ನದಿತೀರದ ರಸ್ತೆ ನಿರ್ಮಾಣ| ಹರೇಕಳದಲ್ಲಿ ಎರಡನೇ ಹಂತದ ಕಾಮಗಾರಿಗೆ ಯು.ಟಿ. ಖಾದರ್ ಶಿಲಾನ್ಯಾಸ
ಕೊಣಾಜೆ: ಕಲ್ಲಾಪುವಿನಿಂದ ಸಜಿಪದವರೆಗೆ ನದಿ ಬದಿಯ ರಸ್ತೆ ಕಾಮಗಾರಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದರ ಭಾಗವಾಗಿ ಕಲ್ಲಾಪು ಭಾಗದಲ್ಲಿ ಮೊದಲ ಹಂತ, ಇದೀಗ ಹರೇಕಳದಿಂದ ಪಾವೂರು- ಸಜಿಪ 2ನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಸಣ್ಣ ನೀರಾವರಿ ಇಲಾಖೆಗೆ ಸಲ್ಲಿಸಿದ ಪ್ರಸ್ತಾವನೆ ಅಂಗೀಕಾರವಾಗುತ್ತಿದ್ದಂತೆ ಪಾವೂರು, ಹರೇಕಳ, ಸಜಿಪ ದಂತಹ ಗ್ರಾಮೀಣ ಭಾಗವು ನಗರ ಪ್ರದೇಶಕ್ಕೆ ಹತ್ತಿರವಾಗಿ ಚಿತ್ರಣವೇ ಬದಲಾಗಲಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ.
ಹರೇಕಳ ಗ್ರಾಮದಿಂದ ಆರಂಭವಾಗಿ ಪಾವೂರು ಗ್ರಾಮ ಕೋಟೆಕಣಿ, ಸಜಿಪವರೆಗಿನ ನದಿಬದಿಯ ರಸ್ತೆ ನಿರ್ಮಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಹರೇಕಳದಿಂದ ಸಜಿಪದವರೆಗೆ ದೋಣಿ ಮೂಲಕ ತೆರಳಿದ ವಿಧಾನಸಭಾಧ್ಯಕ್ಷರು ಸ್ಥಳ ಪರಿಶೀಲನೆ ನಡೆಸಿ ಎರಡು ಬದಿಗಳಲ್ಲೂ ಶಿಲಾನ್ಯಾಸ ನೆರವೇರಿಸಿದರು.
ಭವಿಷ್ಯದ ದಿನಗಳಲ್ಲಿ ಈ ರಸ್ತೆಯು ಜನತೆಗೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ. ಪಾವೂರಿನಿಂದ ಕೆಲಸ ಇದೀಗ ಆರಂಭವಾಗಿದೆ. ಮೊದಲ ಹಂತದ ಕಾಮಗಾರಿ ರೂ.10 ಕೋಟಿ ರಸ್ತೆ ಕಾಮಗಾರಿ ಇಂದಿನಿಂದ ಆರಂಭವಾಗಿದೆ. ಹೆಚ್ಚು ವರಿ ಅನುದಾನಕ್ಕೆ ಬೇಡಿಕೆಯನ್ನು ಇಡಲಾಗಿದೆ. ಹಂತ ಹಂತವಾಗಿ ಕಾಮಗಾರಿಗಳು ಪೂರ್ಣಗೊಳ್ಳಲಿದೆ. ನಗರವನ್ನು ವೇಗವಾಗಿ ತಲುಪುವ ಉದ್ದೇಶದಿಂದ ಹಾಗೂ ಗ್ರಾಮೀಣ ಮಟ್ಟದ ಅಭಿವೃದ್ಧಿಗೆ ಇದೊಂದು ದೊಡ್ಡ ಯೋಜನೆಯಾಗಿದ್ದು, ಈ ಮೂಲಕ ಗ್ರಾಮೀಣ ಭಾಗಗಳ ಚಿತ್ರಣವೇ ಬದಲಾಗಲಿದೆ ಎಂದರು.
ಕಲ್ಲಾಪುವಿನಿಂದ ಸಜಿಪವರೆಗಿನ ರಸ್ತೆ ನಿರ್ಮಾಣಕ್ಕೆ 100 ಕೋಟಿ ರೂ. ಪ್ರಸ್ತಾವನೆಯನ್ನು ಸಣ್ಣ ನೀರಾವರಿ ಇಲಾಖೆಗೆ ಸಚಿವರ ಮೂಲಕ ಸಲ್ಲಿಸಲಾಗಿದೆ. ಶೀಘ್ರವೇ ಅಂಕಿತ ಬೀಳುವ ವಿಶ್ವಾಸವಿದೆ. ಉಳ್ಳಾಲಕ್ಕೆ ಎರಡು ಬಹುದೊಡ್ಡ ಪ್ರಾಜೆಕ್ಟ್ ಗಳು ಕೊನೆಯ ಹಂತದಲ್ಲಿರುವ ಕಾರಣ ತುಸು ವಿಳಂಬ ಮಾಡಲಾಗಿದೆ. ಇನ್ನು ಪಾವೂರು ಉಳಿಯ ತೂಗುಸೇತುವೆ ನಿರ್ಮಾಣವೂ ಅಂತಿಮ ಹಂತದಲ್ಲಿದೆ ಕಡತಗಳ ಕೆಲಸಗಳೆಲ್ಲವೂ ಮುಗಿದಿದ್ದು, ಶೀಘ್ರವೇ ಉಳಿಯ ಜನತೆಗೆ ಸೇತುವೆ ನಿರ್ಮಾಣಗೊಳ್ಳಲಿದೆ ಎಂದರು.
ಈ ಸಂದರ್ಭ ಮಂಗಳೂರು ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು, ಪಾವೂರು ಗ್ರಾಮ ಪಂ. ಅಧ್ಯಕ್ಷರಾದ ಅಬ್ದುಲ್ ಮಜೀದ್, ಪಾವೂರು ಗ್ರಾಮ ಪಂ. ಸದಸ್ಯರಾದ ರಿಯಾಝ್ ಅಹ್ಮದ್ ಪಾವೂರು, ರವಿಕಲಾ, ಪುಷ್ಪ ಭಂಡಾರಿ, ಚೆನ್ನಮ್ಮ, ಅನ್ಸಾರ್ ಇನೋಳಿ, ಇಕ್ಬಾಲ್ ಇನೋಳಿ, ವಲೇರಿಯನ್ ಡಿಸೋಜ ಪಾವೂರು ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಹನೀಫ್ ಕೆಎಂ, ಉಪಾಧ್ಯಕ್ಷರಾದ ದಿನೇಶ್ ಪೂಜಾರಿ, ಪಾವೂರು ಗ್ರಾಮ ಪಂ. ಮಾಜಿ ಸದಸ್ಯರಾದ ವಿವೇಕ್ ರೈ, ಅಬ್ದುಲ್ ಖಾದರ್, ಮಹಮ್ಮದ್ ಬದ್ರಿಯಾ ನಗರ, ಹಸನ್ ಎಂಪಿ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಇರ್ಫಾನ್ ಡಿ, ಮುಬಾರಕ್ ಇನೋಳಿ, ಶಬೀರ್ ಇನೋಳಿ, ಹೈದ್ರೂಸ್, ಆಸೀಫ್ ಇನೋಳಿ, ಇಮ್ತಿಯಾಜ್ ಎಂ ಹೆಚ್, ಸಮದ್ ಇನೋಳಿ, ಹುಸೈನ್ ಕಡವು, ಫಾರೂಕ್ ಇನೋಳಿ, ಇಕ್ಬಾಲ್, ಇನೋಳಿ ಮಸೀದಿ ಅಧ್ಯಕ್ಷರಾದ ಅಬ್ಬಾಸ್ ಟಿ. ಹೆಚ್, ಹೈದರ್ ಸಖಾಫಿ, ಅಝೀಜ್ ಸಖಾಫಿ, ಕ್ಯಾನಟ್ ಡಿಸೋಜ, ಅನಿಲ್ ಡಿಸೋಜ, ಆಸೀಫ್, ಶರೀಫ್ ಕಿಲ್ಲೂರು, ರಿಯಾಝ್ , ಅಯೂಬ್ ಕೆಳಗಿನ ಕೆರೆ, ಫಾರೂಕ್ ಮುಕ್ರಿ , ಉಮರ್ ಆಹಾಸನಿ ಉಸ್ತಾದ್, .ಕುಂಞಿಮೋನು ಮುಂತಾದ ಉಪಸ್ಥಿತರಿದ್ದರು.