ಮೂಡುಪೆರಾರ: ಮನೆಗೆ ಬೆಂಕಿ; ಹಾನಿ

Update: 2024-11-22 12:48 GMT

File Photo

ಮಂಗಳೂರು, ನ.22: ಪಡುಪೆರಾರ ಗ್ರಾಪಂ ವ್ಯಾಪ್ತಿಯ ಮೂಡುಪೆರಾರ ಗ್ರಾಮದ ಕೆಳಸಿಬೆಟ್ಟು ನಿವಾಸಿ ಪೂವಪ್ಪಗೌಡ ಎಂಬವರ ಮನೆಗೆ ಶುಕ್ರವಾರ ಬೆಂಕಿ ಅವಘಢ ಸಂಭವಿಸಿದೆ.

ಆಕಸ್ಮಿಕವಾಗಿ ತಗುಲಿದ ಬೆಂಕಿಯಿಂದ ಮನೆ ಸಂಪೂರ್ಣ ಸುಟ್ಟು ಹೋಗಿದ್ದು, ಘಟನೆಯಿಂದ ಅಂದಾಜು 2 ಲಕ್ಷ ರೂ. ನಷ್ಟವಾಗಿದೆ ಎಂದು ಕಂದಾಯ ಮೂಲಗಳು ತಿಳಿಸಿವೆ.

ಪೂವಪ್ಪ ಮತ್ತವರ ಪತ್ನಿ ಕೆಲಸಕ್ಕೆ ಹೊರಗಡೆ ಹೋಗಿದ್ದ ವೇಳೆ ಅಂದರೆ ಬೆಳಗ್ಗೆ 10ರ ವೇಳೆ ಮನೆಯಲ್ಲಿ ಬೆಂಕಿ ಕಾಣಿಸಿ ಕೊಂಡಿದೆ. ಮನೆಯ ಮರದ ಪಕ್ಕಾಸು, ಹೆಂಚು, ಪೀಠೋಪಕರಣ, ಬಟ್ಟೆಬರೆ ಮತ್ತಿತರ ಸೊತ್ತುಗಳು ಸುಟ್ಟು ಕರಕಲಾಗಿವೆ.

ಪಡು ಪೆರಾರ ಗ್ರಾಪಂ ಅಧ್ಯಕ್ಷೆ ಮೀನಾಕ್ಷಿ ಗೌಡ, ಉಪಾಧ್ಯಕ್ಷ ಜಯಂತ ಪೂಜಾರಿ, ಪಿಡಿಒ ಬಿ. ಉಗ್ಗಪ್ಪ ಮೂಲ್ಯ, ಗ್ರಾಪಂ ಸದಸ್ಯರಾದ ಯಶವಂತ ಪೂಜಾರಿ, ವಿನೋದ್ ಪೂಜಾರಿ, ಗ್ರಾಮ ಆಡಳಿತಾಧಿಕಾರಿ ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತಕ್ಷಣದ ಪರಿಹಾರವಾಗಿ ಗ್ರಾಪಂ ವತಿಯಿಂದ ಪೂವಪ್ಪಗೌಡರಿಗೆ 5,000 ರೂ.ನೆರವು ನೀಡಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News