ಎಸೆಸೆಲ್ಸಿ ಗಣಿತ ಪರೀಕ್ಷೆ: ದ.ಕ ಜಿಲ್ಲೆಯಲ್ಲಿ 233 ಮಕ್ಕಳು ಗೈರು

Update: 2025-03-24 14:31 IST
ಎಸೆಸೆಲ್ಸಿ ಗಣಿತ ಪರೀಕ್ಷೆ: ದ.ಕ ಜಿಲ್ಲೆಯಲ್ಲಿ 233 ಮಕ್ಕಳು ಗೈರು

PC: pexels

  • whatsapp icon

ಮಂಗಳೂರು, ಮಾ. 24: ಎಸೆಸೆಲ್ಸಿ ಪರೀಕ್ಷೆಯ ಎರಡನೇ ದಿನವಾದ ಸೋಮವಾರ ಗಣಿತ ಪರೀಕ್ಷೆ ನಡೆದಿದ್ದು, ಜಿಲ್ಲೆಯಲ್ಲಿ 233 ಮಕ್ಕಳು ಗೈರು ಹಾಜರಾಗಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಗಣಿತ ಪರೀಕ್ಷೆಗೆ ಕನ್ನಡ ಮಾಧ್ಯಮದಿಂದ 13,706 ಹಾಗೂ ಆಂಗ್ಲ ಮಾಧ್ಯಮದಲ್ಲಿ 15290 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದರು. ಕನ್ನಡ ಮಾಧ್ಯಮದ 13496 ಹಾಗೂ ಆಂಗ್ಲ ಮಾಧ್ಯಮದ 15248 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಸಮಾಜಶಾಸ್ತ್ರ ಪರೀಕ್ಷೆ ಬರೆದ 14 ಅಭ್ಯರ್ಥಿಗಳು

ಎಸೆಸೆಲ್ಸಿಯಲ್ಲಿ ಗಣಿತ ಹಾಗೂ ವಿಜ್ಞಾನ ಪರೀಕ್ಷೆಯನ್ನು ಎದುರಿಸಲಾದ ವಿಶೇಷ ಚೇತನರಿಗೆ (ಮುಖ್ಯವಾಗಿ ಅಂಧರು) ಗಣಿತ ಬದಲು ಸಮಾಜಶಾಸ್ತ್ರ ಹಾಗೂ ವಿಜ್ಞಾನ ಪರೀಕ್ಷೆಯ ಬದಲು ರಾಜಕೀಯ ಶಾಸ್ತ್ರ ಪರೀಕ್ಷೆಯನ್ನು ಬರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಅದರಂತೆ ಕನ್ನಡ ಮಾಧ್ಯಮದಲ್ಲಿ ದ.ಕ. ಜಿಲ್ಲೆಯಲ್ಲಿ ಸಮಾಜ ಶಾಸ್ತ್ರ ಪರೀಕ್ಷೆಗೆ 13 ಹಾಗೂ ಆಂಗ್ಲ ಮಾಧ್ಯಮದಲ್ಲಿ ಇಬ್ಬರು ನೋಂದಾಯಿಸಿಕೊಂಡಿದ್ದರು. ಅವರಲ್ಲಿ ಆಂಗ್ಲ ಮಾಧ್ಯಮದಲ್ಲಿ 12 ಮಂದಿ ಪರೀಕ್ಷೆ ಬರೆದಿದ್ದು, ಒಬ್ಬರು ಗೈರಾಗಿದ್ದಾರೆ. ಈ ಮೂಲಕ ಇಂದು ನಡೆದ ಪರೀಕ್ಷೆಯಲ್ಲಿ ನೋಂದಾಯಿಸಿಕೊಂಡಿದ್ದವರಲ್ಲಿ ಒಟ್ಟು 234 ಮಂದಿ ಗೈರಾಗಿದ್ದರು ಎಂದು ಡಿಡಿಪಿಐ ಗೋವಿಂದ ಮಡಿವಾಳ ತಿಳಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News