ಬಿ.ಸಿ.ರೋಡ್ : ಮಿತ್ತಬೈಲು ಎಂ.ಜೆ.ಎಂ. ಅಧ್ಯಕ್ಷರಾಗಿ ಹಾಜಿ ಮುಹಮ್ಮದ್ ಅದ್ದೇಡಿ ಆಯ್ಕೆ
Update: 2024-10-25 09:03 GMT
ಬಂಟ್ವಾಳ : ಬಿ.ಸಿ.ರೋಡ್ ಸಮೀಪದ ಮಿತ್ತಬೈಲ್ ಮುಹಿಯುದ್ದೀನ್ ಜುಮಾ ಮಸೀದಿ ಇದರ ನೂತನ ಅಧ್ಯಕ್ಷರಾಗಿ ಹಾಜಿ ಮುಹಮ್ಮದ್ ಅದ್ದೇಡಿ ಆಯ್ಕೆಯಾದರು.
ಮುಹಮ್ಮದ್ ಇಕ್ಬಾಲ್ ನಂದರಬೆಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆದ ಮಸೀದಿಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಮಸೀದಿ ಖತೀಬ್ ಅಬ್ಬಾಸ್ ಫೈಝಿ ಪುತ್ತಿಗೆ ದು:ಹಾ ನೆರವೇರಿಸಿದರು.
ನೂತನ ಅಧ್ಯಕ್ಷರಾಗಿ ಹಾಜಿ ಮುಹಮ್ಮದ್ ಅದ್ದೇಡಿ, ಉಪಾಧ್ಯಕ್ಷರುಗಳಾಗಿ ಜಮಾಲುದ್ದೀನ್ ಶಾಂತಿ ಅಂಗಡಿ, ಸಯ್ಯದ್ ಫಲುಳ್ ತಂಗಳ್, ಪ್ರಧಾನ ಕಾರ್ಯದರ್ಶಿಯಾಗಿ ಅಕ್ಬರ್ ಆಲಿ ಪೊನ್ನೋಡಿ, ಕಾರ್ಯದರ್ಶಿಗಳಾಗಿ ಅಶ್ರಫ್ ಶಾಂತಿಅಂಗಡಿ, ಇಕ್ಬಾಲ್ ನಂದರಬೆಟ್ಟು, ಶಾಕೀರ್ ಶಾಂತಿಅಂಗಡಿ, ಕೋಶಧಿಕಾರಿಯಾಗಿ ಅಬ್ದುಲ್ ರಹ್ಮಾನ್, ಲೆಕ್ಕ ಪರಿಶೋಧಕರಾಗಿ ಹಮೀದ್ ಹಾಜಿ ಕೈಕಂಬ ಇವರು ಆಯ್ಕೆಯಾದರು.