ಮಂಗಳೂರು: ಮಳೆ ನೀರು ಕೊಯ್ಲು ಯಂತ್ರೋಪಕರಣ ಘಟಕದ ಉದ್ಘಾಟನೆ

Update: 2025-03-24 20:56 IST
  • whatsapp icon

ಮಂಗಳೂರು: ರೋಟರಿ ಸಂಸ್ಥೆಯು ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಶ್ರಮಿಸುತ್ತಿದೆ’’ ಎಂದು ರೋಟರಿ ಜಿಲ್ಲಾ 3181ರ ಗವರ್ನರ್ ವಿಕ್ರಮ್‌ದತ್ತ ಮಾಹಿತಿ ನೀಡಿದ್ದಾರೆ.

ಅವರು ರೋಟರಿ ಕ್ಲಬ್ ಸುರತ್ಕಲ್ ಹಾಗೂ ರೋಟರಿ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ಸೋಮವಾರ ಸುರತ್ಕಲ್‌ನ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಶ್ರೀ ವಿದ್ಯಾ ವಿನಾಯಕ ಆವರಣದಲ್ಲಿ ರೋಟರಿ ಸಂಸ್ಥೆಯು ನಿರ್ಮಿಸಿದ್ದ ರೂ.2,00,000 ಮೌಲ್ಯದಮಳೆ ನೀರು ಕೊಯ್ಲಿನ ಯಂತ್ರೋಪಕರಣ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ರೋಟರಿ ಸಂಸ್ಥೆ ನೀಡಿದ ರೂ.40,000 ಮೌಲ್ಯದ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮ ಉಪಕರಣವನ್ನು ಶಾಲೆಯ ,ಮುಖ್ಯೋಪಾಧ್ಯಾಯಿನಿ

ನಾಗವೇಣಿ ಮತ್ತು ಮಾಲಿನಿ ಬಂಗೇರವರಿಗೆ ಹಸ್ತಾಂತರಿಸಿದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಕಲ್ಬಾವಿಯವರು ಮಳೆ ನೀರು ಕೊಯ್ಲಿನ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿ ಮಳೆ ನೀರನ್ನು ಸಂಗ್ರಹಿಸಿ ನೀರಿನ ಅಭಾವವನ್ನು ಪರಿಹರಿಸಬೇಕೆಂದು ಸಲಹೆ ನೀಡಿದರು.

ಶಾಲಾ ಆಡಳಿತ ಸಮಿತಿಯ ಅಧ್ಯಕ್ಷರಾದ ರಮಾನಂದ ರಾವ್ ರವರು ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವಾ ಮನೋಭಾವನ್ನು ಶ್ಲಾಘಿಸಿದರು.

ವೇದಿಕೆಯಲ್ಲಿ ರೋಟರಿ ವಲಯ ಸಹಾಯಕ ಗವರ್ನರ್ ಡಾ. ರಂಜನ್ ಮತ್ತು ಕೆ.ಎಂ.ಹೆಗ್ಡೆ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಸುರತ್ಕಲ್‌ನ ಅಧ್ಯಕ್ಷ ಸಂದೀಪ್ ರಾವ್ ಸ್ವಾಗತಿಸಿದರು. ರೋಟರಿ ಕ್ಲಬ್ ಸಿಟಿ ಸಂಸ್ಥೆಯ ಅಧ್ಯಕ್ಷ ಗಣೇಶ್ ಕೊಡ್ಲಮೊಗರು ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News