ಯೆನೆಪೊಯ ಪ್ರಕೃತಿ ಚಿಕಿತ್ಸಾ - ಯೋಗ ವಿಜ್ಞಾನ ಕಾಲೇಜಿನಲ್ಲಿ ಪ್ರಕೃತಿ ಚಿಕಿತ್ಸಾ ದಿನಾಚರಣೆ
Update: 2024-11-22 13:48 GMT
ಮಂಗಳೂರು: ಯೆನೆಪೊಯ ಪರಿಗಣಿತ ವಿವಿಯ ಯೆನೆಪೊಯ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ ಆಶ್ರಯದಲ್ಲಿ ಏಳನೇ ಪ್ರಕೃತಿ ಚಿಕಿತ್ಸಾ ದಿನವನ್ನು ನ.18ರಂದು ಯೆನೆಪೊಯ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಕ್ಲಿನಿಕಲ್ ನ್ಯಾಚುರೋಪತಿ ವಿಭಾಗದಿಂದ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿದ್ದ ಮರ್ಕಜ್ ನ್ಯಾಚುರೋಪತಿ ಮತ್ತು ಯೋಗ ಮೆಡಿಕಲ್ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ಪ್ರದೀಪ್ ದಾಮೋದರನ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಸಂಯೋಜಕರಾದ ಡಾ.ಅಭಿಜ್ಞಾ 7ನೇ ಪ್ರಕೃತಿ ಚಿಕಿತ್ಸಾ ದಿನದ ಅಂಗವಾಗಿ ಮಂಗಳೂರು ಮತ್ತು ಸುತ್ತಮುತ್ತ ಪ್ರಕೃತಿ ಚಿಕಿತ್ಸಾ ಆರೋಗ್ಯ ಜಾಗೃತಿ ಶಿಬಿರಗಳು ಮತ್ತು ವಿವಿಧ ಸ್ಪರ್ಧಾ ಚಟುವಟಿಕೆಗಳ ಸಮಗ್ರ ವರದಿಯನ್ನು ಮಂಡಿಸಿದರು. ಡಾ.ರಫೀದಾ ಸ್ಪರ್ಧೆಗಳಲ್ಲಿ ವಿಜೇತರ ಹೆಸರನ್ನು ಘೋಷಿಸಿದರು.
ಡಾ.ಪದ್ಮಶ್ರೀ ಸ್ವಾಗತಿಸಿ, ಡಾ.ವಜ್ರಾಕ್ಷಿ ವಂದಿಸಿದರು.