ಉಳ್ಳಾಲ ಜುಮಾ ಮಸೀದಿ, ದರ್ಗಾ ಸಮಿತಿಯಿಂದ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

Update: 2023-08-15 09:21 GMT

ಉಳ್ಳಾಲ: ಇಲ್ಲಿನ ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಮತ್ತು ‌ಸೆಯ್ಯಿದ್ ಮದನಿ ದರ್ಗಾ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ದರ್ಗಾ ವಠಾರದಲ್ಲಿ ಆಚರಿಸಲಾಯಿತು.

ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಧ್ವಜಾರೋಹಣ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಈ ದೇಶ ಏಳುನೂರು ವರ್ಷ ಗಳ ಕಾಲ ಸಂಪನ್ಮೂಲ ಆಗಿತ್ತು.ಈ ಕಾಲದಲ್ಲಿ ಬ್ರಿಟಿಷರು 1958 ಸ್ವಾತಂತ್ರ್ಯ ‌ಸಂಗ್ರಾಮ ಫೈಜಾಬಾದ್ ನೇತೃತ್ವದಲ್ಲಿ ಉಗಮವಾಯಿತು. ಅಬ್ದುಲ್ ಕಲಾಂ, ಲಾಲ್ ಬಹದ್ದೂರ್ ಶಾಸ್ತ್ರಿ ಸಹಿತ ಹಲವು ಹೋರಾಟಗಾರರು ಸ್ವಾತಂತ್ರ್ಯ ಕ್ಕಾಗಿ ಜೀವದ ಹಂಗು ತೊರೆದು ಹೋರಾಡಿದರು.

ಪ್ರಸಕ್ತ ಸಾಲಿನ ರಾಜ್ಯೋತ್ಸವ ನಾವು ಆಚರಣೆ ಮಾಡುತ್ತೇವೆ.ಆದರೆ ದೇಶ ರಕ್ಷಣಾ ವಲಯದಲ್ಲಿ ಎತ್ತ ಸಾಗುತ್ತಿದೆ ಎಂದು ನೋಡಬೇಕಾಗಿದೆ.ಬಹಳಷ್ಟು ರಾಷ್ಟ್ರಗಳ‌ ಸಂಪರ್ಕ ಇಟ್ಟುಕೊಂಡಿರುವ ಭಾರತದಲ್ಲಿ ಜನಾಂಗೀಯ ಕಲಹ ನಡೆಯುತ್ತಿರುವುದು ‌ನೋವಿನ ಸಂಗತಿ.ಇಂತಹ ಕಲಹಗಳಿಗೆ ಅವಕಾಶ ನೀಡದೇ ನಾವು ಒಗ್ಗಟ್ಟಿನಿಂದ ಬಾಳೋಣ ಎಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತಾಡಿದ ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಸ್ವಾತಂತ್ರ್ಯ ಕ್ಕಾಗಿ ಬಹಳಷ್ಟು ಮುಸ್ಲಿಂ ನಾಯಕರು ಹೋರಾಟ ಮಾಡಿ ಶ್ರಮವಹಿಸಿದ್ದಾರೆ.ಆ ಕಾಲದಲ್ಲಿ ಜಾತಿ ಬೇಧ ಇರಲಿಲ್ಲ.ಎಲ್ಲರ ಗುರಿ ಒಂದೇ ಆಗಿತ್ತು.ಪ್ರಸಕ್ತ ಕಾಲಘಟ್ಟದಲ್ಲಿ ಅಭಿವೃದ್ಧಿ ಮತ್ತು ಐಕ್ಯತೆ ನಮ್ಮ ಗುರಿ ಆಗಬೇಕು.ಭಿನ್ನತೆ ಸೃಷ್ಟಿಸುವುದು ಯೋಗ್ಯ ಎನಿಸುವುದಿಲ್ಲ.ನಾವು ಉತ್ತಮ ಶಿಕ್ಷಣ ಪಡೆಯುವ ಮೂಲಕ ಒಗ್ಗಟ್ಟಿನಿಂದ ಬಾಳಬೇಕು ಎಂದು ಹೇಳಿದರು.

ಉಪಾಧ್ಯಕ್ಷ ಅಶ್ರಫ್ ರೈಟ್ವೇ ಮಾತನಾಡಿ, ಸ್ವಾಂತಂತ್ರ್ಯ ಕ್ಕಾಗಿ ಹೋರಾಟ ಮಾಡಿ ಜೀವ ಕೊಂಡವರ ಸಂಖ್ಯೆ ಬಹಳಷ್ಟು ಇದೆ.ಬ್ರಿಟಿಷರ ಕೈಯಿಂದ ಭಾರತವನ್ನು ಮುಕ್ತ ಮಾಡಿ ನಮಗೆ ಸ್ವಾತಂತ್ರ್ಯ ಒದಗಿಸಿ ಕೊಟ್ಟಿದ್ದಾರೆ. ಈ ಸ್ವಾತಂತ್ರ್ಯ ದ ಮಹತ್ವವನ್ನು ಅರಿತು ‌ಒಗ್ಗಟ್ಟಿನಿಂದ ಜೀವಿಸಬೇಕು.ಕಲಹಗಳಿಗೆ ಅವಕಾಶ ಕೊಡದೇ ಏಕತೆಯಿಂದ ಬದುಕೋಣ ಎಂದು ಕರೆ ನೀಡಿದರು.

ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಪ್ರಯುಕ್ತ ಭಾಷಣ ಸ್ಪರ್ಧೆ ‌ನಡೆಯಿತು.

ಕೇಂದ್ರ ಜುಮ್ಮಾ ಮಸೀದಿ ಖತೀಬರಾದ ಇಬ್ರಾಹಿಮ್ ಸಅದಿ ದುಆ ನೆರವೇರಿಸಿದರು.

ಸಯ್ಯಿದ್ ಮದನಿ ಅರಬಿಕ್ ಕಾಲೇಜು ಪ್ರಾಂಶುಪಾಲರಾದ ಅಹ್ಮದ್ ಕುಟ್ಟಿ ಸಖಾಫಿ, ದರ್ಗಾ ಅಧ್ಯಕ್ಷರಾದ ಬಿ.ಜಿ ಹನೀಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ, ಉಪಾಧ್ಯಕ್ಷರುಗಳಾದ ಅಶ್ರಫ್ ಅಹ್ಮದ್ ರೈಟ್ಚೇ, ಹಸೈನಾರ್ ಕೋಟೆಪುರ, ಕೊಶಾಧಿಕಾರಿ ನಾಝಿಮ್ ರಹ್ಮಾನ್, ಜತೆ ಕಾರ್ಯದರ್ಶಿಗಳಾದ ಇಸಾಕ್ ಮೇಲಂಗಡಿ, ಮುಸ್ತಫ ಮದನಿ ನಗರ, ಅಡಿಟರ್ ಫಾರೂಕ್ ಕಲ್ಲಾಪು ಉಪಸ್ಥಿತರಿದ್ದರು.

ಸಯ್ಯಿದ್ ಮದನಿ ಶರೀಯತ್ ಕಾಲೇಜು,ದಅವಾ ಕಾಲೇಜು ಪ್ರೊಫೆಸರ್ ಗಳು, ವಿದ್ಯಾರ್ಥಿಗಳು, ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News