ಕಟ್ಟಡ ಕಾಮಗಾರಿಯಲ್ಲಿ ಲೋಪವಾದರೆ ಮಾಲಕ, ಇಂಜಿನಿಯರ್ ವಿರುದ್ಧ ಕೇಸು: ಮನಪಾ ಎಚ್ಚರಿಕೆ

Update: 2024-11-22 15:01 GMT

ಮಂಗಳೂರು: ಕಟ್ಟಡ ಕಾಮಗಾರಿಯಲ್ಲಿ ಲೋಪವಾದರೆ ಮಾಲಕ, ಇಂಜಿನಿಯರ್ ಮೇಲೆ ಕೇಸು ದಾಖಲಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ.

ರಾಜ್ಯದ ಕೆಲವು ನಗರಗಳಲ್ಲಿ ಪರವಾನಿಗೆ ಪಡೆಯದೆ/ಪರವಾನಿಗೆ ಪಡೆದು ಅನುಮೋದಿತ ನಕ್ಷೆಯನ್ನು ಉಲ್ಲಂಘಿಸಿ ಹೆಚ್ಚುವರಿ ಕಟ್ಟಡ (ಮಹಡಿಗಳನ್ನು) ನಿರ್ಮಿಸಿ ಕಟ್ಟಡವು ಕುಸಿದು ಅನೇಕ ಜನರ ಪ್ರಾಣಹಾನಿಯಾಗಿದೆ. ಹಾಗಾಗಿ ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಿಸುವ ಮುನ್ನ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ನಡೆಸಿ ನುರಿತ ಇಂಜಿನಿಯರ್‌ಗಳಿಂದ ವಿನ್ಯಾಸ ಪಡೆದು ಬಳಿಕ ಪಾಲಿಕೆಯಿಂದ ವಲಯ ನಿಯಮಾವಳಿ ಅನ್ವಯ ಕಟ್ಟಡ ಪರವಾನಿಗೆ ಪಡೆಯಬೇಕು. ಈ ವಿನ್ಯಾಸದಲ್ಲಿ ಯಾವುದೇ ಲೋಪವಾಗದಂತೆ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿಕೊಂಡು ನಿಯಮಾ ನುಸಾರ ಕಟ್ಟಡವನ್ನು ನಿರ್ಮಿಸುವಂತೆ ಸೂಚಿಸಲಾಗಿದೆ.

ಕಟ್ಟಡದ ಕಾಮಗಾರಿಯಲ್ಲಿ ಯಾವುದೇ ಲೋಪದೋಷವಾಗಿ ಕಟ್ಟಡಕ್ಕೆ ಅಪಾಯವಾದಲ್ಲಿ ಅಥವಾ ಅನುಮೋದಿತ ನಕ್ಷೆ ಉಲ್ಲಂಘಿಸಿ ಹೆಚ್ಚುವರಿ ಮಹಡಿ ನಿರ್ಮಿಸಿ ಕಟ್ಟಡ ಕುಸಿದು ಯಾವುದೇ ಪ್ರಾಣಹಾನಿ ಸಂಭವಿಸಿದಲ್ಲಿ ಕಟ್ಟಡದ ಮಾಲಕರು, ಕಟ್ಟಡದ ಇಂಜಿನಿಯರ್ ಹಾಗೂ ಗುತ್ತಿಗೆದಾರರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News