ಚೇಳಾಯರು | 55 ಲಕ್ಷ ರೂ. ವೆಚ್ಚದ ತೆರೆದ ಬಾವಿಗೆ ಶಾಸಕ ಉಮಾನಾಥ ಕೋಟ್ಯಾನ್‌ ಶಿಲಾನ್ಯಾಸ

Update: 2025-03-26 15:22 IST
ಚೇಳಾಯರು | 55 ಲಕ್ಷ ರೂ. ವೆಚ್ಚದ ತೆರೆದ ಬಾವಿಗೆ ಶಾಸಕ ಉಮಾನಾಥ ಕೋಟ್ಯಾನ್‌ ಶಿಲಾನ್ಯಾಸ
  • whatsapp icon

ಸುರತ್ಕಲ್‌ : ಗ್ರಾಮೀಣ ಪ್ರದೇಶದ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರಿನ ಸಮಸ್ಯೆಗೆ ಹೆಚ್ಚಿನ ಅದ್ಯತೆ ನೀಡಲಾಗುತ್ತಿದೆ ಎಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.

ಅವರು ಬುಧವಾರ ಚೇಳಾಯರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಯ ಎಂಬಲ್ಲಿ ಎಂ.ಅರ್.ಪಿ.ಎಲ್. ಸಂಸ್ಥೆಯ ವತಿಯಿಂದ ಸುಮಾರು 55 ಲಕ್ಷ ರೂ. ವೆಚ್ಚದಲ್ಲಿ ತೆರೆದಬಾವಿ ರಚನೆಗೆ ಅನುದಾನ ಬಿಡುಗಡೆಯಾಗಿದ್ದು, ಅದರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಎಂ.ಆರ್.ಪಿ.ಎಲ್ ಸಂಸ್ಥೆ ಸಿ.ಇ.ಅರ್ ವಿಭಾಗದ ಮೂಲಕ ತನ್ನ ಸಂಸ್ಥೆಯ ಸುತ್ತಲಿನ ಗ್ರಾಮ ಪಂಚಾಯತ್ ಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟಿದ್ದು, ಆ ಮೂಲಕ ಗ್ರಾಮೀಣ ಪ್ರದೇಶದ ಅಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಅದರಲ್ಲೂ ಮುಖ್ಯವಾಗಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರಿಗೆ ತುಂಬಾ ಆದ್ಯತೆ ನೀಡುತ್ತಿದ್ದು, ಅದಕ್ಕಾಗಿ ಸಂಸ್ಥೆಗೆ ಅಭಿನಂದನೆ ಸಲ್ಲಿಸುವುದಾಗಿ ನುಡಿದರು.

ಚೇಳಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ, ಉಪಾಧ್ಯಕ್ಷೆ ರೇಖಾ, ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ನಿತ್ಯಾನಂದ, ಸದಸ್ಯರಾದ ಯಶೋದ ಬಿ., ಸುಕುಮಾರಿ, ಸುಧಾಕರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಇ.ಆರ್ ವಿಭಾಗದ ಜನರಲ್ ಮ್ಯಾನೇಜರ್ ಶ್ರೀನಿವಾಸ್, ಇಂಜಿನಿಯರ್ ಪವಿತ್ರ, ಶಿವಕುಮಾರ್, ಚೇಳಾಯರು ಎಂ.ಆರ್.ಪಿ.ಎಲ್.‌ ನಿರ್ವಸಿತರ ಕಾಲನಿ ಸಮಿತಿಯ ಅಧ್ಯಕ್ಷ ವಸಂತ ಕುಲಾಲ್, ಮಾಜಿ ಅಧ್ಯಕ್ಷ ಗಂಗಾಧರ ಪೂಜಾರಿ ಕಾಲನಿ, ಕಾರ್ಯದರ್ಶಿ ವಿಶ್ವನಾಥ, ಎಸ್.ಎಸ್. ಮೂಲ್ಯ, ದಯಾನಂದ ಸುವರ್ಣ, ರಮೇಶ್ ಪೂಜಾರಿ ಚೇಳಾಯರು ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಚೇಳಾಯರು ನದಿ ಬದಿ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಎಂ.ಆರ್.ಪಿ.ಎಲ್ ವತಿಯಿಂದ ಶುದ್ಧ ನೀರಿನ ಘಟಕ ಸ್ಥಾಪಿಸುವಂತೆ ಎಂ.ಆರ್.ಪಿ.ಎಲ್ ನ ಸಿ.ಇ.ಆರ್ ವಿಭಾಗದ ಜನರಲ್ ಮ್ಯಾನೇಜರ್ ಶ್ರೀನಿವಾಸ್ ಅವರಿಗೆ ಮನವಿ ನೀಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News