ಎಂ.ಎನ್.ರಾಜೇಂದ್ರ ಕುಮಾರ್, ಕನ್ಯಾನ ಸದಾಶಿವ ಶೆಟ್ಟಿ, ರೋಹನ್ ಮೊಂತೆರೋಗೆ ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್
ಎಂ.ಎನ್.ರಾಜೇಂದ್ರ ಕುಮಾರ್, ಕನ್ಯಾನ ಸದಾಶಿವ ಶೆಟ್ಟಿ, ರೋಹನ್ ಮೊಂತೆರೋ
ಮಂಗಳೂರು : ವಿಶ್ವವಿದ್ಯಾನಿಲಯದ 43ನೇ ಘಟಿಕೋತ್ಸದಲ್ಲಿ ಉದ್ಯಮಿಗಳಾದ ಎಂ.ಎನ್.ರಾಜೇಂದ್ರ ಕುಮಾರ್, ರೋಹನ್ ಮೊಂತೆರೋ, ಕನ್ಯಾನ ಸದಾಶಿವ ಶೆಟ್ಟಿ ಅವರು ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ.
ಕೊಣಾಜೆಯ ಮಂಗಳೂರು ವಿವಿಯ ಆಡಳಿತ ಸೌಧದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ವಿವಿ ಉಪಕುಲಪತಿ ಪ್ರೊ.ಧರ್ಮ ಅವರು ಈ ಮಾಹಿತಿ ನೀಡಿದರು.
ಮಾ.29ರಂದು ಪೂರ್ವಾಹ್ನ 11ಕ್ಕೆ ವಿಶ್ವವಿದ್ಯಾನಿಲಯದ ಆವರಣದ ಮಂಗಳ ಸಭಾಂಗಣದಲ್ಲಿ ಘಟಿಕೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ.
ಈ ಘಟಿಕೋತ್ಸವಕ್ಕೆ ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘ ಉಪಾಧ್ಯಕ್ಷರು ಹಾಗೂ ಸೋಮಿಯಾ ವಿದ್ಯಾವಿಹಾರ್ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ವಿ.ಎನ್.ರಾಜಶೇಖರನ್ ಪಿಳ್ಳೆ ಮುಖ್ಯ ಅತಿಥಿಯಾಗಿ ಭಾಷಣ ಮಾಡಲಿರುವರು. ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾಗಿರುವ ಥಾವರ್ ಚಂದ್ ಗೆಹ್ಲೋಟ್ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ.
ಪಿಎಚ್.ಡಿ ಯಲ್ಲಿ ಮಹಿಳೆಯರದ್ದೆ ಮೇಲುಗೈ:
ಈ ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ 64 (ಕಲಾ ನಿಕಾಯ-12, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ-38, ವಾಣಿಜ್ಯ ನಿಕಾಯ - 11, ಶಿಕ್ಷಣ ನಿಕಾಯ - 03) ಸಂಶೋಧನಾ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ (ಪಿಎಚ್.ಡಿ) ಪಡೆಯಲಿದ್ದಾರೆ.
ಇವರಲ್ಲಿ 31 (48.43%) ಪುರುಷರು ಮತ್ತು 33 (51.56%) ಮಹಿಳೆಯರು ಹಾಗೂ 3 (ಪುರುಷ-02, ಮಹಿಳೆ-01) ಅಂತರಾಷ್ಟ್ರೀಯ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿರುವರು.
54 ಚಿನ್ನದ ಪದಕ ಮತ್ತು 56 ನಗದು ಬಹುಮಾನಗಳಿದ್ದು, ವಿವಿಧ ಸ್ನಾತಕ/ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳ ಒಟ್ಟು 127 ರ್ಯಾಂಕ್ ಗಳಲ್ಲಿ ಪುಥಮ ರ್ಯಾಂಕ್ ಪಡೆದ 67 (ಸ್ನಾತಕೋತ್ತರ ಪದವಿ- 49 ಮತ್ತು ಪದವಿ-18) ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ಇದರಲ್ಲಿ ಕಲಾ ನಿಕಾಯದ-18, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ- 39, ವಾಣಿಜ್ಯ ನಿಕಾಯದ -08, ಶಿಕ್ಷಣ ನಿಕಾಯದ -02 ವಿದ್ಯಾರ್ಥಿಗಳಿದ್ದಾರೆ ಎಂದು ಕುಲಪತಿ ವಿವರ ನೀಡಿದರು.
ಸ್ನಾತಕ/ಸ್ನಾತಕೋತ್ತರ ಪದವಿ ಪರೀಕ್ಷೆಗಳಿಗೆ ಒಟ್ಟು 25387 ವಿದ್ಯಾರ್ಥಿಗಳು ಹಾಜರಾಗಿದ್ದು 18723(73.75%) ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಸ್ನಾತಕೋತ್ತರ/ಸ್ನಾತಕ ಪದವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ 18723 ವಿದ್ಯಾರ್ಥಿಗಳಲ್ಲಿ 6896(36.83%) ಹುಡುಗರು ಹಾಗೂ 11826 (63.16%) ಹುಡುಗಿಯರು ಆಗಿರುತ್ತಾರೆ.
ಸ್ನಾತಕೋತ್ತರ ಪದವಿ ಪರೀಕ್ಷೆಗೆ ಒಟ್ಟು 3331 ವಿದ್ಯಾರ್ಥಿಗಳು ಹಾಜರಾಗಿದ್ದು 3152(94.63%) ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಸ್ನಾತಕ ಪದವಿ ಪರೀಕ್ಷೆಗೆ ಒಟ್ಟು 22056 ವಿದಾರ್ಥಿಗಳು ಹಾಜರಾಗಿದ್ದು 15571 (70.60%)ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾದ 3152 ವಿದಾರ್ಥಿಗಳಲ್ಲಿ 906 ಹುಡುಗರು ಮತ್ತು 2245 ಹುಡುಗಿಯರು ಹಾಗೂ 01 ತೃತೀಯ ಲಿಂಗ ಆಗಿರುತ್ತಾರೆ. ಸ್ನಾತಕ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 15571 ವಿದ್ಯಾರ್ಥಿಗಳಲ್ಲಿ 5990 ಹುಡುಗರು ಮತ್ತು 9581 ಹುಡುಗಿಯರು ಆಗಿರುತ್ತಾರೆ ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಕುಲಸಚಿವರಾದ ರಾಜು ಮೊಗವೀರ , ಪ್ರೊ.ದೇವೇಂದ್ರಪ್ಪ ಉಪಸ್ಥಿತರಿದ್ದರು.