ಬಂಧುತ್ವ ಚಾರಿಟೇಬಲ್ ಟ್ರಸ್ಟ್ ನ ಕಚೇರಿ ಉದ್ಘಾಟನೆ, ಸಮವಸ್ತ್ರದ ಚೆಕ್ ವಿತರಣೆ
ಉಳ್ಳಾಲ : ಬಡವರಿಗೆ ಸಹಾಯ ಸಹಕಾರ ಮಾಡುವ ಗುಣ ನಮ್ಮಲ್ಲಿರಬೇಕು.ಇನ್ನೊಬ್ಬರಿಗೆ ಮಾಡಿದ ಸಹಾಯ ಅದು ಶಾಶ್ವತ ಆಗಿರುತ್ತದೆ ಇಂತಹ ಕಾರ್ಯವನ್ನು ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿರುವುದು ಸ್ವಾಗತಾರ್ಹ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು
ಅವರು ತೊಕ್ಕೊಟ್ಟು ಗ್ರೀನ್ ಸಿಟಿಯಲ್ಲಿ ನಡೆದ ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಇದರ ನೂತನ ಕಚೇರಿ ಉದ್ಘಾಟನೆ , ಅಂಗನವಾಡಿ ಮಕ್ಕಳಿಗೆ ಕುರ್ಚಿ, ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ದ ನಗದು ಚೆಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಸ್ಮಾಯಿಲ್ ಶಾಫಿ ಬಬ್ಬುಕಟ್ಫೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಸನ್ ಅಬೂಬಕ್ಕರ್ ಅಶ್ರಫಿ ಹಮ್ದಾನಿ ದುಆ ನೆರವೇರಿಸಿದರು. ಮಸ್ಜಿದುಲ್ ಹುದಾ ಅಧ್ಯಕ್ಷ ಯು.ಎಂ.ಹಸನಬ್ಬ ಕಚೇರಿಯನ್ನು ಉದ್ಘಾಟಿಸಿದರು.
ಕ್ಷೇತ್ರದ ಶಿಕ್ಷಣಾಧಿಕಾರಿ ಈಶ್ವರ್, ನಿವೃತ್ತ ಮುಖ್ಯೋಪಾಧ್ಯಾಯ ರವೀಂದ್ರ ರೈ ಹರೇಕಳ, ತ್ಯಾಗಂ ಹರೇಕಳ ಮಾತನಾಡಿದರು.
ಕಾರ್ಯಕ್ರಮ ದಲ್ಲಿ ಇಸ್ಹಾಕ್ ಬಜಾಲ್, ಮನ್ಸೂರ್ ಮಂಚಿಲ,ನಾಸೀರ್ ಅಹ್ಮದ್ ಸಾಮಣಿಗೆ, ಅಬ್ದುಲ್ ರಝಾಕ್ ಬಬ್ಬುಕಟ್ಫೆ, ಮೌಸೀರ್ ಅಹ್ಮದ್ ಸಾಮಣಿಗೆ, ಜಮಾತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ, ಉಸ್ಮಾನ್ ಕಲ್ಲಾಪು , ಬಂಧುತ್ವ ಚಾರಿಟೇಬಲ್ ಟ್ರಸ್ಟ್ ಟ್ರಸ್ಟೀ ಅಬ್ದುಲ್ ನಝೀರ್ ಮತ್ತಿತರರು ಉಪಸ್ಥಿತರಿದ್ದರು.
ಶಂಶೀರ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು.