ಬಂಟ್ವಾಳ | ನಿಲ್ಲಿಸಿದ್ದ ಬೈಕ್ ಕಳವು; ದೂರು ದಾಖಲು
Update: 2024-12-26 09:18 GMT
ಮಂಗಳೂರು : ವ್ಯಕ್ತಿಯೊಬ್ಬರು ನಿಲ್ಲಿಸಿ ಹೋಗಿದ್ದ ಬುಲೆಟ್ ಬೈಕನ್ನು ಕಳ್ಳತನ ಮಾಡಿರುವ ಘಟನೆ ಬಿ ಸಿ ರೋಡ್ ನಲ್ಲಿ ನಡೆದಿದೆ.
ಡಿ.24 ರಂದು ಸಂಜೆ 6.00 ಗಂಟೆಗೆ ಮಂಗಳೂರು ತಾಲೂಕಿನ ಎಲ್ಯಾರ್ ಗುಡ್ಡೆ ನಿವಾಸಿ ಸಿದ್ದೀಕ್ ಎಂಬವರು ತಮ್ಮ ಬುಲೆಟ್ ಬೈಕನ್ನು ಬಿ ಸಿ ರೋಡಿನ ಕುಲಾಲ್ ಭವನಕ್ಕೆ ಹೋಗುವ ದಾರಿಯ ಬದಿಯಲ್ಲಿರುವ ಗ್ಯಾರೇಜ್ ನ ಪಕ್ಕದಲ್ಲಿ ನಿಲ್ಲಿಸಿ ಬಸ್ ಮೂಲಕ ಮಾಣಿಗೆ ತೆರಳಿದ್ದರು. ವಾಪಸು ಬಂದು ನೋಡಿದಾಗ ಬೈಕ್ ಕಳವಾಗಿರುವುದು ಗಮನಕ್ಕೆ ಬಂದಿದೆ.
ಅಕ್ಕಪಕ್ಕದಲ್ಲಿ ಹುಡುಕಾಡಿದರೂ ಬೈಕ್ ಪತ್ತೆಯಾಗಿಲ್ಲ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.