ಕಲ್ಲಡ್ಕ : ಮಾದಕ ವಿರೋಧಿ ಅಭಿಯಾನ ಪ್ರತೀ ಮೊಹಲ್ಲಾ ಕೇಂದ್ರೀಕರಿಸಿ ಜಾಗೃತಿ ಅಗತ್ಯ- ಅನೀಸ್ ಕೌಸರಿ

Update: 2023-09-03 17:18 GMT

ಬಂಟ್ವಾಳ : ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿ ವತಿಯಿಂದ ಮಾದಕ ವಿರೋಧಿ ಅಭಿಯಾನ ಕಾರ್ಯಕ್ರಮ ರವಿವಾರ ಮಸೀದಿ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕಲ್ಲಡ್ಕ ಕೇಂದ್ರ ಜುಮಾ ಮಸೀದಿ ಖತೀಬ್ ಉಸ್ಮಾನ್ ದಾರಿಮಿ ಉದ್ಘಾಟಿಸಿದರು. ಮುಹಿಯುದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ ಅನೀಸ್ ಕೌಸರಿ ಮಾತನಾಡಿ , ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ವ್ಯಾಪಕವಾಗುತ್ತಿದ್ದು, ಪ್ರತಿಯೊಂದು ಮೊಹಲ್ಲಾದಲ್ಲಿ ಇದರ ಬಗ್ಗೆ ಎಲ್ಲರೂ ಜಾಗೃತರಾಗಿ ಪರಿಶ್ರಮಿಸಿದರೆ ಖಂಡಿತಾ ಮಾದಕ ವಸ್ತುಗಳ ನಿರ್ಮೂಲನೆ ಸಾಧ್ಯ ಎಂದರು.

ಮಸೀದಿ ಆಡಳಿತ ಸಮಿತಿ ಉಪಾಧ್ಯಕ್ಷ ಶಾಫಿ ಹಾಜಿ, ಕೋಶಾಧಿಕಾರಿ ಯೂಸುಫ್ ಅಮರ್, ಜೊತೆ ಕಾರ್ಯದರ್ಶಿಗಳಾದ ಸಾದಿಕ್, ನವಾಝ್ ಕೆ.ಎನ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸ್ಥಳೀಯ ಮಸೀದಿಯ ಧರ್ಮ ಗುರುಗಳು, ಮದರಸ ಅಧ್ಯಾಪಕರುಗಳು, ಜಮಾಅತ್ ಬಾಂಧವರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಾಹೇಬ್ ಸ್ವಾಗತಿಸಿ, ಮದ್ರಸಾ ಮುಖ್ಯ ಶಿಕ್ಷಕ ಲತೀಫ್ ದಾರಿಮಿ ದು:ಹಾ ನೆರವೇರಿಸಿದರು, ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News