ಸ್ಕ್ಯಾನಿಂಗ್ ಸಂಸ್ಥೆಗಳ ವೈದ್ಯರ ನೋಂದಣಿ ಕಡ್ಡಾಯ: ಡಿಎಚ್‌ಒ

Update: 2025-03-26 23:50 IST
ಸ್ಕ್ಯಾನಿಂಗ್ ಸಂಸ್ಥೆಗಳ ವೈದ್ಯರ ನೋಂದಣಿ ಕಡ್ಡಾಯ: ಡಿಎಚ್‌ಒ
  • whatsapp icon

ಮಂಗಳೂರು: ಸ್ಕ್ಯಾನಿಂಗ್ ಮಾಡುವ ಯಾವುದೇ ತಜ್ಞ ವೈದ್ಯರು ನಿರ್ದಿಷ್ಟ ಸ್ಕ್ಯಾನಿಂಗ್ ಕೇಂದ್ರದಲ್ಲಿ ಸ್ಕ್ಯಾನಿಂಗ್ ಮಾಡಲು ಪ್ರತ್ಯೇಕವಾಗಿ ನೋಂದಣಿ ಮಾಡಿರಬೇಕು. ಇಲ್ಲದಿದ್ದರೆ ಅಂತಹ ವೈದ್ಯರಿಗೆ ಸ್ಕ್ಯಾನಿಂಗ್ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಅವಕಾಶವಿಲ್ಲ. ನೋಂದಣಿ ಮಾಡಿದ ಕೇಂದ್ರ ಬಿಟ್ಟು ಬೇರೆಡೆ ಸ್ಕ್ಯಾನಿಂಗ್ ಮಾಡಿದರೂ ಅಂತಹ ಸ್ಕ್ಯಾನಿಂಗ್ ಯಂತ್ರಗಳನ್ನು ವಶಪಡಿಸಿ ಸ್ಕ್ಯಾನಿಂಗ್ ಕೇಂದ್ರವನ್ನು ಬಂದ್ ಮಾಡಲು ಪಿಸಿಪಿಎನ್‌ಡಿಟಿ ಕಾನೂನಿನಲ್ಲಿ ಅವಕಾಶವಿದೆ ಎಂದು ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಡಾ. ತಿಮ್ಮಯ್ಯ ಹೇಳಿದರು.

ಜಿಲ್ಲಾ ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಬುಧವಾರ ದ.ಕ.ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ಮೇಲ್ವಿಚಾರಣಾ ಮತ್ತು ತಪಾಸಣಾ ಸಮಿತಿ ಸಭೆ (ಪಿ.ಸಿ.ಪಿ.ಎನ್.ಡಿ.ಟಿ.)ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷ ಡಾ.ಅಮೃತಾ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಲಹಾ ಸಮಿತಿ ಹಾಗೂ ಜಿಲ್ಲಾ ಮೇಲ್ವಿಚಾರಣಾ ಮತ್ತು ತಪಾಸಣಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News