ಸುಳ್ಯ| ಬಸ್ಸಿನಿಂದ ವಿದ್ಯಾರ್ಥಿ ರಸ್ತೆಗೆ ಎಸೆಯಲ್ಪಟ್ಟ ಪ್ರಕರಣ ಸಾಬೀತು: ಬಸ್ ಚಾಲಕ, ನಿರ್ವಾಹಕನಿಗೆ ಜೈಲುಶಿಕ್ಷೆ, ದಂಡ

Update: 2025-01-07 16:58 GMT

ಸುಳ್ಯ: ಬಸ್ಸಿನಿಂದ ವಿದ್ಯಾರ್ಥಿ ರಸ್ತೆ ಗೆಸೆಯಲ್ಪಟ್ಟ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪ ಸಾಬೀತಾಗಿದ್ದು, ಬಸ್ಸಿನ ಚಾಲಕ ಹಾಗೂ ನಿರ್ವಾಹಕನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

2019 ಆ.24ರಂದು ಘಟನೆ ನಡೆದಿದ್ದು, ಬಸ್ ಚಾಲಕ ವಿಷ್ಣು ಕುಮಾರ್ ಮತ್ತು ನಿರ್ವಾಹಕ ವಿಜಯಕುಮಾರ್ ಅವರು ಬಸ್ಸಿನಲ್ಲಿ ನಿಂತಿಕಲ್ಲು ಕಡೆಯಿಂದ ಕಾಣಿಯೂರು ಕಡೆಗೆ ಸಂಚರಿಸುವ ವೇಳೆ ನಿರ್ಲಕ್ಷ್ಯತನದಿಂದ ಪ್ರಯಾಣಿಕರು ಹತ್ತುವ ಹಾಗೂ ಇಳಿಯುವ ದ್ವಾರದ ಬಾಗಿಲುಗಳನ್ನು ಮುಚ್ಚಿ ಭದ್ರಪಡಿಸದೆ, ವಿಷ್ಣು ಕುಮಾರ್ ಬಸ್ಸನ್ನು ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಕಡಬ ತಾಲೂಕು ಬೆಳಂದೂರು ಎಂಬಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿ ಮಹಮ್ಮದ್ ಅಫೀಝ್‌ ಎಂಬವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಧೀಶರಾದ ಅರ್ಪಿತಾ ಅವರು ಆರೋಪಿಗಳ ಅಪರಾಧ ಸಾಬೀತಾಗಿದ್ದು ಅವರನ್ನು ದೋಷಿ ಎಂದು ಘೋಷಿಸಿ, ಒಂದನೇ ಆರೋಪಿಗೆ ಕಲಂ 279 ರಡಿಯಲ್ಲಿ 1 ತಿಂಗಳ ಸಾದಾ ಕಾರಾಗೃಹ ವಾಸ ಮತ್ತು ರೂ. 1000/- ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನಗಳ ಸಾದಾ ಕಾರಾಗೃಹವಾಸ, ಎರಡನೇ ಆರೋಪಿಗೆ ಕಲಂ 336 ರಡಿಯಲ್ಲಿ 1 ತಿಂಗಳ ಸಾದಾ ಕಾರಾಗೃಹವಾಸ ಮತ್ತು ರೂ. 250/- ದಂಡ, ದಂಡ ತೆರಲು ತಪ್ಪಿದಲ್ಲಿ 15 ದಿನಗಳ ಸಾದಾ ಕಾರಾಗೃಹವಾಸ ಶಿಕ್ಷೆಗೆ ಆದೇಶ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News