ಬೆಳ್ತಂಗಡಿ | ತಣ್ಣೀರುಪಂಥದಲ್ಲಿ ಅಡಿಕೆ ಗೋದಾಮಿನಿಂದ 1.35 ಲಕ್ಷ ರೂ. ಮೌಲ್ಯದ ಅಡಿಕೆ ಕಳವು

Update: 2024-04-04 04:27 GMT

ಬೆಳ್ತಂಗಡಿ, ಎ.4: ಗೋದಾಮಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು 1.35 ಲಕ್ಷ ರೂ. ಮೌಲ್ಯದ ಅಡಿಕೆ ಕಳವುಗೈದ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ತಣ್ಣೀರುಪಂಥ ಎಂಬಲ್ಲಿ ನಡೆದಿದೆ.

ತಣ್ಣೀರುಪಂಥ ನಿವಾಸಿ ಅಬ್ದುಲ್ ಹಕೀಂ ಎಂಬವರು ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ಎ.2ರಂದು ಸಂಜೆಯ ವೇಳೆ ಸುಲಿಯದ ಅಡಿಕೆಯನ್ನು 75 ಗೋಣಿ ಚೀಲಗಳಲ್ಲಿ ತುಂಬಿಸಿ ಮನೆ ಸಮೀಪವೇ ಇರುವ ಗೋದಾಮಿನಲ್ಲಿ ಇಟ್ಟು ಬೀಗ ಹಾಕಿದ್ದರು. ಎ 3ರಂದು ಬೆಳಗ್ಗೆ ನೋಡಿದಾಗ ಗೋದಾಮಿನ ಬಾಗಿಲು ತುಂಡಾಗಿ ಬಿದ್ದಿರುವುದು ಕಂಡುಬಂದಿದ್ದು ಪರಿಶೀಲಿಸಿದಾಗ ಗೋದಾಮಿನ ಒಳಗಿದ್ದ 25 ಅಡಿಕೆ ಚೀಲಗಳು ಕಳವಾಗಿರುವುದು ಕಂಡುಬಂದಿದೆ. ಕಳ್ಳತನವಾಗಿರುವ ಅಡಿಕೆಯ ಒಟ್ಟು ಮೌಲ್ಯ 1,35,000 ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News