ಬಂಟ್ವಾಳ: ರಸ್ತೆ ಅಪಘಾತ; ಮಹಿಳೆ ಸೇರಿ ಇಬ್ಬರು ಪ್ರಯಾಣಿಕರಿಗೆ ಗಾಯ
Update: 2023-07-24 17:54 GMT
ಬಂಟ್ವಾಳ: ಪುರಸಭೆಯಿಂದ ಬಂಟ್ವಾಳ ಮುಖ್ಯ ರಸ್ತೆಗೆ ಹೊರಟ ಪುರಸಭೆಯ ತ್ಯಾಜ ಸಂಗ್ರಹದ ಘನ ವಾಹನ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬರು ಮಹಿಳೆ ಸೇರಿ ಇಬ್ಬರು ಪ್ರಯಾಣಿಕರು ಗಾಯಗೊಂಡ ಘಟನೆ ಬಿ.ಸಿ.ರೋಡ್ ನಲ್ಲಿ ನಡೆದಿದೆ.
ಗಾಯಾಳುಗಳನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಸಂಚಾರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.