾಪು ಮೈದಾನದಲ್ಲಿ ನಡೆದ ಸೌಹಾರ್ದ ಇಫ್ತಾರ್ ಕೂಟ ಹಾಗೂ ಬಂಧುತ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಸೌಹಾರ್ದತೆಯ ಇಫ್ತಾರ್ ಕೂಟ ಏರ್ಪಡಿಸುವ ಜೊತೆಗೆ ಸಮಾಜದಲ್ಲಿ ಇರುವ ಕಳಂಕ ದೂರ ಮಾಡಬೇಕು. ಐಕ್ಯತೆ ಎಂಬುದು ನಮ್ಮ ಸಂಕೇತ ಆಗಬೇಕು ಎಂದರು.
ನಾವು ಮೊದಲು ಏಕತೆ ಸಹೋದರತೆ ಬೆಳೆಸಬೇಕು. ಇದನ್ನೇ ಪ್ರವಾದಿ ಕಲಿಸಿದ್ದಾರೆ. ಐಕ್ಯತೆ ಗೆ ಕೆಡುಕು ತರುವ ಕೆಲಸ ಮಾಡುವವನ ದುಆ ಅಲ್ಲಾಹ್ ಸ್ವೀಕರಿಸುವುದಿಲ್ಲ.ನಾವು ಹೃದಯ ಶುದ್ಧಿ ಮಾಡೋಣ ಎಂದು ದರ್ಗಾ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಹೇಳಿದರು.
ಲೇಖಕ ಎಕೆ ಕುಕ್ಕಿಲ ಮಾತನಾಡಿದರು . ಶರೀಫ್ ಸ ಅದಿ ದುಆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ನಗರ ಸಭೆ ಅಧ್ಯಕ್ಷ ಶಶಿಕಲಾ, ಕಲ್ಲಾಪು ಜುಮಾ ಮಸೀದಿ ಅಧ್ಯಕ್ಷ ಹಮೀದ್ ಕಲ್ಲಾಪು, ಸುಲೈಮಾನ್ ಪುರ್ಖಾನ್, ಫಾದರ್ ರೊಡ್ನಾಪ್ ಪಿಂಟೊ, ತಾ.ಪಂ.ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು ಮಲಾರ್, ಅರುಣ್ ಡಿ ಸೋಜ , ನಗರಸಭೆ ಉಪಾಧ್ಯಕ್ಷ ಸಪ್ನಾ ಹರೀಶ್ ,ಜಿ.ಎ.ಬಾವಾ ಮತ್ತಿತರರು ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ಬ್ಲಡ್ ಹೆಲ್ಪ್ ಲೈನ್ ಕಲ್ಲಾಪು ಇದರ ಆಶ್ರಯದಲ್ಲಿ ಅರ್ಹ ಫಲಾನುಭವಿಗಳಿಗೆ ಕನ್ನಡಕ ವಿತರಣೆ ಮಾಡಲಾಯಿತು.