ಸದನದಲ್ಲಿ ಬಿಜೆಪಿ ಶಾಸಕರ ಅನುಚಿತ ವರ್ತನೆ, ಸಭಾಧ್ಯಕ್ಷರ ಪೀಠಕ್ಕೆ ಅವಮಾನ : ಎಸ್‌ಡಿಪಿಐ ಖಂಡನೆ
Update: 2025-03-22 11:12 IST

ಮಂಗಳೂರು: ವಿಧಾನಸಭೆಯಲ್ಲಿ ಕಲಾಪದ ವೇಳೆ ಸ್ಪೀಕರ್ ಹುದ್ದೆಗೆ ಅಗೌರವ ತೋರಿದ ಬಿಜೆಪಿ ಶಾಸಕರ ನಡೆಗೆ ಖಂಡನೆ ವ್ಯಕ್ತಪಡಿಸಿದೆ.
ಸದನದಲ್ಲಿ ಬಜೆಟ್ ಮೇಲಿನ ಚರ್ಚೆಯ ಸಂಧರ್ಭದಲ್ಲಿ ಬಿಜೆಪಿಯ ಶಾಸಕರು ಸ್ಪೀಕರ್ ಪೀಠದ ಮೇಲೇರಿ ಹಾಗೂ ಸದನದ ಭಾವಿಯ ಮುಂದೆ ಪ್ರತಿಭಟನೆ ಹೆಸರಿನಲ್ಲಿ ವಿರೋಧ ವ್ಯಕ್ತಪಡಿಸಿರುವುದಲ್ಲದೆ ವಿಧೇಯಕದ ಪ್ರತಿಯನ್ನು ಹರಿದು ಸ್ಪೀಕರ್ ಮೇಲೆ ಎಸೆಯುತ್ತಾ ಘೋಷಣೆಗಳನ್ನುಕೂಗಿರುವುದು ಸ್ಪೀಕರ್ ಹುದ್ದೆಗೆ ಹಾಗೂ ಪೀಠಕ್ಕೆ ಮಾಡಿದ ಅಪಮಾನ ಆಗಿದೆ.
ಅಸ್ತಿತ್ವದಲ್ಲಿರುವ ಸದನದ ಎಲ್ಲಾ ನಿಯಾಮಾವಳಿಗಳನ್ನು ಉಲ್ಲಂಘಿಸಿರುವ ಬಿಜೆಪಿ ಪಕ್ಷದ ಶಾಸಕರನ್ನು ಅಮಾನತು ಮಾಡಿರುವ ಸ್ಫೀಕರ್ ನಡೆಯನ್ನು ಎಸ್ ಡಿ ಪಿ ಐ ಸ್ವಾಗತಿಸುತ್ತದೆ ಎಂದು ಎಸ್ ಡಿ ಪಿ ಐ ಮಂಗಳೂರು ನಗರ ಜಿಲ್ಲಾದ್ಯಕ್ಷ. ಅಬ್ದುಲ್ ಜಲೀಲ್ ಕೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.