ಬಂಟ್ವಾಳದ ಅನೈತಿಕ ಪೊಲೀಸ್ ಗಿರಿ; ಆ್ಯಂಟಿ ಕಮ್ಯುನಲ್ ವಿಂಗ್ ನಿಷ್ಕ್ರಿಯ: ಡಿವೈಎಫ್‌ಐ ಆರೋಪ

Update: 2023-07-29 17:13 GMT

ಮಂಗಳೂರು, ಜು.29: ಬಂಟ್ವಾಳದಲ್ಲಿ ಮೊನ್ನೆ ರಾತ್ರಿ ಪೊಲೀಸ್ ಸಿಬ್ಬಂದಿ ಮತ್ತವರ ಕುಟುಂಬದೊಂದಿಗೆ ಸಂಘಪರಿವಾರಕ್ಕೆ ಸೇರಿದ ಇಬ್ಬರು ದುಷ್ಕರ್ಮಿ ಗಳು ಅನೈತಿಕ ಪೊಲೀಸ್‌ಗಿರಿ ನಡೆಸಿರುವ ಘಟನೆ ಪೊಲೀಸ್ ಇಲಾಖೆಯ ದಯನೀಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಅಲ್ಲದೆ ಇತ್ತಿಚೇಗೆ ಕಾರ್ಯ ರೂಪಕ್ಕೆ ಬಂದ ಆ್ಯಂಟಿ ಕಮ್ಯೂನಲ್ ವಿಂಗ್‌ನ ನಿಷ್ಕ್ರಿಯತೆಗೆ ಇದು ಸಾಕ್ಷಿಯಾಗಿದೆ ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ಆರೋಪಿಸಿದೆ.

ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ನೈತಿಕ ಪೊಲೀಸ್‌ಗಿರಿ ಹೆಸರಿನ ದಾಳಿಗಳು ಹೆಚ್ಚಾಗಿದೆ. ಜಿಲ್ಲೆಯ ಶಾಂತಿ ಪ್ರಿಯ ಜನತೆ ಇದರ ವಿರುದ್ಧ ಧ್ವನಿಯೆತ್ತುತ್ತಾ ಬಂದಿದ್ದರೂ ಇದನ್ನು ನಿಯಂತ್ರಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಅದರ ಪರಿಣಾಮ ಅನೈತಿಕ ಪೊಲೀಸ್‌ಗಿರಿ ಪೊಲೀಸ್ ಸಿಬ್ಬಂದಿ ಮತ್ತವರ ಕುಟುಂಬದ ಮೇಲೆಯೇ ಆಗಿದೆ. ಇನ್ನಾದರೂ ಪೊಲೀಸ್ ಇಲಾಖೆಯು ಎಚ್ಚೆತ್ತುಕೊಂಡು ಕಠಿಣ ಕ್ರಮ ಜರಗಿಸಬೇಕು ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News