ಪಕ್ಕಲಡ್ಕ ಯುವಕ ಮಂಡಲದಿಂದ ಕಣ್ಣಿನ ತಪಾಸಣಾ ಶಿಬಿರ

Update: 2023-08-13 15:58 GMT

ಮಂಗಳೂರು : ಪಕ್ಕಲಡ್ಕ ಯುವಕ ಮಂಡಲವು ಸ್ಥಳೀಯ ಜನರ ನೋವು ನಲಿವುಗಳಿಗೆ ಸದಾ ಸ್ಪಂದಿಸುತ್ತಾ ನಿರಂತರ ಜನಪರ ಚಟುವಟಿಕೆಗಳನ್ನು ಸಂಘಟಿಸುವ ಮೂಲಕ ಈ ಭಾಗದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿವೆ ಎಂದು ಸಾಮರಸ್ಯ ಬಳಗ ಮಂಗಳೂರು ಇದರ ಸಂಚಾಲಕಿ ಮಂಜುಳಾ ನಾಯಕ್ ಅಭಿಪ್ರಾಯಪಟ್ಟರು.

ಪಕ್ಕಲಡ್ಕ ಯುವಕ ಮಂಡಲ, ಸಾಮರಸ್ಯ ಬಳಗ ಮಂಗಳೂರು ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಬಜಾಲ್‌ನ ಭಗತ್ ಸಿಂಗ್ ಭವನದಲ್ಲಿ ರವಿವಾರ ನಡೆದ ಉಚಿತ ಕಣ್ಣಿನ ತಪಾಸಣಾ ಶಿಬಿರ ಹಾಗೂ ಕನ್ನಡಕ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

70 ವರ್ಷದ ಹಿಂದೆ ಪ್ರಾರಂಭಗೊಂಡ ಈ ಸಂಸ್ಥೆಯು ಮಾದರಿ ಯೋಗ್ಯವಾಗಿದೆ. ಆದರೆ ಜಿಲ್ಲಾಡಳಿತ ಇದನ್ನು ಗುರುತಿಸಿ ಪ್ರೋತ್ಸಾಹ ನೀಡದಿರುವುದು ವಿಪರ್ಯಾಸ ಎಂದರು.

ಮುಖ್ಯ ಅತಿಥಿಯಾಗಿ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಭಾಗವಹಿಸಿ ಮಾತನಾಡಿದರು. ವೇದಿಕೆ ಯಲ್ಲಿ ವೈದ್ಯೆ ಡಾ ಅಕ್ಷತಾ, ಪಕ್ಕಲಡ್ಕ ಯುವಕ ಮಂಡಲದ ಮಾಜಿ ಅಧ್ಯಕ್ಷ ಬಿ. ನಾಗೇಶ್ ಶೆಟ್ಟಿ, ಮಾಜಿ ಕಾರ್ಯದರ್ಶಿ ಜಗದೀಶ್ ಬಜಾಲ್, ಡಿವೈಎಫ್‌ಐ ಬಜಾಲ್ ಘಟಕದ ಅಧ್ಯಕ್ಷ ಜಗದೀಶ್ ಕುಲಾಲ್ ಉಪಸ್ಥಿತರಿದ್ದರು.

ಪಕ್ಕಲಡ್ಕ ಯುವಕ ಮಂಡಲ ಅಧ್ಯಕ್ಷ ದೀಪಕ್ ಬಜಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರೀತೇಶ್ ತಲವಾರು, ಜೊತೆ ಕಾರ್ಯದರ್ಶಿ ಧೀರಜ್ ಬಜಾಲ್ ವಂದಿಸಿದರು. ಕಾರ್ಯಕ್ರಮದ ನೇತೃತ್ವವನ್ನು ಯುವಕ ಮಂಡಲದ ಪದಾಧಿಕಾರಿಗಳಾದ ದೀಕ್ಷಿತ್ ಭಂಡಾರಿ, ನಾಗರಾಜ್ ಬಜಾಲ್, ಪ್ರಕಾಶ್ ಶೆಟ್ಟಿ, ಆನಂದ ಎನೆಲ್ಮಾರ್, ಅಶೋಕ ಎನೆಲ್ಮಾರ್, ಅಖಿಲೇಶ್, ಲೋಕೇಶ್ ಎಂ, ಕಮಲಾಕ್ಷ ಶೆಟ್ಟಿ, ಹರಿಹರನ್, ವರಪ್ರಸಾದ್, ಪ್ರದೀಪ್ ಶೆಟ್ಟಿ, ಅಶೋಕ್ ಸಾಲ್ಯಾನ್ ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News