ಅರಗ ಜ್ಞಾನೇಂದ್ರರ ಬಂಧನಕ್ಕೆ ಸಿಪಿಐ ಆಗ್ರಹ

Update: 2023-08-04 17:42 GMT

ಅರಗ ಜ್ಞಾನೇಂದ್ರ

ಮಂಗಳೂರು, ಆ.4: ಮಾಜಿ ಗೃಹ ಸಚಿವರಾದ ಅರಗ ಜ್ಞಾನೇಂದ್ರರವರು, ಕಸ್ತೂರಿ ರಂಗನ್ ವರದಿಯ ವಿರುದ್ಧ ಮಾತನಾಡುವಾಗ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಾಡು ಬೆಳೆಸಲು ಗಮನ ನೀಡಲಿಲ್ಲವೆಂದು ಟೀಕಿಸುವ ಭರದಲ್ಲಿ ಈ ಪ್ರದೇಶದ ಜನರನ್ನು ಮತ್ತು ನಾಯಕರನ್ನು ಬಣ್ಣದ ಆಧಾರದಲ್ಲಿ ಅಪಮಾನಿಸುವ ವ್ಯಂಗಭರಿತ ಮಾತುಗಳನ್ನಾಡಿದ್ದಾರೆ. ಇದೊಂದು ಜಾತಿ ತಾರತಮ್ಯದ ದುರಹಂಕಾರದ ದುರ್ವರ್ತನೆಯಾಗಿದೆ ಎಂದು ಸಿಪಿಎಂ ಅಭಿಪ್ರಾಯಪಟ್ಟಿದೆ.

ಸಿಪಿಐಎಂ ಈ ಅಪಮಾನದ ಹಾಗೂ ವರ್ಣದ ಆಧಾರದಲ್ಲಿ ಕೀಳಾಗಿ ಕಾಣುವ ಈ ಜಾತಿ ತಾರತಮ್ಯದ ದುರಹಂಕಾರವನ್ನು ಬಲವಾಗಿ ಖಂಡಿಸುತ್ತದೆ. ರಾಜ್ಯ ಸರಕಾರ ಈ ಕೂಡಲೇ ಅವರ ಬಂದನಕ್ಕೆ ಅಗತ್ಯ ಕ್ರಮವಹಿಸಬೇಕೆಂದು ಬಲವಾಗಿ ಒತ್ತಾಯಿಸುತ್ತದೆ ಎಂದು ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಹೇಳಿದ್ದಾರೆ.

ಅವರು ಕೇವಲ ಕೆಲ ನಾಯಕರನ್ನು ನಿಂದಿಸಿದ್ದು ಮಾತ್ರವಲ್ಲಾ, ಇಡೀ ಕಲ್ಯಾಣ ಕರ್ನಾಟಕದ ಜನತೆಯನ್ನು ಪ್ರತ್ಯಕ್ಷವಾಗಿ ಮತ್ತು ಜಗತ್ತಿನ ಎಲ್ಲ ಕಪ್ಪು ಬಣ್ಣದ ಜನತೆಯನ್ನು ಅಪ್ರತ್ಯಕ್ಷವಾಗಿ ಅಪಮಾನಿಸಿದ್ದಾರೆ.

ಅರಗ ಜ್ಞಾನೇಂದ್ರ ರಾಜ್ಯ ಗೃಹ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದವರು, ದೇಶದ ಹಾಗೂ ರಾಜ್ಯದ ಕಾನೂನಿನ ಆಡಳಿತದ ನಿರ್ವಹಣೆ ಮಾಡಿದವರು. ಕಾನೂನಿನ ಮುಂದೆ ಎಲ್ಲರೂ ಸಮಾನರೆಂಬ ಭಾರತ ಸಂವಿಧಾನದ ಅರಿವನ್ನು ಹೊಂದಿರುವವರು, ಆದಾಗಲೂ, ಸಂವಿಧಾನ ಮತ್ತು ಕಾನೂನಿನ ಆಡಳಿತಕ್ಕೆ ವ್ಯತಿರಿಕ್ತವಾಗಿ ಈ ರೀತಿ ಪದ ಬಳಕೆ ಮಾಡಿರುವುದು ಅಕ್ಷಮ್ಯವಾಗಿದೆ. ಪದಗಳನ್ನು ಬಳಸುವಾಗ ಎಚ್ಚರಿಕೆಯನ್ನು ಹೊಂದಿರಬೇಕು.ಈ ಜಾತಿ ಹಾಗೂ ಲಿಂಗ ಮತ್ತು ವರ್ಣ ತಾರತಮ್ಯದ ದುರಹಂಕಾರವನ್ನು ರಾಜ್ಯದ ಜನತೆ ಬಲವಾಗಿ ಪ್ರತಿರೋಧಿಸ ಬೇಕೆಂದು ಸಿಪಿಐ(ಎಂ) ಕರೆ ಕೆ.ಯಾದವ್ ಶೆಟ್ಟಿ ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News