ಈಜಿಪ್ಟ್ ವಿದ್ಯಾಕೇಂದ್ರಕ್ಕೆ ತೆರಳುವ ಜುನೈದ್ ಅವರಿಗೆ ಉಕ್ಕುಡದಲ್ಲಿ ಬೀಳ್ಕೊಡುಗೆ
ವಿಟ್ಲ: ವಿಟ್ಲ ಸಮೀಪದ ಉಕ್ಕುಡ ಬದ್ರಿಯಾ ಜುಮಾ ಮಸೀದಿ ಅಧೀನದ ಮುಹ್ಯುಸ್ಸುನ್ನ ದರ್ಸಿನಲ್ಲಿ ಸುದೀರ್ಘ ಕಾಲದವರೆಗೆ ಕಲಿತು ಇದೀಗ ಉನ್ನತ ವ್ಯಾಸಂಗಕ್ಕಾಗಿ ವಿಶ್ವವಿಖ್ಯಾತ ವಿದ್ಯಾಸಂಸ್ಥೆ ಈಜಿಪ್ಟಿನ ಕೈರೋದಲ್ಲಿರುವ ಅಲ್-ಅಝ್‌ಹರ್ ಯುನಿವರ್ಸಿಟಿಗೆ ತೆರಳುತ್ತಿರುವ ಮುಹ್ಯಿಸ್ಸುನ್ನ ಉಕ್ಕುಡ ದರ್ಸ್ ವಿದ್ಯಾರ್ಥಿ ಜುನೈದ್ ಪರಪ್ಪು ಇವರನ್ನು ಜಮಾಅತ್ ಸಮಿತಿ ನಾಯಕರ ಸಹಭಾಗಿತ್ವದಲ್ಲಿ ಶುಕ್ರವಾರ (28-03) ಜುಮುಅ ಬಳಿಕ ಮಸೀದಿ ವಠಾರದಲ್ಲಿ ಬೀಳ್ಕೊಡಲಾಯಿತು.
ಮಸೀದಿ ಮುದರ್ರಿಸ್ ಹಾಫಿಳ್ ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ಅಲ್- ಹಿಕಮಿ ಅಲ್-ಅರ್ಶದಿ ಮಳಲಿ ಅವರು ಮುಹ್ಯಿಸ್ಸುನ್ನ ದರ್ಸ್ ಮಹತ್ವದ ಕುರಿತು ಹಾಗೂ ದರ್ಸ್ ಸಾಗಿಬಂದ ಸಾಧನೆಯ ಹಾದಿಯನ್ನು ಸಭೆಯ ಮುಂದಿಟ್ಟರು.
ಉಕ್ಕುಡ ಬದ್ರಿಯಾ ಜುಮಾ ಮಸೀದಿ ಶತಮಾನದಿಂದ ನಡೆದುಕೊಂಡು ಬರುತ್ತಿರುವ ಪಲ್ಲಿ ದರ್ಸ್ ಪರಂಪರೆಗೆ ಹೆಸರುವಾಸಿಯಾಗಿದೆ.
ಇದೀಗ ಮುಹ್ಯಿಸ್ಸುನ್ನ ಪೊನ್ಮಳ ಉಸ್ತಾದರ ಶಿಷ್ಯರಲ್ಲೋರ್ವರಾದ ಮಳಲಿ ಉಸ್ತಾದರ ಸಾರಥ್ಯದಲ್ಲಿ ಕಳೆದ ಒಂದೂವರೆ ದಶಕದಿಂದ ಮುಹ್ಯಿಸ್ಸುನ್ನ ದರ್ಸ್ ವಿವಿಧೆಡೆ ನಡೆಯುತ್ತಿದ್ದು, ಧಾರ್ಮಿಕ, ಲೌಕಿಕ ವಿದ್ಯಾಭ್ಯಾಸ ಹಾಗೂ ಪ್ರತಿಭೆಗಳ ಅನಾವರಣಕ್ಕೆ ಪ್ರಸಿದ್ಧಿ ಪಡೆದಿದೆ. ಇಲ್ಲಿನ ವಿದ್ಯಾರ್ಥಿ ವಿಶ್ವದ ಅತ್ಯುನ್ನತ ಧಾರ್ಮಿಕ ಪಠಣ ಕೇಂದ್ರಕ್ಕೆ ತೆರಳುವುದು ನಾಡಿಗೆ ಹೆಮ್ಮೆ ಮತ್ತು ಪ್ರಶಂಸನೀಯ ಕಾರ್ಯ ಎಂದು ಬಂಟ್ವಾಳ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ ಹೇಳಿದರು.
ಮದರಸ ಅಧ್ಯಾಪಕರಾದ ಸಫ್ವಾನ್ ಸಅದಿ, ಜಮಾಅತ್ ಅಧ್ಯಕ್ಷ ಅಬ್ಬಾಸ್ ಹಾಜಿ ಕಲ್ಲಂಗಳ, ಪ್ರದಾನ ಕಾರ್ಯದರ್ಶಿ ಶರೀಫ್ ತೈಬ, ಕೋಶಾಧಿಕಾರಿ ಅಬ್ದುಲ್ಲ ಕುಂಞಿ, ಜಲಾಲಿಯ್ಯಾ ಸಮಿತಿ ಅಧ್ಯಕ್ಷ ಹೈದರ್ ಆಲಂಗಾರು, ಪ್ರದಾನ ಕಾರ್ಯದರ್ಶಿ ಇಕ್ಬಾಲ್ ಉಕ್ಕುಡ, ಮುರ್ಶಿದುಲ್ ಅನಾಮ್ ಸ್ವಲಾತ್ ಕಮಿಟಿ ಅಧ್ಯಕ್ಷ ಮುನೀರ್ ದರ್ಬೆ, ಪ್ರದಾನ ಕಾರ್ಯದರ್ಶಿ ಹನೀಫ್ ಕುದ್ದುಪದವು, ಮಾಜಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ನೆಕ್ಕರೆಕಾಡು, ಕೆ.ಎಸ್. ಹಮೀದ್ ವಿಟ್ಲ, ದರ್ಬೆ ಅಬ್ದುಲ್ ರಹಮಾನ್, ಅದ್ದು ಬುಡಾಲ್ತಡ್ಕ ಸಹಿತ ಮೊಹಲ್ಲಾದ ಹಿರಿಯ ನಾಯಕರು ಈ ಸಂದರ್ಭ ಉಪಸ್ಥಿತರಿದ್ದರು.