ಮಂಗಳೂರು| ರಸ್ತೆಯಲ್ಲಿ ಚೆಲ್ಲಿದ ಸಿಮೆಂಟ್ ಮಿಕ್ಸ್ ಕಾಂಕ್ರಿಟ್; ಲಾರಿ ಚಾಲಕನ ಮೂಲಕವೇ ತೆರವುಗೊಳಿಸಿದ ಗೃಹರಕ್ಷಕ ದಳದ ಕಮಾಂಡರ್

Update: 2025-03-21 21:37 IST
ಮಂಗಳೂರು| ರಸ್ತೆಯಲ್ಲಿ ಚೆಲ್ಲಿದ ಸಿಮೆಂಟ್ ಮಿಕ್ಸ್ ಕಾಂಕ್ರಿಟ್; ಲಾರಿ ಚಾಲಕನ ಮೂಲಕವೇ ತೆರವುಗೊಳಿಸಿದ ಗೃಹರಕ್ಷಕ ದಳದ ಕಮಾಂಡರ್
  • whatsapp icon

ಮಂಗಳೂರು, ಮಾ.21: ನಗರದ ಎಂ.ಜಿ. ರಸ್ತೆಯುದ್ದಕ್ಕೂ ಸಿಮೆಂಟ್ ಮಿಕ್ಸ್ ಮಾಡಿದ ಕಾಂಕ್ರೀಟನ್ನು ಚೆಲ್ಲಿ ಹೋದ ಸಿಮೆಂಟ್ ಮಿಕ್ಸರ್ ಲಾರಿಯನ್ನು ಹಿಂಬಾಲಿಸಿಕೊಂಡು ಹೋಗಿ ಹಂಪನಕಟ್ಟೆಯಲ್ಲಿ ತಡೆದು ನಿಲ್ಲಿಸಿ ಅದರ ಚಾಲಕನನ್ನು ಗೃಹರಕ್ಷಕದಳದ ಪ್ಲಟೂನ್ ಕಮಾಂಡರ್ ಮಾರ್ಕ್ ಸೆರಾ ಕರೆ ತಂದು ಚೆಲ್ಲಿದ ಕಾಂಕ್ರೀಟು ತೆರವುಗೊಳಿಸಿದ ಘಟನೆ ಶುಕ್ರವಾರ ನಡೆದಿದೆ.

ಶುಕ್ರವಾರ ಮಧ್ಯಾಹ್ನ ಸಿಮೆಂಟ್ ಮಿಕ್ಸರ್ ಲಾರಿ ಚಲಿಸುತ್ತಿದ್ದಾಗ ಸಿಮೆಂಟ್ ಮಿಕ್ಸ್ ಮಾಡಿದ ಜಲ್ಲಿ ಹುಡಿ ಲಾಲ್‌ಭಾಗ್‌ನಿಂದ ಹಂಪನಕಟ್ಟೆ ತನಕ ಬಿದ್ದಿದೆ. ಬಳ್ಳಾಲ್‌ಭಾಗ್‌ನಲ್ಲಿ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಇದರಲ್ಲಿ ಸ್ಕಿಡ್ ಆಗಿ ಬಿದ್ದಿದೆ. ಇದನ್ನು ಗಮನಿಸಿದ ಮಾರ್ಕ್ ಸೆರಾ ಸಿಮೆಂಟ್ ಮಿಕ್ಸರ್ ಲಾರಿಯನ್ನು ತನ್ನ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ್ದಾರೆ. ಹಾಗೇ ಹಂಪನಕಟ್ಟೆಯಲ್ಲಿ ಅದನ್ನು ತಡೆದು ನಿಲ್ಲಿಸಿ ಚಾಲಕನನ್ನು ಸ್ಥಳಕ್ಕೆ ಕರೆ ತಂದಿದ್ದಾರೆ.

ಅಲ್ಲದೆ ರಸ್ತೆಯಲ್ಲಿ ಚೆಲ್ಲಿದ ಜಲ್ಲಿ ಹುಡಿಯನ್ನು ಕಾರ್ಮಿಕರೊಬ್ಬರ ಜತೆಗೂಡಿ ತೆರವುಗೊಳಿಸಿದ್ದಾರೆ. ಆ ಮೂಲಕ ಹಲವು ಮಂದಿ ದ್ವಿಚಕ್ರ ಸವಾರರು ಬೀಳುವ ಸಾಧ್ಯತೆಯನ್ನು ತಪ್ಪಿಸಿದ ಕೀರ್ತಿಗೆ ಪಾತ್ರರಾದ್ದಾರೆ. ಸಂಚಾರಿ ಪೊಲೀಸ್ ಕಾನ್‌ಸ್ಟೇಬಲ್ ಕೂಡ ಇದಕ್ಕೆ ಸಹಕಾರ ನೀಡಿದ್ದಾರೆ. ಮಾರ್ಕ್ ಸೆರಾ ಕರ್ತವ್ಯದಲ್ಲಿ ಇರದಿದ್ದರೂ ಕೂಡ ಸೇವಾಮನೋಭಾ, ಸಾಮಾಜಿಕ ಕಳಕಳಿ ಶ್ಲಾಘನೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News