ಬೋಳಿಯಾರು: ಮಾದಕ ದ್ರವ್ಯ ಮುಕ್ತ ಪರಿಸರಕ್ಕಾಗಿ ಸಂಯುಕ್ತ ಜಮಾಅತ್ ಒಕ್ಕೂಟ ಅಸ್ತಿತ್ವಕ್ಕೆ
ಉಳ್ಳಾಲ: ಬೋಳಿಯಾರು ಸುತ್ತಮುತ್ತಲಿನ 8 ಜಮಾಅತ್ ಗಳ ಸಹಭಾಗಿತ್ವದಲ್ಲಿ ಮಾದಕದ್ರವ್ಯ ಮುಕ್ತ ಪರಿಸರದ ಗುರಿಯೊಂದಿಗೆ ರಚನೆಯಾಗಿರುವ ಸಂಯುಕ್ತ ಜಮಾಅತ್ ಒಕ್ಕೂಟ ಇದರ ಅಧ್ಯಕ್ಷರಾಗಿ ಪಿ.ಕೆ.ಅಬ್ದುಲ್ಲಾ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಪಲ್ಲ , ಉಬೈದ್ ಅಮ್ಮೆಂಬಳ, ಅಬೂಬಕ್ಕರ್ ಕೋಟೆ, ಮುಹಮ್ಮದ್ ರಂತಡ್ಕ, ರಝಾಕ್ ಬಂಡಸಾಲೆ ,ಪ್ರ, ಕಾರ್ಯದರ್ಶಿಯಾಗಿ ಹಮೀದ್ ಒಡಕಿನ ಕಟ್ಟೆ, ಕೋಶಾಧಿಕಾರಿ ಎಂ.ಕೆ.ನಿಯಾಝ್, ಸಂಘಟನಾ ಕಾರ್ಯದರ್ಶಿಗಾಗಿ ಕಬೀರ್ ರಂತಡ್ಕ, ಸಿಎ ಅಬ್ದುಲ್ ಖಾದರ್, ಜೊತೆ ಕಾರ್ಯದರ್ಶಿಗಳಾಗಿ ಇಸಾಕ್ ಮಧ್ಯನಡ್ಕ, ಜಾಫರ್ ಪಾನೇಲ, ಗೌರವ ಸಲಹೆಗಾರರಾಗಿ ಅಬೂಬಕ್ಕರ್ ಹಾಜಿ ಮಧ್ಯನಡ್ಕ , ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬೋಳಿಯಾರು ಜಮಾಅತ್ ನ ಬಿ.ಎಂ.ಹನೀಫ್, ಎಂ.ಎಸ್.ಯೂಸುಫ್, ಟಿ.ಎಚ್.ಲತೀಫ್ ಹಾಜಿ, ಇಕ್ಬಾಲ್ ದೇವರಗುಂಡಿ ಶಫಿಯುಲ್ಲ ಝಿಯಾದ್, ಸುಬ್ಬಗುಳಿ ಜಮಾಅತ್ ನ ಲತೀಫ್ ಬೋಳಿಯಾರು, ಖಾಸಿಂ ಕುರ್ನಾಡು, ರಿಯಾಝ್ ಸುಬ್ಬಗುಳಿ, ಮಧ್ಯನಡ್ಕ ಜಮಾಅತ್ ನ ಮಜೀದ್ ಕೆ.ಎಂ, ಮೂಸಾಕುಂಙಿ, ಇಬ್ರಾಹಿಂ ಎಂ, ಕುಕ್ಕೋಟು ಜಮಾಅತ್ ನ ಶರೀಫ್ ಎನ್.ಜಿ, ಸಿದ್ದೀಕ್ ಕುಕ್ಕೋಟು, ಇಸ್ಮಾಯಿಲ್ ಮಲ್ಲಿಗೆ, ಅಮ್ಮೆಂಬಳ ಜಮಾಅತ್ ನ ಶಬೀರ್ ಅಮ್ಮೆಂಬಳ, ಅಸಿಫ್ ಅಮ್ಮೆಂಬಳ, ಪಾನೇಲ ಜಮಾಅತ್ ನ ಅಬ್ದುಲ್ ಖಾದರ್ ಬಾಕಿಮಾರ್, ಬದ್ರುದ್ದೀನ್ ಎಕೆಜೆ,ರಝಾಕ್ ಮುಸ್ಲಿಯಾರ್, ಇಬ್ರಾಹಿಂ ಮಡಿಲಬೈಲ್ ರಂತಡ್ಕ ಜಮಾಅತ್ ನ ಹನೀಫ್ ರಂತಡ್ಕ, ಹಮೀದ್ ರಂತಡ್ಕ , ಯೂನುಸ್ ರಂತಡ್ಕ, ಇಬ್ರಾಹಿಂ ಆರ್ ಎಸ್, ಅಬ್ದುಲ್ಲಾ ಆರ್ ಎಚ್ , ಜಾರದಗುಡ್ಡೆ ಜಮಾಅತ್ ನ ರಹೀಂ ಜಾರದಗುಡ್ಡೆ, ಸಮೀರ್, ಸಮೀರ್ ಎಮ್ ರವರನ್ನು ಆಯ್ಕೆ ಮಾಡಲಾಯಿತು.