ಮಂಗಳೂರು: ಯುನಿವೆಫ್ ಕರ್ನಾಟಕದ ವತಿಯಿಂದ ಇಫ್ತಾರ್ ಸ್ನೇಹ ಮಿಲನ

Update: 2025-03-22 22:36 IST
ಮಂಗಳೂರು: ಯುನಿವೆಫ್ ಕರ್ನಾಟಕದ ವತಿಯಿಂದ ಇಫ್ತಾರ್ ಸ್ನೇಹ ಮಿಲನ
  • whatsapp icon

ಮಂಗಳೂರು: ನಮ್ಮ ಧರ್ಮಗಳನ್ನು ಪರಸ್ಪರ ಅರಿತುಕೊಂಡು ಸಹಬಾಳ್ವೆ ನಡೆಸಿದಾಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಯುನಿವೆಫ್ ಕರ್ನಾಟಕ ಸಮಿತಿಯ ಅಧ್ಯಕ್ಷ ರಫೀಯುದ್ದೀನ್ ಕುದ್ರೋಳಿ ಅಭಿಪ್ರಾಯಪಟ್ಟಿದ್ದಾರೆ.

ಯುನಿವೆಫ್ ಕರ್ನಾಟಕ ಇದರ ವತಿಯಿಂದ ಶನಿವಾರ ನಗರದ ಜಮೀಯ್ಯತ್ತುಲ್ ಫಲಾಹ್ ಸಭಾಂಗಣ ದಲ್ಲಿ ಆಯೋಜಿಸಲಾದ ಇಫ್ತಾರ್ ಸ್ನೇಹ ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜಕೀಯ ಅಥವಾ ಇನ್ನಿತರ ಆಮಿಷಗಳಿಗೆ ಒಳಗಾಗದೆ ನಮ್ಮಲ್ಲಿರುವ ಸಂಶಯಗಳನ್ನು ಪರಸ್ಪರ ಚರ್ಚೆ ನಡೆಸುವ ಮೂಲಕ ನಿವಾರಿಸಬೇಕಾಗಿದೆ. ಆಗ ನಮ್ಮಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿ ಯಲು ಸಾಧ್ಯ ಎಂದು ಅವರು ನುಡಿದರು.

ಸಂತ ಅಲೋಶಿಯಸ್ ಪರಿಗಣಿತ ವಿವಿ ಎಡ್ಮಿನ್ ಬ್ಲಾಕ್ ನಿರ್ದೇಶಕರಾದ ಡಾ. ಚಾರ್ಲ್ಸ್ ವಿ ಫುರ್ಟಾಡೊ ಮಾತನಾಡಿ ತಾನು ಶಿಕ್ಷಕರು ವಿದ್ಯಾರ್ಥಿಗಳನ್ನು ಒಂದೇ ರೀತಿಯಲ್ಲಿ ನೋಡಬೇಕಾಗಿದೆ. ಇವತ್ತು ಸಮಾಜ ದಲ್ಲಿ ಶೇ 99 ರಷ್ಟು ಮಂದಿ ಒಳ್ಳೆಯವರಿದ್ದಾರೆ. ಒಂದು ಶೇ ಮಂದಿ ಕೆಟ್ಟ ಮಾತುಗಳಿಂದಾಗಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ. ರಾಜಕೀಯ ಮತ್ತು ಮಾಧ್ಯಮಗಳು ಇದಕ್ಕೆ ಬೆಂಬಲ ನೀಡುತ್ತಿವೆ ಎಂದರು.

ಮುಸ್ಲಿಮ್ ಸಮುದಾಯಲ್ಲಿರುವ ಧರ್ಮನಿಷ್ಠೆ, ಶಿಸ್ತು ಯಾವುದೇ ಸಮುದಾಯದಲ್ಲೂ ಕಾಣ ಸಿಗದು. ರಂಝಾನ್ ತಿಂಗಳಲ್ಲಿ ಮಕ್ಕಳಿಂದ ಹಿಡಿದು ವೃದ್ಧರ ವರೆಗೂ ಎಲ್ಲರೂ ವ್ರತಾಚರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಫುರ್ಟಾಡೊ ಹೇಳಿದರು.

ಧರ್ಮರಕ್ಷಣಾ ಮೊಗವೀರ ವೇದಿಕೆಯ ಅಧ್ಯಕ್ಷ ನವೀನ್‌ಚಂದ್ರ ಶ್ರೀಯಾನ್ ಅವರು ಮುಖ್ಯ ಅತಿಥಿಯಾಗಿ ‘‘ಹಿಂದಿನ ಕಾಲದ ಕಾಲದ ಪರಿಸ್ಥಿತಿಗೆ ಈಗಿನ ಕಾಲದ ಪರಿಸ್ಥಿತಿಗೂ ವ್ಯತ್ಯಾಸವಿದೆ. ಮನುಷ್ಯರನ್ನು ಮನು ಷ್ಯರ ನೆಲೆಯಲ್ಲಿ ನೋಡುತ್ತಿದ್ದವರು ಈಗಿನ ಕಾಲದಲ್ಲಿ ಧರ್ಮದ ಆಧಾರದಲ್ಲಿ ವಿಭಜಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಸ್ಲಿಂ ಸಮುದಾಯದಲ್ಲಿ ಸ್ತ್ರೀಯರಿಗೆ ರಕ್ಷಣೆ ಸಿಗುವಷ್ಟು ಬೇರೆ ಯಾವುದೇ ಸಮುದಾಯದಲ್ಲಿ ಸಿಗುತ್ತಿಲ್ಲ ಎಂದು ಹೇಳಿದರು.

ಸಮಾಜದಲ್ಲಿರುವ ಎಲ್ಲರೂ ಅವರವರ ಧರ್ಮ ಗ್ರಂಥಗಳಲ್ಲಿರುವ ವಿಚಾರಗಳನ್ನು ಅರಿತುಕೊಂಡು , ಅದರಂತೆ ನಡೆದಾಗ ನಮ್ಮಲ್ಲಿ ಯಾವುದೇ ಸಮಸ್ಯೆ ಇರಲಾರದು ಎಂಫ್ರೆಂಡ್ಸ್‌ನ ಸ್ಥಾಪಕಧ್ಯಕ್ಷ ರಶೀದ್ ವಿಟ್ಲ ಅಭಿಪ್ರಾಯಪಟ್ಟರು.

ಯುನಿವೆಫ್ ಕರ್ನಾಟಕ ಸಮಿತಿಯ ಕಾರ್ಯದರ್ಶಿ ಸೈಫುದ್ದೀನ್ ಕುದ್ರೋಳಿ ಕಿರಾಅತ್ ಪಠಿಸಿದರು. ಕಾರ್ಯದರ್ಶಿ ಯು.ಕೆ. ಖಾಲಿದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.









Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News