ಬೆಳ್ತಂಗಡಿ | ಏ.11, 12 ರಂದು ನಡೆಯಲಿರುವ ಬೃಹತ್ ವಾರ್ಷಿಕ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ಕಾರ್ಯಕ್ರಮದ ಪೂರ್ವ ಸಿದ್ದತಾ ಸಭೆ

Update: 2025-03-26 12:16 IST
Photo of Metting
  • whatsapp icon

ಬೆಳ್ತಂಗಡಿ: ಗೌಸಿಯಾ ಜಾಮಿಯಾ ಮಸೀದಿಯಲ್ಲಿ ಏ.11 ಮತ್ತು 12 ರಂದು ನಡೆಯಲಿರುವ ಬೃಹತ್ ವಾರ್ಷಿಕ ಜಲಾಲಿಯ್ಯಾ ರಾತೀಬ್ ಮಜ್ಲಿಸ್ ಕಾರ್ಯಕ್ರಮದ ಪೂರ್ವ ಸಿದ್ದತಾ ಸಭೆಯು ಗೌಸಿಯಾ ಮಸೀದಿಯ ಅದ್ಯಕ್ಷರ ಕಚೇರಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಮುಹಮ್ಮದ್ ರಫೀ ಬೆಳ್ತಂಗಡಿ ವಹಿಸಿದ್ದರು. ಮಾ.29 ರಂದು ಗೌಸಿಯಾ ಮಸೀದಿ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ತಾಲೂಕಿನ ಎಲ್ಲಾ ಸುನ್ನೀ ಸಂಘಟಣೆಗಳ PST ಮತ್ತು ಸುನ್ನೀ ಮುಖಂಡರ ಸಭೆ ಕರೆಯುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಸತ್ತಾರ್ ಸಖಾಫಿ, ಸಂಶೀರ್ ಸಖಾಫಿ, ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು, ಜುಬೈರ್ ಸಅದಿ, ರಶೀದ್ ಮದನಿ, ಅಬ್ದುಲ್ ಕರೀಮ್ ಗೇರುಕಟ್ಟೆ, ಅಬೂಬಕ್ಕರ್ ಸಿದ್ದೀಕ್ ಕಾಜೂರು, ಅಶ್ರಫ್ ಮುಂಡಾಜೆ, ಕೋಶಾದಿಕಾರಿ ಬಶೀರ್ ಅಹ್ಮದ್ ಹಾಜರಿದ್ದರು.

ಈ ಕಾರ್ಯಕ್ರಮದ ಯಶಸ್ವಿಗಾಗಿ ರೂಪುರೇಶೆ ತಯಾರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News