ದ.ಕ. ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಶೇ.90ರಷ್ಟು ಸಾಧನೆ : ಭರತ್ ಮುಂಡೋಡಿ

Update: 2024-08-14 14:34 GMT

ಮಂಗಳೂರು, ಆ.14: ದ.ಕ.ಜಿಲ್ಲೆಯಲ್ಲಿ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶಸ್ವಿಯಾಗಿ, ಜನಪರವಾಗಿ ಅನುಷ್ಠಾನ ಆಗಿದ್ದು, ಶೇ.90ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ತಿಳಿಸಿದ್ದಾರೆ.

ನಗರದ ಉರ್ವ ಸ್ಟೋರ್‌ನ ದ.ಕ.ಜಿಲ್ಲಾ ಪಂಚಾಯತ್ ಕಟ್ಟಡದಲ್ಲಿ ಬುಧವಾರ ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರ ಕಚೇರಿ ಉದ್ಘಾಟನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಯೋಜನೆಗಳಲ್ಲಿ ತಾಂತ್ರಿಕ ಕಾರಣದಿಂದಾಗಿ ಸೌಲಭ್ಯ ಪಡೆಯಲು ಬಾಕಿ ಇರುವ ಶೇ 10ರಷ್ಟು ಫಲಾನುಭವಿಗಳಿಗೆ ಅವರ ಸಮಸ್ಯೆಯನ್ನು ಬಗೆಹರಿಸಿ ಶೀಘ್ರದಲ್ಲೇ ದೊರಕಿಸಿಕೊಡಲು ಶ್ರಮಿಸಲಾಗುವುದು ಎಂದರು.

ಯೋಜನೆಗಳ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದಲ್ಲಿ 21 ಸಮಿತಿ ಮಂದಿಯ ಸಮಿತಿಯನ್ನು ಸರಕಾರ ರಚನೆ ಮಾಡಿದ್ದು, ತಾಲೂಕು ಮಟ್ಟದ ಅನುಷ್ಟಾನ ಸಮಿತಿಗೆ ಅಧ್ಯಕ್ಷರ ನೇಮಕ ಈಗಾಗಲೇ ನಡೆದಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಮಟ್ಟದ ಅನುಷ್ಟಾನ ಸಮಿತಿ ರಚನೆಯಾಗುವ ಮೊದಲೇ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ವಿವಿಧ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳಿಗೆ ಸರಕಾರ ಸೌಲಭ್ಯಗಳನ್ನು ತಲುಪಿಸಿದ್ದಾರೆ. ಇನ್ನುಳಿದ 10ರಷ್ಟು ಫಲಾನುಭವಿ ಗಳಿಗೆ ಸೌಲಭ್ಯ ದೊರಕಿರುವ ವಿಚಾರದಲ್ಲಿ ಎದುರಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ದ.ಕ. ಜಿಲ್ಲಾ ಅನುಷ್ಠಾನ ಸಮಿತಿಗೆ ಮೊದಲು ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಇದ್ದರು. ಈಗ ಸರಕಾರ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಜಿ.ಪಂ ಸಿಇಒ ಅವರನ್ನು ಸರಕಾರ ನಿಯೋಜಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಶೇ 91 ಪ್ರಗತಿ ಸಾಧಿಸಲಾಗಿದೆ. ಯೋಜನೆಯಲ್ಲಿ 4,03,333 ಮಂದಿ ಅರ್ಜಿ ಹಾಕಿದ್ದಾರೆ. ಇವರಲ್ಲಿ 3,66,786 ಮಂದಿ ಫಲಾನುಭವಿಗಳ ಆಯ್ಕೆ ಆಗಿದೆ. ಹಣ ಫಲಾನುಭವಿಗಳಿಗೆ ಪಾವತಿ ಮಾಡಲಾಗಿದೆ ಎಂದು ಮುಂಡೋಡಿ ವಿವರ ನೀಡಿದರು.

ಗೃಹ ಜ್ಯೋತಿ ಯೋಜನೆಯಲ್ಲಿ ಮೆಸ್ಕಾಂನಲ್ಲಿ ಗುರುತಿಸಲಾದ 5,61,132 ಫಲಾನುಭವಿಗಳಲ್ಲಿ 5,51,093 ಮಂದಿ ನೋಂದಾಯಿಸಿದ್ದಾರೆ. ಶೇ 98.21 ಮಂದಿ ಪ್ರಯೋಜನ ಪಡೆದಿದ್ದಾರೆ. ಯುವ ನಿಧಿ ಯೋಜನೆಯಲ್ಲಿ 3,959 ಮಂದಿ ನೋಂದಾಯಿಸಿದ್ದಾರೆ. 3,153 ಫಲಾನುಭವಿಗಳ ಆಯ್ಕೆಯಾಗಿದ್ದಾರೆ ಇವರಿಗೆ ಈಗಾಗಲೇ 1,55,55000 ಫಲಾನುಭವಿ ಗಳಿಗೆ ಸಿಕ್ಕಿದೆ. 441 ಮಂದಿಯ ಮ್ಯಾನುಲ್ ವೆರಿಫಿಕೇಶನ್ ಬಾಕಿ ಇದೆ. 25 ಮಂದಿಯ ಅರ್ಜಿ ತಿರಸ್ಕೃತಗೊಂಡಿದೆ.340 ಅರ್ಜಿಯ ವೆರಿಫಿಕೇಶನ್ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.

ಶಕ್ತಿ ಯೋಜನೆಯಡಿ ದ.ಕ.ಜಿಲ್ಲೆಯಲ್ಲಿ 5,19,29,596 ಮಂದಿ ಮಹಿಳೆಯರು ಉಚಿತವಾಗಿ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಕೆಎಸ್‌ಆರ್‌ಟಿಸಿ 17.09ಕೋಟಿ ರೂ.ಸರಕಾರದಿಂದ ಹಣ ಬಿಡುಗಡೆಯಾಗಿದೆ. ಅನ್ನ ಭಾಗ್ಯ ಯೋಜನೆಯಲ್ಲಿ 18,06, 63,930 ರೂ.ಹಣ ಫಲಾನುಭವಿಗಳಿಗೆ ಪಾವತಿಸಲಾಗಿದೆ.

ಗೃಹಲಕ್ಷ್ಮೀ ಯೋಜನೆಯಡಿ ಜಿಎಸ್‌ಟಿ ಮತ್ತು ಆದಾಯ ತೆರಿಗೆ ಸಮಸ್ಯೆ ಎದುರಿಸುತ್ತಿರುವ ಫಲಾನುಭವಿಗಳ ಸಮಸ್ಯೆ ಬಗೆಹರಿಸಲು ರಾಜ್ಯ ಮಟ್ಟದ ಸಮಿತಿಯೊಂದಿಗೆ ಚರ್ಚಿಸಿಲಾಗುವುದು

ತಾಲೂಕು ಮಟ್ಟದ ಸಮಿತಿ ಸಭೆಯಲ್ಲಿ ಚರ್ಚಿಸಿ ಬಗೆಹರಿಸಲಾಗುವುದು. 5,721 ಮಂದಿ, ಆದಾಯ ತೆರಿಗೆ ಇದೆ. ಜಿಎಸ್‌ಟಿ ಸಮಸ್ಯೆ 3,572 ಮಂದಿಗೆ ಇದೆ. ಇದರಲ್ಲಿ 679 ಮಂದಿಯ ಅರ್ಜಿ ಪರಿಹಾರ ಹಂತದಲ್ಲಿ ದೆ. ಅವರಿಗೆ ಎನ್‌ಒಸಿ ಸಿಕ್ಕಿದೆ ಎಂದು ಭರತ್ ಮುಂಡೋಡಿ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ದ.ಕ. ಜಿ.ಪಂ ಮುಖ್ಯ ಸಿಇಒ ಹಾಗೂ ಸದಸ್ಯ ಕಾರ್ಯದರ್ಶಿ ಡಾ. ಆನಂದ್ ಕೆ, ಸಮಿತಿ ಉಪಾಧ್ಯಕ್ಷ ರಾದ ಜೋಕಿಂ ಡಿ ಸೋಜ, ನಾರಾಯಣ ನಾಯ್ಕ, ಸದಸ್ಯರಾದ ಶಾಹುಲ್ ಹಮೀದ್, ಸುಧೀರ್ ಕುಮಾರ್ ಶೆಟ್ಟಿ, ಎಸ್. ಶಾಹುಲ್ ಹಮೀದ್ ಕೆ, ರಫೀಕ್,ಸುರೇಂದ್ರ ಬಿ ಕಂಬಳಿ, ಜಯಂತಿ ಬಿ.ಎ ಮತ್ತಿತತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News