ಮಂಗಳೂರಿನತ್ತ ಪಯಣ ಬೆಳೆಸಿದ ವಿಮಾನ; ತಾಂತ್ರಿಕ ಸಮಸ್ಯೆಯಿಂದಾಗಿ ದಮ್ಮಾಮ್‌ನಲ್ಲಿ ಬಾಕಿಯಾಗಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್
Update: 2025-03-26 23:28 IST
ಸಾಂದರ್ಭಿಕ ಚಿತ್ರ (PTI)
ದಮ್ಮಾಮ್: ತಾಂತ್ರಿಕ ಸಮಸ್ಯೆಯಿಂದಾಗಿ ಕಳೆದೊಂದು ದಿನದಿಂದ ದಮ್ಮಾಮ್‌ನಲ್ಲಿ ಬಾಕಿಯಾಗಿದ್ದ ವಿಮಾನವು ಬುಧವಾರ ರಾತ್ರಿ ಸಂಚಾರ ಆರಂಭಿಸಿದ್ದು, ಗುರುವಾರ ಮುಂಜಾನೆಯ ವೇಳೆಗೆ ಮಂಗಳೂರು ತಲುಪಲಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ರಾತ್ರಿ ಸುಮಾರು 10 ಗಂಟೆಗೆ ಸೌದಿ ಅರೇಬಿಯಾದ ದಮ್ಮಾಮ್‌ನಿಂದ ಮಂಗಳೂರಿಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ತಾಂತ್ರಿಕ ಸಮಸ್ಯೆಯಿಂದ ಹಾರಾಟ ನಡೆಸಲಿಲ್ಲ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು.