ಮಂಗಳೂರು: ಮನೆಗೆ ನುಗ್ಗಿ ಕಳ್ಳತನ

ಮಂಗಳೂರು, ಮಾ.20: ನಗರದ ಕೊಟ್ಟಾರ ಸಾಗರ್‌ಕೋರ್ಟ್ ಲೇಔಟ್‌ನ ಮನೆಯಿಂದ 61,700 ರೂ. ಮೌಲ್ಯದ ಸೊತ್ತುಗಳು ಕಳವಾಗಿರುವ ಬಗ್ಗೆ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ.15ರಂದು ನಾವು ಬೆಂಗಳೂರಿಗೆ ತೆರಳಿದ್ದೆವು. ಮಾ.18ರಂದು ಮನೆ ಕೆಲಸದಾಕೆ ಕರೆ ಮಾಡಿ ಮನೆಯ ಎದುರಿನ ಬಾಗಿಲಿನ ಲಾಕ್ ಮುರಿದು ಬಾಗಿಲು ಓಪನ್ ಆಗಿರುವ ಬಗ್ಗೆ ತಿಳಿಸಿದ್ದಳು. ಅದರಂತೆ ನಾವು ಮನೆಗೆ ಬಂದಾಗ ಹಾಲ್‌ಗೆ ಹೊಂದಿಕೊಂಡಿದ್ದ ಬೆಡ್ ರೂಂನ ಗೋಡೆಗೆ ಅಳವಡಿಸಿದ್ದ ವಾರ್ಡ್ ರೋಬ್‌ನಲ್ಲಿದ್ದ ಒಡವೆಗಳು ಕಾಣೆಯಾಗಿತ್ತು. ಮೊದಲ ಅಂತಸ್ತಿನಲ್ಲಿದ್ದ ಬೆಡ್‌ರೂಂನಲ್ಲಿದ್ದ ಸ್ಟೀಲ್ ಕಪಾಟು ತೆರೆದು ಅದರಲ್ಲಿದ್ದ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು. ವಾರ್ಡ್‌ರೋಬ್‌ನಲ್ಲಿದ್ದ 12 ಸಾವಿರ ರೂ. ಮೌಲ್ಯದ 2 ಗ್ರಾಂನ ವಜ್ರದ ಮೂಗುತಿ, 38 ಸಾವಿರ ರೂ. ಮೌಲ್ಯದ 4.14 ಗ್ರಾಂ. ತೂಕದ ಒಂದು ಜೊತೆ ಬಂಗಾರದ ಕಿವಿಯೋಲೆ, 11,700 ರೂ. ಮೌಲ್ಯದ 0.856 ಗ್ರಾಂನ ವಜ್ರದ ಕಿವಿಯ ಟಿಕ್ಕಿ ಸಹಿತ 61,700 ರೂ. ಮೌಲ್ಯದ ಸೊತ್ತುಗಳು ಕಳವಾಗಿದೆ ಎಂದು ಮನೆಮಂದಿ ದೂರಿನಲ್ಲಿ ತಿಳಿಸಿದ್ದಾರೆ.