ಮೀಫ್ ವತಿಯಿಂದ ಉಚಿತ NEET, CET ಕ್ರ್ಯಾಶ್ ಕೋರ್ಸ್ ಉದ್ಘಾಟನೆ

ಮಂಗಳೂರು: ಮುಸ್ಲಿಮ್ ಶಿಕ್ಶಣ ಸಂಸ್ಥೆಗಳ ಒಕ್ಕೂಟ ದ.ಕ, ಉಡುಪಿ ಮತ್ತು ಕೊಡಗು ಜಿಲ್ಲೆ ಹಾಗೂ ಯೆನೆಪೋಯ ಪಿ.ಯು ಕಾಲೇಜು ಜೆಪ್ಪಿನಮೊಗರು ಇದರ ಸಹಭಾಗಿತ್ವದಲ್ಲಿ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಸತತ 45 ದಿವಸಗಳ ಉಚಿತ NEET/ CET ಕ್ರ್ಯಾಶ್ ಕೋರ್ಸ್ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ಶುಕ್ರವಾರ ಯೆನೆಪೋಯ ಪಿ.ಯು ಕಾಲೇಜು ಜೆಪ್ಪಿನಮೊಗರಿನಲ್ಲಿ ನಡೆಯಿತು.
ಕಾರ್ಯಾಗಾರದ ಉದ್ಘಾಟನೆಯನ್ನು ಯೆನೆಪೋಯ ವಿದ್ಯಾಸಂಸ್ಥೆಯ ನಿರ್ದೇಶಕರಾದ ಅಬ್ದುಲ್ಲಾ ಜಾವೀದ್ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ಜೋಕಟ್ಟೆ ಮಾತನಾಡಿ, ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ಪಿಯುಸಿ ನಂತರದ ವಿದ್ಯಾರ್ಥಿಗಳಿಗೆ ವಿವಿಧ ಕಾಲೇಜುಗಳಲ್ಲಿ ಮೀಫ್ ನೀಡುತ್ತಿರುವ ಉಚಿತ ಸೀಟುಗಳ ಕುರಿತು ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ವೈದ್ಯ ಪ್ರೊ. ಡಾ. ಮುಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಯೆನೆಪೋಯ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ಮಿಶ್ರಿಯಾ ಜಾವೀದ್, ಮೀಫ್ ಉಪಾಧ್ಯಕ್ಷರಾದ ಮುಸ್ತಫ ಸುಳ್ಯ, ಪ್ರ. ಕಾರ್ಯದರ್ಶಿ ರಿಯಾಝ್ ಅಹ್ಮದ್, ಆಡಳಿತ ಕಾರ್ಯದರ್ಶಿ ಅನ್ವರ್ ಹುಸೈನ್, ಕನ್ವೀನರ್ ಗಳಾದ ಬಿ.ಎ ಇಕ್ಬಾಲ್ ಮತ್ತು ಮುಹಮ್ಮದ್ ಶಹಾಮ್ ಪ್ರಾಂಶುಪಾಲರಾದ ಉಜ್ವಲ್ ಮೆನೇಝಸ್, ಸಹಾಯಕ ನಿರ್ದೇಶಕರಾದ ಆಂಟನಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ NEET/ CET ಪ್ರವೇಶ ಪರೀಕ್ಷೆ ಎದುರಿಸಲು ಸಹಕಾರಿಯಾಗುವ ಈ ಕಾರ್ಯಾಗಾರದಲ್ಲಿ ದಕ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಒಟ್ಟು 186 ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಯೆನೆಪೋಯ ವಿದ್ಯಾ ಸಂಸ್ಥೆಯ ಪ್ರೊ. ಸಿನಾನ್ ರವರನ್ನು ಒಳಗೊಂಡ 15 ನುರಿತ ಉಪನ್ಯಾಸಕರಿಂದ ತರಬೇತಿ ನಡೆಯಲಿರುವುದು.
ಉದ್ಘಾಟನಾ ಸಮಾರಂಭದಲ್ಲಿ ಮೀಫ್ ಕೊಡಗು ಜಿಲ್ಲಾ ಘಟಕದ ಮುಖ್ಯ ಸಲಹೆಗಾರರಾದ ಬಷೀರ್, ಸಲೀಮ್ ನಾಪೋಕ್ಲು, ಮೀಫ್ ಕೇಂದ್ರ ಘಟಕದ ಕಾರ್ಯದರ್ಶಿ ಮೊಹಮ್ಮದ್ ಶಾರಿಕ್ ಸದಸ್ಯರಾದ ಹೈದರ್ ಮರ್ಧಾಳ, ಪರ್ವೇಝ್ ಅಲಿ, ರಝಾಕ್ ಹಜ್ಜಾಜ್, ಅಬ್ದುಲ್ ರಹ್ಮಾನ್, ಅಡ್ವೋಕೇಟ್ ಉಮರ್ ಫಾರೂಕ್, ಶೈಖ್ ರಹ್ಮತುಲ್ಲಾಹ್, ಸಿರಾಜ್ ಮನೆಗಾರ್, ಪಿ. ಎ ಮುಹಮ್ಮದ್ ಸುಳ್ಯ , ದ.ಕ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ಒಟ್ಟು 23 ಪಿಯು ಕಾಲೇಜುಗಳ ಸುಮಾರು 370 ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.
ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಪಿಯುಸಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿರುವ ಈ ಕಾರ್ಯಗಾರವು ನಿರಂತರವಾಗಿ 45 ದಿವಸಗಳು ನಡೆಯಲಿದೆ.