ಇಂದಿರಾ ಗಾಂಧಿಯ ಪುಣ್ಯ ತಿಥಿ-ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಜನ್ಮ ದಿನಾಚರಣೆ

Update: 2023-10-31 14:27 GMT

ಮಂಗಳೂರು : ವಿಶ್ವದಲ್ಲಿ ಭಾರತ ಶಕ್ತಿಶಾಲಿಯಾಗಿ ನಿಲ್ಲಲು ಕಾರಣಕರ್ತರಾದ ಇಂದಿರಾ ಗಾಂಧಿಯ ಕೊಡುಗೆಗಳು ಸ್ಮರಣೀಯ. ದೇಶದ ಏಕತೆ, ಅಖಂಡತೆಗಾಗಿ ಪ್ರಾಣ ತ್ಯಾಗ ಮಾಡಿರುವ ಅವರು ಭಾರತೀಯರ ಹೃದಯದಲ್ಲಿ ಸದಾ ಅಮರರಾಗಿದ್ದಾರೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಪುಣ್ಯತಿಥಿ ಹಾಗೂ ಮಾಜಿ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್‌ರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾತ್ಮ ಗಾಂಧಿ, ನೆಹರೂ, ಇಂದಿರಾ ಗಾಂಧಿ ಅವರ ಹೆಸರನ್ನು ಇತಿಹಾಸ ಪುಟದಿಂದ ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ. ಇಂದಿರಾ ಗಾಂಧಿ ಭಾರತದ ಪ್ರಧಾನಿಯಾಗಿದ್ದಾಗ ದೇಶವನ್ನು ಎತ್ತರಕ್ಕೆ ಕೊಂಡೊಯ್ದರು. ಹಸಿರು ಕ್ರಾಂತಿ, ಶ್ವೇತ ಕ್ರಾಂತಿ, ನೀಲ ಕ್ರಾಂತಿ, ಜೀತ ಪದ್ಧತಿ ನಿರ್ಮೂಲನೆ, ರಾಜಧನ ರದ್ಧತಿ, ಬಾಂಗ್ಲಾ ವಿಮೋಚನೆ, ಬ್ಯಾಂಕುಗಳ ರಾಷ್ಟ್ರೀಕರಣ, ಶಿಮ್ಲಾ ಒಪ್ಪಂದ, ಆರ್ಥಿಕತೆಗೆ ಉತ್ತೇಜನ, ಆಹಾರ ಉತ್ಪಾದನಾ ಕ್ಷೇತ್ರಕ್ಕೆ ಒತ್ತು ನೀಡಿ ಜನಪ್ರಿಯವಾಗಿ ದ್ದರು. ಅಣು ಯೋಜನೆಯಲ್ಲಿ ಭಾರತ ಸಶಕ್ತವಾಗಬೇಕು ಎಂಬ ನೆಹರೂ ಅವರ ಆಲೋಚನೆಯನ್ನು ಇಂದಿರಾ ಗಾಂಧಿ ಸಾಕಾರಗೊಳಿಸಿ ವಿಶ್ವಕ್ಕೆ ಭಾರತದ ಶಕ್ತಿಯನ್ನು ಮೊದಲ ಬಾರಿಗೆ ಪರಿಚಯಿಸಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಕಾರಣರಾದರು ಎಂದು ಹರೀಶ್ ಕುಮಾರ್ ಹೇಳಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ೪೯ನೇ ಅಧ್ಯಕ್ಷರಾಗಿ, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಕ್ರಿಯ ನಾಯಕತ್ವ ವಹಿ ಸಿದ ಉಕ್ಕಿನ ಮನುಷ್ಯ ‘ಭಾರತ ರತ್ನ’ ಸರ್ದಾರ್ ವಲ್ಲಭಭಾಯ್ ಪಟೇಲ್ ಭಾರತದ ಗಣರಾಜ್ಯ ಸ್ಥಾಪನೆ ಮತ್ತು ಏಕೀಕರಣದಲ್ಲಿ ಬಹುಮುಖ್ಯ ಪಾತ್ರ ವಹಿಸಿ ಸ್ವತಂತ್ರ ಭಾರತವನ್ನು ಅಖಂಡ ಭಾರತವಾಗಿಸಲು ಶ್ರಮಿಸಿದರು ಎಂದು ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹೀಂ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿದರು. ಪಕ್ಷದ ಮುಖಂಡರಾದ ಇಬ್ರಾಹೀಂ ಕೋಡಿಜಾಲ್, ಸುರೇಶ್ ಬಳ್ಳಾಲ್, ಲುಕ್ಮಾನ್ ಬಂಟ್ವಾಳ್, ವಿವೇಕ್‌ರಾಜ್ ಪೂಜಾರಿ, ಶಾಹುಲ್ ಹಮೀದ್, ವಿಶ್ವಾಸ್ ಕುಮಾರ್ ದಾಸ್, ಬಿ.ಎಂ.ಅಬ್ಬಾಸ್ ಅಲಿ, ಸುದರ್ಶನ್ ಜೈನ್, ಕೆ.ಅಪ್ಪಿ, ಪೂರ್ಣೇಶ್ ಭಂಡಾರಿ, ನೀರಜ್ ಚಂದ್ರಪಾಲ್, ಜೆ.ಅಬ್ದುಲ್ ಸಲೀಂ, ಪದ್ಮನಾಭ ಅಮೀನ್, ಟಿ.ಹೊನ್ನಯ್ಯ, ಮುರಳಿಧರ್ ರೈ, ಟಿ.ಕೆ. ಸುಧೀರ್, ಸುಹಾನ್ ಆಳ್ವ, ಜಯಶೀಲ ಅಡ್ಯಂತಾಯ, ಆರಿಫ್ ಬಾವ, ಪ್ರಕಾಶ್ ಆಲ್ವಿನ್, ಸುರೇಶ್ ಪೂಜಾರಿ, ಲಕ್ಷ್ಮಿ ನಾಯರ್, ರಥಿಕಲಾ, ಮಮತಾ ಶೆಟ್ಟಿ, ಭಾಸ್ಕರ್ ರಾವ್, ಗಿರೀಶ್ ಶೆಟ್ಟಿ, ದುರ್ಗಪ್ರಸಾದ್, ಶಾಂತಲಾ ಗಟ್ಟಿ, ಚಂದ್ರಕಲಾ ಜೋಗಿ, ಮಂಜುಳಾ ನಾಯಕ್, ಧರ್ಮಾನಂದ ಶೆಟ್ಟಿಗಾರ್, ಯೋಗಿಶ್ ಕುಮಾರ್, ಯೋಗಿಶ್ ನಾಯಕ್, ಮಲ್ಲಿಕಾರ್ಜುನ ಕೋಡಿಕಲ್, ಗೀತಾ ಅತ್ತಾವರ, ಸತೀಶ್ ಪೆಂಗಲ್, ಆಸಿಫ್ ಬೆಂಗ್ರೆ, ಹೈದರ್ ಬೋಳಾರ್, ಲಕ್ಷ್ಮಣ್ ಶೆಟ್ಟಿ, ಫಯಾಝ್ ಅಮ್ಮೆಮ್ಮಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News