ಕುಕ್ಕುದಕಟ್ಟೆ ಕೊರಗರ ಕಾಲನಿಯ ಮನೆಗಳ ಪಕ್ಕದಲ್ಲಿ ತ್ಯಾಜ್ಯ ರಾಶಿ: ಪರಿಸರದಲ್ಲಿ ದುರ್ವಾಸನೆ

Update: 2025-03-23 21:40 IST
ಕುಕ್ಕುದಕಟ್ಟೆ ಕೊರಗರ ಕಾಲನಿಯ ಮನೆಗಳ ಪಕ್ಕದಲ್ಲಿ ತ್ಯಾಜ್ಯ ರಾಶಿ: ಪರಿಸರದಲ್ಲಿ ದುರ್ವಾಸನೆ

ಸಾಂದರ್ಭಿಕ ಚಿತ್ರ

  • whatsapp icon

ಮಂಗಳೂರು, ಮಾ.23: ಬಾಳೆಪುಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕುದಕಟ್ಟೆ ಕೊರಗರ ಕಾಲನಿಯ ಆಸುಪಾಸಿನ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಹಾಗೂ ಸಾರ್ವಜನಿಕರು ವಾಸಿಸುವ ಮನೆಗಳ ಪಕ್ಕದಲ್ಲಿ ಬೇರೆ ಬೇರೆ ಕಡೆಗಳಿಂದ ತರಲಾದ ತ್ಯಾಜ್ಯಗಳನ್ನು 20 ಅಡಿ ಆಳದ ಹೊಂಡದಲ್ಲಿ ಹಾಕುತ್ತಿದ್ದು ಇದರಿಂದಾಗಿ ಪರಿಸರದಲ್ಲಿ ದುರ್ವಾಸನೆ ಹರಡಿ ಮಾರಕ ರೋಗಗಳಾದ ಡೆಂಗ್ಯೂ ಮಲೇರಿಯಾ ಮತ್ತಿತರ ರೋಗಗಳಿಗೆ ಕಾರಣವಾಗಿದೆ ಎಂದು ಎಂದು ಕುಕ್ಕುದಕಟ್ಟೆಯ ಬಾಬು ಎಂಬವರು ದೂರಿದ್ದಾರೆ.

ತಾಜ್ಯ ತಂದು ಸುರಿಯಲಾಗುವ ಹೊಂಡದ ಬದಿಯಲ್ಲಿಯೇ ಪಂಚಾಯತ್ ವತಿಯಿಂದ ಕೊರೆದ ಕೊಳವೆ ಬಾವಿ, ಸರಕಾರದ ವತಿಯಿಂದ ತೋಡಿಸಲಾದ 2 ನೀರಿನ ಬಾವಿಗಳಿವೆ. ತ್ಯಾಜ್ಯ ಸಂಗ್ರಹದ ಕಲುಶಿತ ನೀರು ಸೋರಿ ಬಾವಿಗಳ ಹಾಗೂ ಕೊಳವೆ ಬಾವಿಗಳಿಗೆ ಸೇರುತ್ತಿವೆ. ಇದೇ ನೀರನ್ನೇ ಈ ವಠಾರದಲ್ಲಿ ವಾಸಿಸುವ ಮಂದಿ ಕುಡಿಯಲು, ಅಡುಗೆ ಮಾಡಲು ಬಳಸಬೇಕಾಗಿದೆ. ಅದೂ ಅಲ್ಲದೆ ತ್ಯಾಜ್ಯದ ಪಕ್ಕ ದಲ್ಲಿಯೇ ಕಾರ್ಯಾಚರಿಸುತ್ತಿರುವ ಅಂಗನವಾಡಿಯಲ್ಲಿ 15 ಮಂದಿ ಪುಟ್ಟ ಪುಟ್ಟ ಮಕ್ಕಳು ಕೂಡಾ ಈ ಪರಿಸರದಲ್ಲಿಯೇ ಇರುತ್ತಾರಲ್ಲದೆ ಇದರ ಸಮೀಪವೇ ಶಾಲೆ ಇದ್ದು ಇಡೀ ಬಾಳೆಪುಣಿ ವಠಾರವೇ ದುರ್ಗಂಧವಾಗಿದ್ದು ಕುಡಿಯಲು ಶುದ್ಧ ನೀರಿಲ್ಲದೆ, ಉಸಿರಾಡಲು ಶುದ್ಧ ಗಾಳಿ ಇಲ್ಲದೆ ಬದುಕುತ್ತಿರುವ ಇಲ್ಲಿಯ ಜನರ, ಮಕ್ಕಳ, ಮಹಿಳೆಯರ ಬದುಕೇ ನರಕ ಸದೃಶ್ಯವಾಗಿದೆ ಪರಿಸರದ ಜನರು ಆಪಾದಿಸಿದ್ದಾರೆ.

ಸಮಸ್ಯೆಯ ಬಗ್ಗೆ ಬಾಳೆಪುಣಿ ಗ್ರಾಮ ಪಂಚಾಯತ್‌ಗೆ ದೂರು ನೀಡಿದರೂ ಗ್ರಾಮ ಪಂಚಾಯತ್ ಯಾವುದೇ ಕ್ರಮ ಕೈಗೊಳ್ಳದೆ ತಟಸ್ಥವಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಲಾದ ಮನವಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಪರಿಸರಕ್ಕೆ ಹತ್ತಿರವಾದ ಇನ್ನೊಂದು ಸ್ಥಳದಲ್ಲಿ ಹೆಣ್ಣು ಮಕ್ಕಳ, ಹೆಂಗಸರ ಉಡುಪುಗಳನ್ನು, ಪ್ಯಾಂಪರ್ಸ್‌ ಗಳನ್ನು ಹಾಗೂ ವೃದ್ಧರ ಕಲ್ಮಶ ಭರಿತ ಬಟ್ಟೆಗಳನ್ನು ಹಾಕಿ ಅದರ ಸುತ್ತ-ಮುತ್ತ ಕೂಡಾ ಇದೇ ರೀತಿಯ ದುರ್ವಾಸನೆ ರಾತ್ರಿ ಹಗಲು ಹರಡುತ್ತಿದ್ದು ಜನರ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತಿದೆ. ಕೊರಗರಿಗೆ ಸಿಗಬೇಕಾದ ಸವಲತ್ತುಗಳು ಸಿಗುತ್ತಿಲ್ಲ ಎಂದು ದೂರಿದ್ದಾರೆ.

ಸಾರ್ವಜನಿಕರು ಶಾಲಾ ವಿದ್ಯಾರ್ಥಿಗಳ ಜೀವನವಕ್ಕೆ ತೊಂದರೆ ನೀಡುವ ತ್ಯಾಜ್ಯ ಗುಂಡಿಗಳನ್ನು ಮುಚ್ಚಿ ಬೇರೆಡೆಗೆ ಸ್ಥಳಾಂತರಿಸಬೇಕೆಂದು ಹಲವು ಬಾರಿ ಮನವಿಗಳನ್ನು ಸಲ್ಲಿಸಲಾಗಿದೆ. ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದಯು.ಟಿ. ಖಾದರ್ ಸ್ಥಳಕ್ಕೆ ಬಂದು ಬಾಳೆಪುಣಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ತ್ಯಾಜ್ಯಗಳನ್ನು ತೆಗೆಸಿ ಬೇರೆಡೆ ಸಾಗಿಸಬೇಕೆಂದು ಮತ್ತು ಇಲ್ಲಿನ ವಾಸಿಗಳಿಗೆ ಕೊಂದರೆಯಾಗದಂತೆ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದ್ದರು. ಶುಕ್ರವಾರ ಸ್ವಲ್ಪ ಪ್ರಮಾಣದಲ್ಲಿ ತ್ಯಾಜ್ಯವನ್ನು ಸಾಗಿಸಿಸಲಾಗಿದೆ. ಬಾಕಿ ಉಳಿದ ತ್ಯಾಜ್ಯವು ಹಾಗೇನೆ ಉಳಿದಿರುತ್ತದೆ ಎಂದು ತಿಳಿಸಿದ್ದಾರೆ.

*ಬೆದರಿಕೆ: ತ್ಯಾಜ್ಯ ತೆಗೆಯುವಾಗ ಪಂಚಾಯತ್ ಅಭಿವೃದ್ಧಿ ಅಧಿಕಾರಿಯು ನಾನು ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದಾಗ ನನಗೆ  ಬೈದು ನನ್ನ ಮೊಬೈಲನ್ನು ಕಸಿಯಲು ನೋಡಿದ್ದಲ್ಲದೆ ವಿಡಿಯೋ ಮಾಡುವುದನ್ನು ಮುಂದುವರಿಸಿದಲ್ಲಿ ಮೊಬೈಲನ್ನು ತೆಗೆದು ಎಸೆಯುತ್ತೇನೆ ಮತ್ತು ನಾನು ಸ್ಥಳದಿಂದ ಹೋಗದಿದ್ದರೆ ತ್ಯಾಜ್ಯ ತೆಗೆಯುವುದನ್ನು ನಿಲ್ಲಿಸುತ್ತೇನೆ ಎಂದು ಧಮ್ಮಿ ಹಾಕಿರುತ್ತಾರೆ.  ನಾನು ಇಲ್ಲಿ ವಾಸವಾಗಿರುವ 12 ಕೊರಗರ ಮನೆಯ ವಾಸಿಗಳಿಗೆ, ಶಾಲಾ ಮಕ್ಕಳಿಗೆ, ಅಂಗನವಾಡಿ ಮಕ್ಕಳಿಗೆ ಅನುಕೂಲವಾಗುವಂತೆ ಮತ್ತು ತೊಂದರೆಯನ್ನು ತಪ್ಪಿಸಲು ಪ್ರಯತ್ನಿಸುತ್ತಾ ಇದ್ದರು ಗ್ರಾಮ ಪಂಚಾಯತ್‌ನವರು ನಮ್ಮ ತೊಂದರೆಗಳನ್ನು ತಪ್ಪಿಸಲು ಪ್ರಯತ್ನಿಸಿಲ್ಲ ಎಂದು ಬಾಬು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News