ಗೇರು ಕೃಷಿ ಬಗ್ಗೆ ವಿಚಾರ ಸಂಕಿರಣ ಅಗತ್ಯ ಇದೆ: ಸ್ಪೀಕರ್ ಯುಟಿ ಖಾದರ್

Update: 2025-03-26 19:48 IST
ಗೇರು ಕೃಷಿ ಬಗ್ಗೆ ವಿಚಾರ ಸಂಕಿರಣ ಅಗತ್ಯ ಇದೆ: ಸ್ಪೀಕರ್ ಯುಟಿ ಖಾದರ್
  • whatsapp icon

ಉಳ್ಳಾಲ: ಕೃಷಿಗೆ ಸಂಬಂಧಿಸಿದ ಮೇಳ ಹಾಗೂ ವಿಚಾರ ಸಂಕಿರಣ ಇಂದಿನ ಕಾಲದಲ್ಲಿ ಅಗತ್ಯ ಇದೆ. ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಅರ್ಥಪೂರ್ಣ ವಾಗಿದೆ. ಪ್ರಕೃತಿಗೆ ಹತ್ತಿರವಾದ ಜೀವನ ನಮ್ಮದು ಆಗಬೇಕು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.

ಅವರು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಮತ್ತು ಕೊಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್ ಹಾಗೂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ, ದ.ಕ., ಉಡುಪಿ ಜಿಲ್ಲಾ ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ,ದ.ಕ.ಜಿಲ್ಲಾ ಕೃಷಿ ಮತ್ತು ತೋಟಗಾರಿಕೆ ಇಲಾಖೆ, ಕೃಷಿ ಸಮಾಜ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಾಪಿಕಾಡ್ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ವಠಾರದಲ್ಲಿ ನಡೆದ ಗೇರು ಮೇಳ ಮತ್ತು ವಿಚಾರ ಸಂಕಿರಣ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸಕ್ತ ಕಾಲ ಘಟ್ಟದಲ್ಲಿ ಪ್ರಕೃತಿ ಯನ್ನು ದೂರ ಮಾಡಿ ಆಧುನಿಕ ಕಾಲಕ್ಕೆ ತಕ್ಕಂತೆ ಹೊಂದಿಕೊಂಡು ಜನರು ಹೋಗುತ್ತಿದ್ದಾರೆ. ಗೇರು ಕೃಷಿ ಸಹಿತ ಕೃಷಿಯ ಮಹತ್ವ ಇಂದಿನ ಕಾಲದ ಜನರಿಗೆ ಗೊತ್ತಿಲ್ಲ. ಇಂತಹ ಸನ್ನಿವೇಶದಲ್ಲಿ ಗೇರು ಕೃಷಿ ವಿಚಾರ ಸಂಕಿರಣದಂತಹ ಕಾರ್ಯಕ್ರಮ ಅಗತ್ಯ ಇದೆ. ಕೃಷಿಗೆ ಒತ್ತು ನೀಡುವ ಕೆಲಸ ನಮ್ಮಿಂದ ಆಗಬೇಕಾಗಿದೆ ಎಂದರು.

ಗೇರು ನಿಗಮದ ಅಧ್ಯಕ್ಷ ಮಮತಾ ಗಟ್ಟಿ ಮಾತನಾಡಿ, ಗೇರು ಕೃಷಿ ಹಿಂದೆ ಹೇಗಿತ್ತು, ಈಗ ಯಾವ ಪರಿಸ್ಥಿತಿ ಯಲ್ಲಿ ಇದೆ ಎಂಬುದು ಎಲ್ಲರಿಗೂ ಗೊತ್ತು.ಹಿಂದಿನ ಕಾಲದಲ್ಲಿ ಗೇರು ಅನ್ನು ಕೃಷಿಕರು ಎರಡನೇ ಕೃಷಿ ಯಾಗಿ ಬೆಳೆಸುತ್ತಿದ್ದರು. ಪ್ರಸಕ್ತ ಗೇರು ಕೃಷಿ ಗೆ ಮಹತ್ವ ಕೊಡುವವರು ಇಲ್ಲ.ಅಡಿಕೆ ಕೃಷಿಯನ್ನೇ ಪ್ರಮುಖ ಕೃಷಿ ಆಗಿ ಬೆಳೆಸುತ್ತಿದ್ದಾರೆ. ಗೇರು ಕೃಷಿ ಬೆಳೆಸಲು ಜಾಗ ಇದ್ದರೂ ಕೃಷಿಕರು ಬೆಳೆಸುತ್ತಿಲ್ಲ. ಗೇರು ಕೃಷಿಯಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಉತ್ಪಾದನೆ ಸಿಗುತ್ತದೆ. ಇದಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಕರೆ ನೀಡಿದರು.

ಕೆ.ಶಿ.ನಾ.ಕೃ.ತೋ.ವಿವಿ ಇರುವಕ್ಕಿಯ ಕುಲಪತಿ ಡಾ.ಆರ್.ಸಿ.ಜಗದೀಶ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ವಿಸ್ತರಣಾ ನಿರ್ದೇಶಕ ಡಾ.ಕೆ.ಟಿ.ಗುರುಮೂರ್ತಿ ಕೃಷಿ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಐ.ಸಿ.ಎ.ಆರ್., ಪುತ್ತೂರು ಗೇರು ಸಂಶೋಧನಾ ನಿರ್ದೇಶನಾಲಯದ ನಿರ್ದೇಶಕ ಡಾ.ಜೆ.ದಿನಕರ್ ಅಡಿಗ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ, ಬ್ರಹ್ಮಾವರ ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ ದ ಪ್ರಾಂಶುಪಾಲ ಡಾ.ಲಕ್ಷ್ಮಣ, ಕೆ.ಶಿ.ನಾ.ಕೃ.ತೋ.ವಿವಿ ಇರುವಕ್ಕಿಯ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಪ್ರದೀಪ್, ಮೀನುಗಾರಿಕಾ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ.ಎಸ್.ಆರ್.ಸೋಮಶೇಖರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ಮಂಜುನಾಥ್ ಸಿ., ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಡಾ.ಹೊನ್ನಪ್ಪ ಗೋವಿಂದ ಗೌಡ, ರಾಜ್ಯ ರೈತ ಸಂಘ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ರಮೇಶ ಟಿ.ಜೆ., ಬ್ರಹ್ಮಾವರ ವ.ಕೃ.ತೋ.ಸಂ.ಕೇ.ಹಿರಿಯ ಕ್ಷೇತ್ರಾಧೀಕ್ಷಕ ಡಾ.ಶಂಕರ್ ಎಂ., ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಯೋಜನಾಧಿಕಾರಿ ಮಮತಾ ಎನ್.ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಗತಿ ಪರ ಕೃಷಿಕರಾದ ಶಂಕರ್ ಶೆಟ್ಟಿ ಇರುವೈಲು, ಮುಹಮ್ಮದ್ ಅಲಿ ಇಸ್ಮಾಯಿಲ್, ನಾರಾಯಣ ನಾಯ್ಡ್, ಸೀತಾರಾಮ ಶೆಟ್ಟಿ, ನಮಿತಾ ಪಿ.ವಿ., ಚಂದ್ರಾವತಿ ಅವರನ್ನು ಸನ್ಮಾನಿಸಲಾಯಿತು.

ವಿಚಾರ ಸಂಕಿರಣ ದಲ್ಲಿ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರ ಇದರ ಕೀಟ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ರೇವಣ್ಣ ರೇವಣ್ಣ ವರ್, ಬೇಸಾಯ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಕೆ.ವಿ.ಸುಧೀರ್ ಕಾಮತ್ ಸಹಾಯಕ ಪ್ರಾಧ್ಯಾಪಕ ಡಾ.ಹೆಚ್.ಎಸ್. ಚೈತನ್ಯ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿಚಾರ ಮಂಡಿಸಿದರು.

ಬ್ರಹ್ಮಾವರ ವ.ಕೃ.ತೋ.ಸಂ.ಕೇ. ಇದರ ಸಹ ಸಂಶೋಧನಾ ನಿರ್ದೇಶಕ ಡಾ.ಧನಂಜಯ ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರವೀಣ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಉಳ್ಳಾಲ ಕೃಷಿ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಮಾರುತೇಶ್ ಎ.ಎಂ.ಸ್ವಾಗತಿಸಿದರು. ಡಾ.ಆರತಿ ಯಡವಾಡ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News