ಸುಳ್ಯ| ಹರಿಹರ, ಕಲ್ಲುಗುಂಡಿಯಲ್ಲಿ ಕೃಷಿ ತೋಟಗಳಿಗೆ ಕಾಡಾನೆ ದಾಳಿ

ಸುಳ್ಯ: ಕೃಷಿ ತೋಟಗಳಿಗೆ ಕಾಡಾನೆ ದಾಳಿ ಮಾಡಿ ಕೃಷಿ ಹಾನಿ ಮಾಡುವ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದು, ಕಳೆದ ರಾತ್ರಿ ತಾಲೂಕಿನ ಸಂಪಾಜೆಯ ಕಲ್ಲುಗುಂಡಿ ಮತ್ತು ಹರಿಹರ ಪಲ್ಲತಡ್ಕ ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಮಾಡಿದೆ.
ಶ್ರೀ ಹರಿಹರೇಶ್ವರ ದೇವಸ್ಥಾನದ ತೋಟಕ್ಕೆ ಹಾಗು ಕಮಲಾಕ್ಷ ದೇವರಗದ್ದೆ ಮತ್ತು ಸುಬ್ಬಮ್ಮ ದೇವರಗದ್ದೆ ಕೃಷಿ ತೋಟಕ್ಕೆ ಶನಿವಾರ ರಾತ್ರಿ ಕಾಡಾನೆ ದಾಳಿ ಮಾಡಿ ಅಡಕೆ, ತೆಂಗು, ಬಾಳೆ ಗಿಡಗಳನ್ನು ಪುಡಿ ಮಾಡಿದೆ.
ಸಂಪಾಜೆಯ ಕಲ್ಲುಗುಂಡಿಯ ಕಡೆಪಾಲ ನಿವಾಸಿ ಧರ್ಮತೇಜ ನೂಜಾಲುರವರ ಹರಿಯಾಲಿ ಫಾಮ್ರ್ಸ್ ತೋಟಕ್ಕೆ ಕಾಡಾನೆ ದಾಳಿ ನಡೆಸಿದೆ. ರಕ್ಷಣಾ ಬೇಲಿ, ಅಡಕೆ ಮರ, ತೆಂಗಿನ ಮರ ಹಲಸಿನ ಫಲ ಹಾನಿಯಾಗಿದ್ದು, ಈ ಭಾಗದಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಸಂಬಂಧಪಟ್ಟ ಇಲಾಖೆ ಆದಷ್ಟು ಬೇಗ ಶಾಶ್ವತ ಪರಿಹಾರ ಮತ್ತು ಮುಂದಿನ ದಿನಗಳಲ್ಲಿ ಸುತ್ತಮುತ್ತಲಿನ ರೈತರಿಗೆ ಅನುಕೂಲ ಆಗುವಂತೆ ಶಾಶ್ವತ ರಕ್ಷಣಾ ಪರಿಹಾರ ನಿರ್ಮಾಣವಾಗಬೇಕೆಂದು ಧರ್ಮತೇಜ ನೂಜಾಲು ಆಗ್ರಹಿಸಿದ್ದಾರೆ.
