ಬಂಟ್ವಾಳದ ನೆರೆ ಬಾಧಿತ ಪ್ರದೇಶಗಳ ಶಾಲೆಗಳಿಗೆ ಮಾತ್ರ ಜು.24ರಂದು ರಜೆ: ತಹಶೀಲ್ದಾರ್
Update: 2023-07-24 03:49 GMT
ಬಂಟ್ವಾಳ : ಕಳೆದೆರಡು ದಿನಗಳಿಂದ ರಾಜ್ಯದಂತ ಹೆಚ್ಚಿನ ಮಳೆಯಾಗುತ್ತಿದ್ಸು, ಬಂಟ್ವಾಳ ತಾಲೂಕಿನ ನೇತ್ರಾವತಿ ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ತೊಂದರೆಯಾಗುವ ನದಿ ತೀರದ ಆಯ್ದ ಕೆಲವು ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಬಂಟ್ವಾಳ ತಹಶಿಲ್ದಾರ್ ಪ್ರಕಟನೆ ತಿಳಿಸಿದೆ.
ಹಯತುಲ್ ಶಾಲೆ ಗೂಡಿನಬಳಿ, ಕಿರಿಯ ಪ್ರಾಥಮಿಕ ಶಾಲೆ ವಳವೂರು, ಶಾರದಾ ಮತ್ತು ಎಸ್.ಎಲ್.ಎನ್.ಪಿ. ಪಾಣೆಮಂಗಳೂರು, ಎಲ್.ಸಿ.ಆರ್. ಕಕ್ಕೆಪದವು, ಕೆ.ಪಿ.ಎಸ್. ಮೊಂಟೆಪದವು, ಕುನಿಲ್ ಶಾಲೆ ತುಂಬೆ. ಬಿ.ಎ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆ, ಪೆರ್ಲ ಬಿಯಪಾದ ಶಾಲೆ, ಸರಪಾಡಿ ಪ್ರೈಮರಿ ಶಾಲೆ, ಹೆಗಡೆ ಶಾಲೆ, ಪೂಪಾಡಿ ಕಟ್ಟಿ ಶಾಲೆ, ದಡ್ಡಲಕಾಡು ಶಾಲೆ, ಎರ್ಮಲಪದವು, ಮಜ್ಲಿಸ್ ಶಾಲೆಗಳಿಗೆ ರಜೆ ಸಾರಲಾಗಿದ್ದು, ಉಳಿದಂತೆ ಇತರ ಎಲ್ಲ ಶಾಲೆಗಳು ಎಂದಿನಂತೆ ಕಾರ್ಯಾಚರಿಸಲಿವೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ.