ಮೀಫ್, 'ಏಸ್' ಐಎಎಸ್ ಅಕಾಡೆಮಿ ಸಹಭಾಗಿತ್ವದಲ್ಲಿ ನಾಗರಿಕ ಸೇವೆ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರೇರಣಾ ಶಿಬಿರ

Update: 2023-09-16 11:54 GMT

ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಮತ್ತು ಮಂಗಳೂರು 'ಏಸ್' ಐಎಎಸ್ ಫೌಂಡೇಶನ್ ಸಹಭಾಗಿತ್ವದಲ್ಲಿ ಮಂಗಳೂರು ಅಡ್ಯಾರ್ ಬರಕಾ ಇಂಟರ್ನ್ಯಾಷನಲ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಐಎಎಸ್, ಐಪಿಎಸ್ ಮೊದಲಾದ ನಾಗರಿಕ ಸೇವೆ ಪರೀಕ್ಷೆಗಳ ಆಯ್ಕೆ ಟ್ರಯಲ್ಸ್ ನ ಅಂಗವಾಗಿ ಜಿಲ್ಲಾ ಮಟ್ಟದ ಪ್ರೇರಣಾ ಶಿಬಿರ ಆಯೋಜಿಸಲಾಗಿತ್ತು.

ಶಿಬಿರ ಉದ್ಘಾಟಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ದ. ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ,  ವಿದ್ಯಾರ್ಥಿಗಳು ದೇಶದ ಶ್ರೇಷ್ಠ ಸಂಪತ್ತು, ಇಂತಹ ಶಿಬಿರಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಸರಿಯಾದ ಗುರಿಯತ್ತ ಕೊಂಡೊಯ್ಯಲು ಸಹಕಾರಿ ಎಂದರು.

ಅಧ್ಯಕ್ಷತೆಯನ್ನು ಮೀಫ್ ಅಧ್ಯಕ್ಷ ಮೂಸಬ್ಬ ಪಿ. ಬ್ಯಾರಿ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಆನಿವಾಸಿ ಉದ್ಯಮಿ ಶರೀಫ್ ಜೋಕಟ್ಟೆ, ಬರಕಾ ಸ್ಕೂಲ್ ಚೇರ್ಮನ್ ಅಶ್ರಫ್, ಏಸ್ ಫೌಂಡೇಶನ್ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಗ್ರೂಪ್ 4, ಶಾಹುಲ್ ಭಾಗವಹಿಸಿದ್ದರು.

ಮೀಫ್ ಉಪಾಧ್ಯಕ್ಷ ಮಮ್ತಾಝ್ ಅಲಿ ಸ್ವಾಗತಿಸಿ‌, ವಿಷಯ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಉಪಾಧ್ಯಕ್ಷ ಮುಸ್ತಾಫ ಸುಳ್ಯ, ಪ್ರಧಾನ ಕಾರ್ಯದರ್ಶಿ ರಿಯಾಝ್ ಟ್ಯಾಲೆಂಟ್,‌ ಖಜಾಂಚಿ ನಿಸಾರ್ ಕೋಸ್ಟಲ್, ಕಾರ್ಯಕ್ರಮ ಕಾರ್ಯದರ್ಶಿ ಶಾರಿಕ್, ಹನೀಫ್ ಬರಕಾ ಮೊದಲಾದವರು ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರು ರಾಷ್ಟ್ರೀಯ ತರಬೇತುದಾರರುಗಳಾದ ಸಯ್ಯದ್ ಸಾದಾತ್ ಪಾಷಾ, ಮಹಮ್ಮದ್ ಅಮೀನ್ ಭಾಗವಹಿಸಿದ್ದರು.

ಸಂಚಾಲಕರಾಗಿ ಅನ್ವರ್ ಹುಸೈನ್ ಮತ್ತು ಏಸ್ ಫೌಂಡೇಶನ್ ನ ನಝಿರ್ ಕಾರ್ಯಕ್ರಮದ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದರು. ಶಿಬಿರದಲ್ಲಿ 300 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಿಲ್ಲೆಯ ಆಯ್ದ 25 ವಿದ್ಯಾಸಂಸ್ಥೆಗಳಲ್ಲಿ ಪರಿಣತರಿಂದ ಇಂತಹ ಶಿಬಿರಗಳನ್ನು ನಡೆಸಲಾಗುವುದು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಬರಕಾ ವಿದ್ಯಾಸಂಸ್ಥೆ ವಹಿಸಿತ್ತು.








 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News