ಸತ್ಯಶೀಲ ಜಿ.ಎಂ.ರಿಗೆ ಪಿಎಚ್ ಡಿ ಪದವಿ
Update: 2025-03-21 23:17 IST

ಕೊಣಾಜೆ: ಸತ್ಯಶೀಲ ಜಿ.ಎಂ.ಅವರು ಮಂಗಳೂರು ವಿವಿಯ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಹಿರಿಯ ಪ್ರಾಧ್ಯಾಪಕರಾಗಿರುವ ಪ್ರೊ.ಸೋಮಣ್ಣ ಅವರ ಮಾರ್ಗದರ್ಶನದಲ್ಲಿ ಸಾದರಪಡಿಸಿದ 'ಚಾಮರಾಜನಗರ ಜಿಲ್ಲೆಯ ಐತಿಹ್ಯಗಳು' ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್ ಡಿ ಪದವಿ ನೀಡಿದೆ.
ಇವರು ಹೆಗ್ಗಡೆ ದೇವನಕೋಟೆ ತಾಲೂಕಿನ ಯರಹಳ್ಳಿ ಕಾವಳ್ ಗ್ರಾಮದ ನಿವಾಸಿ ಡಾ.ಲೋಕೇಶ್ ಎಂ ಅವರ ಪತ್ನಿಯಾಗಿದ್ದಾರೆ.
ಮೂಲತಃ ಇವರು ಚಾಮರಾಜನಗರ ಜಿಲ್ಲೆಯ ಮಾಂಬಳ್ಳಿ ಗ್ರಾಮದ ಗಾಳಿಮಹದೇವಯ್ಯನವರ ಹಾಗೂ ದಿ.ನಂಜಮಣ್ಣಿ ದಂಪತಿಯ ಪುತ್ರಿ.