ಪಿಯುಸಿ ಗಣಿತದಲ್ಲಿ ಫೇಲ್ ಆಗಿದ್ದು ಬದುಕಿನ ದಿಕ್ಕನ್ನು ಬದಲಿಸಿತು: ಆರ್.ಕೆ. ನಾಯರ್

ಮಂಗಳೂರು, ಮಾ.18: ಹುಟ್ಟಿದ್ದು ಕಾಸರಗೋಡಿನಲ್ಲಿ . ತಾನು ಚಿಕ್ಕವನಿದ್ದಾಗ ನಮ್ಮ ಕುಟುಂಬ ಸುಳ್ಯದ ಅರಂಬೂರಿಗೆ ಸ್ಥಳಾಂತರಗೊಂಡಿತು. ಸ್ಥಳೀಯ ಈಶ್ವರ ಭಟ್ಟರ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಾ ಬೆಳೆದೆವು. ವಾಸ್ತವ್ಯಕ್ಕೆ ಸ್ವಂತ ಮನೆ ಇರಲಿಲ್ಲ. ಮುಂದೆ ಜಾಲ್ಸೂರಿನಲ್ಲಿ ಮನೆ ಮಾಡಿದೆವು. ದ್ವಿತೀಯ ಪಿಯುಸಿ(ವಿಜ್ಞಾನ) ತನಕ ಶಿಕ್ಷಣ. ಪಿಯುಸಿ ಅನುತ್ತೀರ್ಣಗೊಂಡದ್ದು ಬದುಕಿನ ದಿಕ್ಕನ್ನು ಬದಲಿಸಿತು ಎಂದು ಗುಜರಾತ್‌ನ ಸ್ಮತಿ ವನದ ರೂವಾರಿ ‘ ಗ್ರೀನ್ ಹೀರೊ ಆಫ್ ಇಂಡಿಯಾ ’ ಡಾ.ಆರ್.ಕೆ. ನಾಯರ್ ಹೇಳಿದ್ದಾರೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ನಡೆದ ತಿಂಗಳ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಭಾಗವ ಹಿಸಿ, ಪ್ರೆಸ್ ಕ್ಲಬ್ ಗೌರವ ಸ್ವೀಕರಿಸಿ ಮಾತನಾಡಿದರು.
ಪಿಯುಸಿ ಪರೀಕ್ಷೆ ಯ ಗಣಿತ ವಿಷಯದಲ್ಲಿ ಅನುತ್ತೀರ್ಣಗೊಂಡ ಹಿನ್ನೆಲೆಯಲ್ಲಿ ಮನೆಯಲ್ಲಿ ತಾಯಿಯಲ್ಲಿ ಹಠ ಹಿಡಿದು 500 ರೂ.ಪಡೆದು ಸ್ನೇಹಿತ ಕಿಶೋರ್ ಜೊತೆ ಮುಂಬೈಗೆ ಬಸ್ ಹತ್ತಿದೆ. ಮುಂಬೈನಲ್ಲಿ ಅಣ್ಣ ನ ನೆರವಿನಲ್ಲಿ ಮೆಡಿಕಲ್ ಸ್ಟೋರ್‌ಗೆ ಸೇರಿದೆ. ಸ್ನೇಹಿತ ಕಿಶೋರ್ ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಸೇರಿದರು. ಆಗ ನನಗೆ ಹಿಂದಿ ಮಾತನಾಡಲು ಬರುತ್ತಿರಲಿಲ್ಲ. ಮೆಡಿಕಲ್‌ನಲ್ಲಿ ರಾತ್ರಿ ಮಲಗಲು ರೂಂ ಇರಲಿಲ್ಲ. ಮೆಡಿಕಲ್‌ನ ಹೊರಗೆ ರಾತ್ರಿ ಗೋಣಿ ಹಾಕಿ ಮಲಗುತ್ತಿದ್ದೆ. ಅದೊಂದು ದಿನ ಮೆಡಿಕಲ್ ಮಾಲಕ ತನ್ನ ಸ್ನೇಹಿತನಿಗೆ ಔಷಧಿ ಕೊಂಡು ಹೋಗಲು ಬೆಳಗ್ಗೆ ಮೆಡಿಕಲ್‌ಗೆ ಬಂದಿದ್ದಾಗ ನನ್ನ ಅವಸ್ಥೆಯನ್ನು ನೋಡಿ ದರು. ಮೆಡಿಕಲ್ ಮಾಲಕ ಹಕೀಮ್ ಬಾಯ್ ಅವರು ನನ್ನನ್ನು ಕರೆದುಕೊಂಡು ಹೋಗಿ ತಮ್ಮ ಮನೆಯಲ್ಲಿ ಆಶ್ರಯಕೊಟ್ಟರು. ಮನುಷ್ಯ ಧರ್ಮಕ್ಕಿಂತ ದೊಡ್ಡದು ಯಾವುದು ಇಲ್ಲ ಎನ್ನುವುದನ್ನು ಮೆಡಿಕಲ್ ಮಾಲ ಕರು ತೋರಿಸಿಕೊಟ್ಟರು. ಒಂದು ವರ್ಷ ಅಲ್ಲಿದ್ದೆ.ಮುಂದೆ ಹೋಟೆಲ್, ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿದೆ ಎಂದು ಆರ್ ಕೆ ನಾಯರ್ ಬದುಕಿನ ಪಯಣದ ಹಾದಿಯನ್ನು ತೆರೆದಿಟ್ಟರು.
1999ರಲ್ಲಿ ಗುಜರಾತ್‌ನಲ್ಲಿ ರೈಟ್ ಚಾಯ್ಸ್ ಎಕ್ಸ್ ಪೋರ್ಟ್ ಕಂಪೆನಿಗೆ ಫ್ಯಾಕ್ಟರಿ ಮ್ಯಾನೇಜರ್ ಆಗಿ ಸೇರಿದೆ. ಅಲ್ಲಿ ಬುಡಕಟ್ಟು ಜನಾಂಗದ ಹುಡುಗ ಹುಡುಗಿಯರು ಹೆಲ್ಪರ್ ಕೆಲಸ ಕೇಳಿಕೊಂಡು ಬರುತ್ತಿದ್ದರು. ಅದೊಂದು ದಿನ ಕೆಲಸ ಕೇಳಿಕೊಂಡು ಬರುವವರಿಗೆ ಆಪರೇಟರ್ ತರಬೇತಿ ನೀಡಿದರೆ, ಆಪರೇಟರ್‌ಗಳ ಕೊರತೆ ನಿವಾರಣೆ ಮಾಡಬಹುದು ಎಂದು ಮಾಲಕರಿಗೆ ಸಲಹೆ ನೀಡಿದೆ. ಅದರಂತೆ ತಮ್ಮ ಯೋಜನೆ ಫಲ ನೀಡಿತು. ಇದರಿಂದಾಗಿ ಸಮಾಜ ಸೇವೆಗೆ ಪ್ರೇರಣೆ ನೀಡಿತು. ಮುಂದೆ ಸ್ವಂತ ಸ್ವಂತ ಫ್ಯಾಕ್ಟರಿ ಶುರು ಮಾಡಿದೆ. ಸೌಪರ್ಣಿಕಾ ಎಕ್ಸ್‌ಪೊರ್ಟ್ಸ್ ಎಂಬ ಕಂಪೆನಿ 10 ವರ್ಷಗಳಲ್ಲಿ ದೊಡ್ಡ ಕಂಪೆನಿಯಾಗಿ ಬೆಳೆಯಿತು. ಈಗ ಅದರಲ್ಲಿ ಮೆಶಿನ್‌ಗಳಿವೆ. 1000 ಸಾವಿರ ಉದ್ಯೋಗಿಗಳು ಇದ್ದಾರೆ. 20 ಸಾವಿರಕ್ಕೂ ಅಧಿಕ ಮಂದಿ ಈಗಾಗಲೇ ತಮ್ಮ ಸಂಸ್ಥೆಯಲ್ಲಿ ತರಬೇತಿ ಪಡೆದು, ಸ್ವಾವಲಂಭನೆ ಸಾಧಿಸಿದ್ದಾರೆ. ಈಗ ತಮ್ಮ ಕುಟುಂಬದ ಕೈಯಲ್ಲಿ ಮೂರು ಕಂಪೆನಿಗಳಿವೆ
ಫಲಕೊಡುವಂತಹ ವೃಕ್ಷಗಳು ಫಲ ಕೊಡದಿದ್ದರೆ, ಹೂವಿನ ಹೂವು ಕೊಡದಿದ್ದರೆ, ಆ ಫಲ ಮತ್ತು ಹೂವಿನ ಗಿಡಗಳನ್ನು ಕಡಿಯಬೇಡಿ ಅವುಗಳೊಂದಿಗೆ ಗ್ರಾಮೀಣ ದಿನನಿತ್ಯ ಮಾತನಾಡಿ ನಿಮಗೆ ಖಂಡಿತ ಫಲ ಸಿಗುತ್ತದೆ ಎಂದರು.
ಬದಿಯಲ್ಲಿ ಗಿಡಮರಗಳನ್ನು ಬೆಳೆಸುವುದರಿಂದ ಕಡಲು ಕೊರೆತ ತಡೆಗಟ್ಟಲು ಸಾಧ್ಯವಿದೆ.ಆದರೆ ಕಲ್ಲುಗಳನ್ನು ಕಡಲಿಗೆ ಹಾಕುವುದರಿಂದ ಏನು ಪ್ರಯೋಜನ ಇಲ್ಲಎಂದು ನುಡಿದರು.
ಎಲ್ಲ ಪಕ್ಷಿ ಗಳು ಒಂದೇ ಮರವನ್ನು ಇಷ್ಟಪಡುವುದಿಲ್ಲ. ನಾನಾ ವಿಧದ ಮರಗಳಿದ್ದರೆ ನಾನಾ ವಿಧದ ಪಕ್ಷಿಗಳನ್ನು ಆಕರ್ಷಿಸುತ್ತದೆ ಎಂದರು.
ಕಡಲ ಬದಿಯಲ್ಲಿ ಗಿಡಮರಗಳನ್ನು ಬೆಳೆಸುವುದರಿಂದ ಕಡಲು ಕೊರತೆ ತಡೆಗಟ್ಟಲು ಸಾಧ್ಯವಿದೆ.ಆದರೆ ಕಲ್ಲುಗಳನ್ನು ಕಡಲಿಗೆ ಹಾಕುವುದರಿಂದ ಏನು ಪ್ರಯೋಜನ ಇಲ್ಲ ಎಂದು ನುಡಿದರು
*ನೀಲಗಿರಿ ಮರ ನೀರು ಹೆಚ್ಚು ಎಳೆಯುವುದಿಲ್ಲ: ಎಲ್ಲ ಪಕ್ಷಿ ಗಳು ಒಂದೇ ಮರವನ್ನು ಇಷ್ಟಪಡುವುದಿಲ್ಲ. ನಾನಾ ವಿಧದ ಮರಗಳಿದ್ದರೆ ನಾನಾವಿಧದ ಪಕ್ಷಿಗಳನ್ನು ಆಕರ್ಷಿಸುತ್ತದೆ ಎದರು.
ನೀಲಗಿರಿ ಗಿಡ ನೀರು ಕುಡಿಯುವುದಿಲ್ಲ. ಈ ಮರದ ಬೇರು ಕೆಳಕ್ಕೆ ಹೋದಂತೆ ನೀರು ಹಿಂದಕ್ಕೆ ಹೋಗುತ್ತದೆ. ಆದರೆ ಅತ್ತಿ ಮರ ನೀರಿನ ಸ್ನೇಹಿಯಾಗಿದೆ. ಅತ್ತಿ ಮರ ಇರುವಲ್ಲಿ ಜಲ ಇರುತ್ತದೆ ಎಂದು ಹೇಳಿದರು.
*ಮನಸ್ಸು ಕರಗಿತು: 2011ರಲ್ಲಿ ಮಾರ್ಗದ ಕೆಲಸಕ್ಕಾಗಿ ದೊಡ್ಡ ಮರವೊಂದನ್ನು ಕಡಿದು ಹಾಕಿದ ಹಿನ್ನೆಲೆಯಲ್ಲಿ ಮರದಲ್ಲಿ ಗೂಡು ಕಟ್ಟಿದ್ದ ಹಕ್ಕುಗಳ ಚೀರಾಟ ನೋಡಿದೆ. ಅದು ನನ್ನ ಮನ ಕಳಕಿತು. ಕಾಡಿನ ಮೇಲೆ ವಿಶೇಷ ಪ್ರೀತಿ ಚಿಕ್ಕಂದಿನಲ್ಲೇ ಇತ್ತು. ಗುಜರಾತ್‌ನಲ್ಲಿ ಸಣ್ಣ ಕಾಡು ನೆಟ್ಟು ಬೆಳೆಸಿದೆ. ಅಲ್ಲಿಗೆ ಹಕ್ಕಿಗಳು ಬಂದು ಗೂಡು ಕಟ್ಟಿದವು. ಮುಂದೆ ಇಂಡಸ್ಟ್ರೀಯಲ್ ಎಸ್ಟೇಟ್, ಹೌಸಿಂಗ್ ಸೊಸೈಟಿ, ಆಸ್ಪತ್ರೆಯ ಬಳಿ ಸಣ್ಣ ಕಾಡು ಬೆಳೆಸುತ್ತಾ ಮುಂದುವರಿದೆ. ವಾಪಿ ಮತ್ತು ತಾರಪುರದ ಕೆಮಿಕಲ್ ಯಾರ್ಡ್‌ನಲ್ಲಿ ಕಾಡು ನೆಟ್ಟಿ ಬೆಳೆಸಿದೆ. ಈ ಪೈಕಿ ತಾರಾಪುರ ಕಾಡು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತು. ತಮಗೆ ಇದರಿಂದಾಗಿ ಮಹಾರಾಷ್ಟ್ರ ಸರಕಾರದಿಂದ ವಸುಂಧರಾ ಪ್ರಶಸ್ತಿ, ಇಂಟರ್‌ನ್ಯಾಶನಲ್ ಪೀಸ್ ವಿವಿಯಿಂದ ಗೌರವ ಡಾಕ್ಟರೇಟ್ ಸಿಕ್ಕಿತು ಎಂದು ನೆನಪಿಸಿಕೊಂಡರು. ಕಚ್‌ನ ಸ್ಮತಿ ವನ(ಭುಜಂಗ ಪರ್ವತ) ಒಂದೊಮ್ಮೆ ಎಮ್ಮೆ ಮತ್ತು ಕುರಿ ಮೇಯುತ್ತಿದ್ದ ಜಾಗವಾಗಿತ್ತು. ಈಗ ಅದು ವಿಶ್ವದ ಅತಿ ದೊಡ್ಡ ಮಿಯಾವಾಕಿ ಫಾರೆಸ್ಟ್ ಆಗಿ ಬದಲಾಗಿದೆ.ಅಲ್ಲಿ 5,25,000 ಗಿಡ ನೆಟ್ಟು ಆಗಿದೆ. ಇನ್ನೂ 50 ಸಾವಿರ ಗಿಡ ನೆಡಲು ಬಾಕಿ ಇದೆ. ಎರಡನೇ ಹಂತದಲ್ಲಿ 12 ಲಕ್ಷ ಗಿಡ ನೆಡುವ ಯೋಜನೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಇದರಲ್ಲಿ ಆಸಕ್ತಿ ವಹಿಸಿದ್ದಾರೆ.470 ಎಕ್ರೆ ವಿಸ್ತಾರದ ಸ್ಮತಿ ವನದಲ್ಲಿ 50 ಚೆಕ್ ಡ್ಯಾಮ್ ಇವೆ. ಎರಡು ಚೆಕ್ ಡ್ಯಾಮ್‌ನಲ್ಲಿ ಪಾಕೃತಿಕವಾಗಿ ಬಂದ ಸಹಸ್ರಾರು ವಿವಿಧ ಜಾತಿಯ ಮೀನುಗಳು, ಕಾಡಿನಲ್ಲಿ ಸಹಸ್ರಾರು ಬಗೆಯ ಪಕ್ಷಿಗಳು, ಪ್ರಾಣಿಗಳು ಇವೆ .
ಪ್ರಕೃತಿಯ ಸಂರಕ್ಷಣೆಗೆ ವ್ಯವಸ್ಥೆ ಮಾಡಿದರೆ ಎಲ್ಲಿಗೆ ಎಲ್ಲವನ್ನು ಪ್ರಕೃತಿಯೆ ತರುತ್ತದೆ. ಸ್ಮತಿ ವನ ಸೇರಿದಂತೆ ವರೆಗೆ 12 ರಾಜ್ಯಗಳಲ್ಲಿ 121 ಮಿಯಾವಾಕಿ ಕಾಡುಗಳನ್ನು ನಿರ್ಮಿಸಲಾಗಿದೆ. 122ನೇ ಕಾಡು ರಾಜಸ್ಥಾನದ ಪಾಲ್‌ನಲ್ಲಿ ಇತ್ತೀಚೆಗೆ ಪ್ಲಾಂಟೇಶನ್ ಮಾಡಲಾಗಿದೆ. 1,02, 000 ಗಿಡಗಳನ್ನು ಫಾರೆಸ್ಟ್‌ನಲ್ಲಿ ನಿರ್ಮಿಸಲಾಗಿದೆ .32, 000 ಗಿಡಗಳನ್ನು ಮತ್ತೆ ನೆಡುವ ಯೋಜನೆ ಇದ ಎಂದು ಹೇಳಿದರು.
ದ.ಕ.ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ. ಎ.ಖಾದರ್ ಶಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಗಳೂರು ಪ್ರೆಸ್ ಕ್ಲಬ್‌ನ ಅಧ್ಯಕ್ಷ ಪಿ.ಬಿ. ಹರೀಶ್ ರೈ ಸಮಾರಂಭದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಆರ್.ಸಿ.ಭಟ್ ಕಾರ್ಯಕ್ರಮ ನಿರೂಪಿಸಿದರು.