ಬಂಟ್ವಾಳ; ಜಕ್ರಿಬೆಟ್ಟು ಗಣೇಶೋತ್ಸವಕ್ಕೆ ಅದ್ದೂರಿ ಚಾಲನೆ

Update: 2024-09-07 13:32 GMT

ಬಂಟ್ವಾಳ : ಜಕ್ರಿಬೆಟ್ಟು ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಜಕ್ರಿಬೆಟ್ಟುವಿನಲ್ಲಿ ಸೆ.7 ರಿಂದ ಸೆ.11 ರವರೆಗೆ ನಡೆಯಲಿರುವ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಇಂದು ಚಾಲನೆ ನೀಡಲಾಯಿತು.

ಶನಿವಾರ ಬೆಳಗ್ಗೆ ಬಂಟ್ವಾಳ ಶ್ರೀ ಸೀತಾರಾಮ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಆಗಮಿಸಿದ ಶ್ರೀ ಗಣೇಶ ಮೂರ್ತಿಯ ಪ್ರತಿಷ್ಟಾಪನೆ ನಡೆಯಿತು. ಕಾರ್ಯಕ್ರಮಗಳನ್ನು ಡಾ‌. ಶಿವಪ್ರಸಾದ್ ರೈ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿ ಗೌರವಾಧ್ಯಕ್ಷ , ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ಬಂಟ್ವಾಳದ ಗಣೇಶೋತ್ಸವವೆಂದರೆ ಒಂದೇ ಜಾತಿ, ಮತ, ಧರ್ಮಕ್ಕ ಸೀಮಿತವಾಗಿರದೆ ಎಲ್ಲರೂ ಒಂದಾಗಿ ಬೆಸೆಯುವ, ಬೆರೆಯುವ ಸೌಹಾರ್ದತೆಯ ಸಮ್ಮೇಳನವಾಗಿ ರೂಪುಗೊಂಡು “ಬಂಟ್ವಾಳದ ಹಬ್ಬ” ವಾಗಿ ಆಚರಿಸಲ್ಪಡುತ್ತಿದೆ. ಮನುಷ್ಯ ರೆಲ್ಲರೂ ಎಲ್ಲಾ ಭೇದ ಭಾವವನ್ನು ತೊರೆದು ಒಂದೇ ಸೂರಿನಡಿ ಒಂದಾಗಬೇಕೆಂಬ ಸದುದ್ದೇಶದಿಂದ ಅಂದು ಆರಂಭಿಸಿದ ಬಂಟ್ವಾಳದ ಶ್ರೀ ಗಣೇಶೋತ್ಸವ ಅತ್ಯಂತ ಅರ್ಥಪೂರ್ಣವಾಗಿ, ಆಭೂತಪೂರ್ವವಾಗಿ ಸಂಪನ್ನಗೊಳ್ಳಲಿದೆ. ಕಾರ್ಯ ಕ್ರಮವು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ವೈವಿಧ್ಯ ಪೂರ್ಣ ಉತ್ಸವವಾಗಿ ಸಾಮರಸ್ಯದ ಸೌಹಾರ್ದತೆಯ ಹಬ್ಬವಾಗಿ ನಡೆಯಲಿದೆ ಎಂದರು.

ಸಮಿತಿ ಅಧ್ಯಕ್ಷ ಬಿ.ಪದ್ಮಶೇಖರ ಜೈನ್ , ಪ್ರಮುಖರಾದ ಪಿಯೂಸ್ ಎಲ್.ರೊಡ್ರಿಗಸ್, ಬಿ.ಎಂ.ಅಬ್ಬಾಸ್ ಅಲಿ, ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಮಾಯಿಲಪ್ಪ ಸಾಲ್ಯಾನ್, ವಾಸು ಪೂಜಾರಿ ಲೊರೆಟ್ಟೊ, ಮಲ್ಲಿಕಾ ಪಕ್ಕಳ, ಜನಾರ್ದನ ಚಂಡ್ತಿಮಾರ್, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಬಿ.ಪ್ರವೀಣ್ ಬಂಟ್ವಾಳ , ಸುರೇಶ್ ಜೋರ, ಪ್ರಕಾಶ್ ಶೆಟ್ಟಿ ಶ್ರೀ ಶೈಲ, ಮಾರಪ್ಪ ಶೆಟ್ಟಿ, ಸುಧಾಕರ ಶೆಣೈ ಖಂಡಿಗ, ವೆಂಕಪ್ಪ ಪೂಜಾರಿ ಮೊದಲಾದವರು ಉಪಸ್ಥತರಿದ್ದರು.

ರಾಜೀವ ಶೆಟ್ಟಿ ಎಡ್ತೂರು ಸ್ವಾಗತಿಸಿ, ಬೇಬಿ ಕುಂದರ್ ಪ್ರಸ್ತಾವನೆಗೈದರು. ಸುದೀಪ್ ಕುಮಾರ್ ಶೆಟ್ಟಿ ವಂದಿಸಿ, ರಾಜೀವ ಕಕ್ಯಪದವು ನಿರೂಪಿಸಿದರು.






Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News