ದ.ಕ.ಜಿಲ್ಲಾ ಮಾಹಿತಿ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ
Update: 2025-03-18 21:07 IST

ಮಂಗಳೂರು, ಮಾ.18: ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಕಾಲ ಜಿಲ್ಲಾ ಮಾಹಿತಿ ಸಮಾಲೋಚಕರ ಹುದ್ದೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಮಾರ್ಚ್ 20ರೊಳಗೆ ಎಲ್ಲ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಬಹುದು.
ಬಿ.ಇ ಅಥವಾ ಬಿಟೆಕ್/ಬಿಸಿಎ. ಸ್ಟ್ರೀಮ್ ಕಂಪ್ಯೂಟರ್ ಸೈನ್ಸ್ ಅಥವಾ ಇನ್ ಫಾರ್ಮೇಶನ್ ಸೈನ್ಸ್ ಇಂಜಿನಿಯರಿಂಗ್ ಇಲೆಕ್ಟ್ರಾನಿಕ್ ಅ್ಯಂಡ್ ಕಮ್ಯುನಿಕೇಷನ್ ಟೆಲಿಕಾಂ ಮಾಡಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದವರಿಗೆ ಸಕಾಲ ಮಿಷನ್‌ನಿಂದ ವೇತನ ನೀಡಲಾಗುವುದು ಎಂದು ಜಿಲ್ಲಾಧಿಕಾರಿಯ ಕಚೇರಿ ಪ್ರಕಟನೆ ತಿಳಿಸಿದೆ.