ಹಜ್ ಯಾತ್ರೆ: ಎ.3ರ ಮೊದಲು 3ನೇ ಕಂತು ಪಾವತಿಗೆ ಸೂಚನೆ
Update: 2025-03-22 23:40 IST

ಮಂಗಳೂರು, ಮಾ.22: ಭಾರತದ ಹಜ್ ಕಮಿಟಿ ಮೂಲಕ 2025ರಲ್ಲಿ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲಿ ರುವ ಯಾತ್ರಿಕರು 3ನೇ ಕಂತನ್ನು ಎ.3ರ ಮೊದಲು ಪಾವತಿಸುವಂತೆ ಹಜ್ ಕಮಿಟಿ ಆಫ್ ಇಂಡಿಯಾ ತಿಳಿಸಿದೆ.
ಹಜ್ ಯಾತ್ರಿಕರ ಮೊದಲ ವಿಮಾನವು ಎ.29ರಂದು ಹೊರಡುವ ಸಾಧ್ಯತೆ ಇದೆ. ಕೊನೆಯ ಕಂತು ಸೇರಿದಂತೆ ಹಜ್ ಯಾತ್ರಿಕರು ಪಾವತಿಸಬೇಕಾದ ಹಣವನ್ನು ನಿಗದಿತ ದಿನಾಂಕದೊಳಗೆ ಠೇವಣಿ ಇಡುವಂತೆ ಹಜ್ ಕಮಿಟಿ ಆಫ್ ಇಂಡಿಯಾದ ಸಿಇಒ ಶಾನವಾಸ್.ಸಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.