ಮಂಗಳೂರು ವಿವಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಮೂವರು ಸಾಧಕರಿಗೆ ಸನ್ಮಾನ

Update: 2025-03-21 20:35 IST
ಮಂಗಳೂರು ವಿವಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ: ಮೂವರು ಸಾಧಕರಿಗೆ ಸನ್ಮಾನ
  • whatsapp icon

ಕೊಣಾಜೆ: ಭಾರತಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳಾದರೂ ಬಡತನ, ಅಸಮಾನತೆ,‌ ಲಿಂಗತಮ್ಯ,‌ ಮಹಿಳಾ ದೌರ್ಜನ್ಯದಂತಹ ನೂರಾರು ಸಮಸ್ಯೆಗಳು ಇನ್ನೂ ಪರಿಹಾರ ಕಾಣದೆ ಬದಲಾ ವಣೆ ಅಗೋಚರವಾಗಿದೆ. ಮಹಿಳೆಯರು ತಮ್ಮ ಮುಂದಿರುವ ಅವಕಾಶಗಳನ್ನು, ಹಕ್ಕುಗಳನ್ನು ಬಳಸಿ ಕೊಂಡು ಮುನ್ನಡೆಯಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತೆ‌ ಡಾ .ಅಕ್ಕೈ ಪದ್ಮಶಾಲಿ ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದ ವತಿಯಿಂದ ಶುಕ್ರವಾರ ವಿವಿಯ ಮಂಗಳಾ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರಿಗೆ ಸನ್ಮಾನ ನೆರವೇರಿಸಿ‌ ಮಾತನಾಡಿದರು.

ಮಣಿಪುರದಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ನಡುವೆ,‌ ನಿರ್ಭಯ, ಸೌಜನ್ಯ ನಂತಹ ಅನೇಕ ಬಡ ಹೆಣ್ಣು ಮಕ್ಕಳಿಗೆ ಇನ್ನೂ ಸಿಗದ ನ್ಯಾಯ, ಉಡುಪಿಯಲ್ಲಿ ಬೆಸ್ತ ಮಹಿಳೆಯ ಮೇಲಾ‌ದ ದೌರ್ಜನ್ಯ ಇವುಗಳ ನಡುವೆ ಹೇಗೆ ಮಹಿಳಾ‌ ದಿನಾಚರಣೆಯನ್ನು ಆಚರಿಸಲಿ ಎಂಬ ದುಃಖ ನಮ್ಮನ್ನು ಕಾಡುತ್ತಿದೆ. ಮಹಿಳೆಯರ ಮೇಲಾಗುತ್ತಿರುವ ಅನ್ಯಾಯದ ಕಾನೂನು ಚೌಕಟ್ಟು ಇನ್ನಷ್ಟು ಗಟ್ಟಿಗೊಳ್ಳ ಬೇಕಿದೆ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಟ್ರಾಫಿಕ್ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಅವರು, ಇಂದಿನ ಆಧುನಿಕ ಸಮಾಜದಲ್ಲೂ ಮಹಿಳೆಯರು ತಮ್ಮ ಛಾಪನ್ನು ಮೂಡಿಸುವು ದರಲ್ಲಿ, ತಮ್ಮ ಹಕ್ಕನ್ನು ಪಡೆದುಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದಾರೆ. ತಾರತಮ್ಯ ಇನ್ನೂ ಕೊನೆಗೊಂಡಿಲ್ಲ. ಮಹಿಳೆ ತಮ್ಮಲ್ಲಿರುವ ಛಲವನ್ನು ಬಿಡದೆ ಆತ್ಮಸ್ಥೈರ್ಯದೊಂದಿಗೆ ತಮ್ಮ ಹಕ್ಕನ್ನು ಬಳಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ಮಂಗಳೂರು ವಿವಿ ಕುಲಸಚಿವರಾದ ರಾಜು ಮೋಗವೀರ ಕೆ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಇಂದಿಗೂ ಕಣ್ಣಿಗೆ ಕಾಣದ ಅಸ್ತಿತ್ವವೇ ಇಲ್ಲದ ಅನೇಕ ಮಹಿಳೆಯರು ನಮ್ಮ ಸಮಾಜ ದಲ್ಲಿದ್ದಾರೆ. ಧ್ವನಿ ಇಲ್ಲದ ಮಹಿಳೆಯರಿಗೆ ನಾವು ಧ್ವನಿಯಾಗಬೇಕು ಮತ್ತು ಈ ನಿಟ್ಟಿನಲ್ಲಿ ಸಮಾಜದಲ್ಲಿ ಬದಲಾವಣೆಯನ್ನು ತರಲು ಪ್ರಯತ್ನಿಸೋಣ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಸಾಧಕರಾದ ಸಮಾಜಸೇವಕಿ ಗೀತಾ ಆರ್ ಶೆಟ್ಟಿ, ಮೀನುಗಾರಿಕೆ ಕ್ಷೇತ್ರದ ಸಾಧಕಿ ಪ್ರಾಪ್ತಿ ಮೆಂಡನ್, ನಿಖಿಲಾ ಮಂಗಳೂರು ಅವರನ್ನು ವಿಶ್ವವಿದ್ಯಾನಿಲಯದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಾಧ್ಯಾಪಕಿ ಪ್ರೊ.ಸರೋಜಿನಿ ಅವರನ್ನು ಅಭಿನಂದಿಸಲಾ ಯಿತು. ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ.ಸರೋಜಿನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಾಧ್ಯಾಪಕಿ ಪ್ರೊ.ವಿಶಾಲಾಕ್ಷಿ ಅವರು ವಂದಿಸಿದರು.

ಪ್ರಾಧ್ಯಾಪಕರಾದ ಡಾ. ಪ್ರೀತಿ ಕೀರ್ತಿ ಡಿಸೋಜ ಅವರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ಸಿಬ್ಬಂದಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News