ಅಕ್ರಮ ಹಣ ವರ್ಗಾವಣೆಯ ಹೆಸರಿನಲ್ಲಿ ವ್ಯಕ್ತಿಗೆ ವಂಚನೆ: ಪ್ರಕರಣ ದಾಖಲು

Update: 2024-09-09 14:23 GMT

ಸುರತ್ಕಲ್: ಅಕ್ರಮ ಹಣ ವರ್ಗಾವಣೆಯ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ 30 ಲಕ್ಷ ರೂ. ಮೋಸ ಮಾಡಿರುವ ಕುರಿತು ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ.2ರಂದು ಸಂತ್ರಸ್ತಗೆ ಮುಂಬೈ ಭ್ರಷ್ಟಾಚಾರ ನಿಗ್ರಹ ದಳ ಡಿಐಜಿ ಎಂದು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿಯೋರ್ವ, ನಿಮ್ಮ ಹೆಸರಿನಲ್ಲಿ ಇರಾನ್ ದೇಶಕ್ಕೆ ಕಳುಹಿಸಲಾಗಿದ್ದ ಪಾರ್ಸೆಲ್‌ ನಲ್ಲಿ ಮಾದಕ ವಸ್ತು ಪತ್ತೆಯಾಗಿದೆ. ನಿಮ್ಮ ಹೆಸರಿನಲ್ಲಿ 24 ಸುಳ್ಳು ಎಕೌಂಟ್‌ ಗಳನ್ನು ಸೃಷ್ಠಿಸಿ 24 ಮಿಲಿಯನ್‌ ಡಾಲರ್‌ ಹಣ ಹವಾಲ ಮೂಲಕ ವರ್ಗಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಎಲ್ಲಾ ಎಕೌಂಟ್‌ಗಳು ಭಾರತೀಯ ರಿಸರ್ವ್‌ ಬ್ಯಾಂಕ್‌ ನ ಕಣ್ಗಾವಲಿನಲ್ಲಿದೆ.

ಅಲ್ಲದೆ, ತಮ್ಮ ಹೆಸರಿನಲ್ಲಿರುವ ಎಲ್ಲಾ ಎಕೌಂಟ್‌ ಗಳಲ್ಲಿರುವ ಹಣವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಖಾತೆಗೆ ವರ್ಗಾ ಯಿಸುವಂತೆ ಹೇಳಿದ್ದನು. ಅದರಂತೆ ಸಂತ್ರಸ್ತನು, ಒಂದು ಬ್ಯಾಂಕ್ ನಲ್ಲಿದ್ದ 19 ಲಕ್ಷ ರೂ. ಮತ್ತು 11 ಲಕ್ಷ ರೂ.ಯನ್ನು ಆತ ಹೇಳಿದ್ದ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿದ್ದರು. ಸೆ.3ರಂದು ಮತ್ತೆ ಕರೆ ಮಾಡಿದ ಅದೇ ವ್ಯಕ್ತಿ ತಮ್ಮ ಹೆಸರಿನಲ್ಲಿರುವ ಐಸಿಐಸಿಐ ಬ್ಯಾಂಕ್‌ ಮತ್ತು ಎಚ್‌ ಡಿಎಫ್‌ ಸಿ ಬ್ಯಾಂಕ್‌ ಖಾತೆಯಲ್ಲಿರುವ ಹನವನ್ನು ವರ್ಗಾಯಿಸುವಂತೆ ಸೂಚಿಸಿದ್ದ. ಅದರಂತೆ ಅವರು ಮಂಗಳೂರಿನ ಮಾರ್ನಮಿಕಟ್ಟೆಯ ಐಸಿಐಸಿಐ ಬ್ಯಾಂಕ್‌ ತೆರಳಿ ಹಣರ್ವಾಗಣೆ ಮಾಡಲು ಮುಂದಾಗಿದ್ದರು. ಆಗ ಬ್ಯಾಂಕ್‌ ವ್ಯವಸ್ಥಾಪರು ಅದು ವಂಚಕರ ಕರೆಯಾಗಿದ್ದು, ಹಣ ವರ್ಗಾಯಿಸದಂತೆ ತಡೆದರು ಎಂದು ತಿಳಿದು ಬಂದಿದೆ.

ಬಳಿಕ ಅನಾಮಿಕ ವ್ಯಕ್ತ ಕರೆ ಮಾಡದಾಗ ಎರಡೂ ಎಕೌಂಟ್‌ ಗಳಿಂದ ಪಡೆದುಕೊಂಡಿದ್ದ 30 ಲಕ್ಷ ರೂ. ಹಣವನ್ನು ಹಿಂದಿರುಗಿಸುವಂತೆ ಹೇಳಿದಾಗ ಐಸಿಐಸಿಐ ಬ್ಯಾಂಕ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ನಲ್ಲಿರುವ ಹಣವನ್ನೂ ವರ್ಗಾಯಿಸಿದ ಬಳಿಕ ಒಟ್ಟಿಗೆ ಹಿಂದಿರುಗಿಸುವುದಾಗಿ ಹೇಳಿ ಕರೆ ಕಟ್‌ ಮಾಡಿದ್ದು, ಬಳಿಕ ಆತನ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ ಎಂದು ಸಂತ್ರಸ್ತ ಸುರತ್ಕಲ್‌ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಸಂತ್ರಸ್ತನ ದೂರಿನಂತೆ ಸುರತ್ಕಲ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News