ಅಡಿಕೆಯ ಮಾರುಕಟ್ಟೆ ಜಾಗತಿಕ ಮಟ್ಟಕ್ಕೆ ವಿಸ್ತರಿಸಲು ಕ್ಯಾಂಪ್ಕೊ ಪ್ರಯತ್ನ:ಕೊಡ್ಗಿ

ಮಂಗಳೂರು: ಸರಣಿ ಸವಾಲುಗಳ ಮಧ್ಯೆ, ಅಡಿಕೆಯ ಮಾರುಕಟ್ಟೆಯನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಿ, ಬೆಳೆಗಾರರಿಗೆ ನೆಮ್ಮದಿಯ ಬದುಕು ಕಟ್ಟಿಕೊಡಲು ಕ್ಯಾಂಪ್ಕೊ ಪಯತ್ನ ಪಡುವುದಾಗಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದ್ದಾರೆ.
ಅಡಿಕೆಯನ್ನು ವಿದೇಶಕ್ಕೆ ರಫ್ತು ಮಾಡುವ ತನ್ನ ಮಹತ್ವಾಕಾಂಕ್ಷಿ ಯೋಜನೆಯ ಅನ್ವಯ ಕ್ಯಾಂಪ್ಕೊ ೩೦ ಟನ್ ಅಡಿಕೆಯನ್ನು ಮಾಲ್ಡಿವ್ ದೇಶಕ್ಕೆ ರಫ್ತು ಮಾಡಿದೆ. ಗುಣಮಟ್ಟದ ವಿಚಾರದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ಕ್ಯಾಂಪ್ಕೊ, ಉತ್ತಮ ಗುಣಮಟ್ಟದ ಅಡಿಕೆಯನ್ನು ವಿದೇಶಕ್ಕೆ ರಫ್ತು ಮಾಡಿ ಜಾಗತಿಕ ಮಾರುಕಟ್ಟೆಗೆ ಭಾರತದ ಅಡಿಕೆಯನ್ನು ಪರಿಚಯಿಸಿ ಕ್ಯಾಂಪ್ಕೊ ಬ್ರ್ಯಾಂಡ್‌ನ್ನು ಜಾಗತೀಕರಣಗೊಳಿಸುವ ಉದ್ದೇಶವನ್ನು ಕ್ಯಾಂಪ್ಕೊ ಹೊಂದಿದೆ. ಮುಂದಿನ ದಿನಗಳಲ್ಲಿ ಜಗತ್ತಿನ ವಿವಿಧ ದೇಶಗಳಿಗೆ ಅಡಿಕೆ ಮತ್ತು ಅಡಿಕೆಯ ಉತ್ಪನ್ನಗಳನ್ನು ರಫ್ತು ಮಾಡುವ ಸಾಧ್ಯತೆಗಳನ್ನು ಅನ್ವೇಶಿಸಿ, ಅಡಿಕೆ ಬೆಳೆಗಾರರನ್ನು ಆರ್ಥಿಕವಾಗಿ ಸದೃಢಗೊಳಿಸುವ ಕಾರ್ಯಕ್ಕೆ ಸಂಸ್ಥೆ ಮತ್ತಷ್ಟು ಪ್ರಯತ್ನಿಸಲಿದೆ ಎಂದು ತಿಳಿಸಿದ್ದಾರೆ.